ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಕನಗಲಾ ಇಂಡಸ್ರ್ಟಿಯಲ್ ಏರಿಯಾ ದಲ್ಲಿ (ಸ್ವಯಂ ನಿರ್ವಹಣೆಯಲ್ಲಿ, ಕೆಐಎಡಿಬಿ) ಹೊಸದಾಗಿ ನಿರ್ಮಿಸಿರುವ ೨೨೦/೧೧೦ಕೆವಿ ವಿದ್ಯುತ್ ಸ್ವಿಕರಣಾ ಕೇಂದ್ರದಿಂದ ಹಾಲಿ ಚಾಲ್ತಿಯಲ್ಲಿರುವ ೨೨೦ಕೆವಿ ಬೆಳಗಾವಿ ಚಿಕ್ಕೋಡಿ ಜೋಡಿ ಗೋಪುರಗಳ ಮೇಲೆ ೦.೪೫ ಕಿಮಿ ಉದ್ದದ ೨೨೦ ಕಿ.ವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ. ಸದರಿ ೨೨೦ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಹುಕ್ಕೇರಿ ತಾಲೂಕಿನ ಕನಗಲಾ ಇಂಡಸ್ರ್ಟಿಯಲ್ ಏರಿಯಾ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಮಾ.೨೭, ೨೦೨೩ ರಂದು ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವದು ಕಾರಣ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ ಅಥವಾ ತಂತಿಗಳನ್ನು ಮುಟ್ಟುವುದಾಗಲಿ ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಇವುಗಳನ್ನು ಮಾಡಬಾರದು.
ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ