Kannada NewsLatest

120ಕ್ಕೂ ಅಧಿಕ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್ ಹೆಮ್ಮಾರಿಯ ಎರಡನೇ ಅಲೆಯು ಜನರನ್ನು ಬಾಧಿಸಿ ಪ್ರಾಣಾಪಾಯಕ್ಕೆ ಕಾರಣವಾಗಿದ್ದಲ್ಲದೇ ಗುಣಮುಖರಾದರೂ ಬ್ಲ್ಯಾಕ್ ಪಂಗಸ್ ನಂತಹ ಶಿಲೀಂದ್ರ ಸೋಂಕಿಗೆ ಒಳಗಾಗುವಂತೆ ಮಾಡಿದೆ. ಇಂತಹ ಬ್ಲ್ಯಾಕ್ ಫಂಗಸ್ ಗೆ ಒಳಗಾದ ಹಲವರು ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೇ 5ರಂದು ಬ್ಲ್ಯಾಕ್ ಫಂಗಸ್ ರೋಗಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಇಲ್ಲಿಯವರೆಗೆ ಸುಮಾರು 120ಕ್ಕೂ ಅಧಿಕ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಅವರನ್ನು ಪ್ರಾಣಾಪಾಯದಿಂದ ಪಾರುಮಾಡುವಲ್ಲಿ ಹಾಗೂ ಕೋವಿಡ್ ಸೋಂಕಿಗೆ ಒಳಗಾಗಿದ್ದ 115ಕ್ಕೂ ಅಧಿಕ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

ಕಿವಿ, ಮೂಗು ಹಾಗೂ ಗಂಟಲು ತಜ್ಞವೈದ್ಯರಾದ ಡಾ. ಅನಿಲ ಹಾರುಗೊಪ್ಪ ಹಾಗೂ ನೇತ್ರ ತಜ್ಞವೈದ್ಯರಾದ ಡಾ.ಅರವಿಂದ ತೆನಗಿ ಅವರ ಮುಂದಾಳತ್ವದಲ್ಲಿ 76 ಜನರು ಸೈನಸ್, 35 ರೋಗಿಗಳು ಕಣ್ಣು, 8 ರೋಗಿಗಳ ಮೆದುಳಿಗೆ ಕಪ್ಪು ಶಿಲೀಂದ್ರ ತಗಲಿತ್ತು. ಅವರಲ್ಲಿ ಮೂವರ ಕಣ್ಣುಗಳನ್ನು ತೆಗೆದರೆ ನಾಲ್ಕುರೋಗಿಗಳ ಅಂಗಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಲಾಯಿತು.

95ಕ್ಕೂ ಅಧಿಕ ಜನ ಗುಣಮುಖಗೊಂಡು ಮರಳಿ ಮನೆಗೆ ತೆರಳಿದ್ದಾರೆ. ಪ್ರತಿಯೊಂದು ರೋಗಿಗೆ ಎರಡು ಮೈಕ್ರೊಡಿಬ್ರೈಡರ್ ಮೂಲಕ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. 50 ವರ್ಷದ ವ್ಯಕ್ತಿಗೆ ಕಪ್ಪುಶಿಲೀಂದ್ರ ಸೋಂಕು ಮೆದುಳಿಗೆ ತಗುಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ನರ ಶಸ್ತ್ರಚಿಕಿತ್ಸಕರಾದ ಡಾ. ಪ್ರಕಾಶ ಮಹಾಂತ ಶೆಟ್ಟಿ ಅವರ ತಂಡವು ಸಿಟಿ ಸ್ಕ್ಯಾನ್ ಮೂಲಕ ಪರೀಕ್ಷಿಸಿದಾಗ ಕಪ್ಪುಶಿಲೀಂದ್ರವು ಸೈನಸ್ ನೊಳಗೂ ಮೆದುಳಿಗೂ ಹರಡಿರುವದು ಕಂಡುಬಂದಿತು. ತಕ್ಷಣ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕಪ್ಪುಶಿಲೀಂದ್ರ ಸೋಂಕಿಗೆ ಒಳಗಾಗಿದ್ದ ಭಾಗವನ್ನು ಹೊರತೆಗೆದು ವ್ಯಕ್ತಿಯ ಜೀವ ಉಳಿಸುವಲ್ಲಿ ಯಶಸ್ವಿಯಾದರು.

ಉಚಿತ ಸುರಕ್ಷಿತ ಹೆರಿಗೆ:
115ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸುರಕ್ಷಿತ ಹೆರಿಗೆ ಮೂಲಕ ತಾಯಿ ಮತ್ತು ಮಗುವಿನ ಆರೋಗ್ಯ ಅತ್ಯಂತ ಸವಾಲಿನ ಕೆಲಸವಾಗಿತ್ತು. ಅದರಲ್ಲಿ 72 ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದ ಗರ್ಭಣಿಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗಿದೆ.

ದಾಖಲಾದ ಕೋವಿಡ್ ಸೋಂಕಿತ ಮಹಿಳೆಯರು ಆರೋಗ್ಯಯುತವಾಗಿ ಮರಳಿ ಮಗುವಿನ ಮೂಲಕ ಮನೆಗೆ ತೆರಳಿದ್ದಾರೆ. ಕೋವಿಡ್ ಸೋಂಕಿಗೆ ಒಳಗಾಗಿ ಬೇರೆ ಖಾಯಿಲೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.

ಕಿವಿ, ಮೂಗು, ಗಂಟಲು ತಜ್ಞವೈದ್ಯರಾದ ಡಾ. ಅನಿಲಹಾರುಗೊಪ್ಪ, ಡಾ.ಶಮಾಬೆಲ್ಲದ, ಡಾ.ಪುನೀತನಾಯಕ, ಡಾ.ಪ್ರೀತಿಹಜಾರೆ, ಡಾ.ಪ್ರೀತಿಶೆಟ್ಟಿ, ನೇತ್ರ ತಜ್ಞವೈದ್ಯರಾದ ಡಾ.ಅರವಿಂದ ತೆನಗಿ, ನರ ಶಸ್ತ್ರಚಿಕಿತ್ಸಕರಾದ ಡಾ.ಪ್ರಕಾಶಮಹಾಂತಶೆಟ್ಟಿ, ಡಾ.ಅಭಿಷೇಕ ಪಾಟೀಲ, ಡಾ.ವಿಕ್ರಮ, ಡಾ.ಪ್ರಕಾಶರಾತೋಡ, ಅರವಳಿಕೆ ತಜ್ಞವೈದ್ಯರು ಸೇರಿದಂತೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ತಂಡವನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರಕೋರೆ, ಕಾಹೆರನ ಕುಲಪತಿ, ಕುಲಸಚಿವರಾದಡಾ. ವಿಎ ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯನಿರ್ದೇಶಕರಾದ ಡಾ. ಎಂವಿ ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಆರಿಫ್ಮಾಲ್ದಾರ ಅವರು ಅಭಿನಂದಿಸಿದ್ದಾರೆ.

ವಿಧಾನಸೌಧ ಆವರಣದಲ್ಲಿ ಬಸವಣ್ಣ ಪುತ್ಥಳಿ ಸ್ವಾಗತಾರ್ಹ ಕ್ರಮ: ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button