ದೇಶದ ನಾಗರೀಕರ ರಕ್ಷಣೆ ನಮ್ಮ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯ; ಜ್ಯೂ.ಲೀಡರ್ ವಿಂಗ್ ಕಮಾಂಡರ್ ಪರಮದೀಪ ಸಿಂಗ್ ಬಾಜ್ವಾ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಿಲಟರಿ ಮತ್ತು ವೈದ್ಯಕೀಯ ಸಿಬ್ಬಂದಿಗಳ ಮುಖ್ಯ ಕರ್ತವ್ಯ ನಾಗರೀಕರ ರಕ್ಷಣೆ. ದೇಶದ ರಕ್ಷಣೆಗೆ ಸದಾ ಹಗಲಿರುಳು ಮಿಲಟರಿ ಶ್ರಮಿಸುತ್ತಿದ್ದರೆ, ವೈದ್ಯಕೀಯ ಸಿಬ್ಬಂದಿಯು ಯಾವುದೇ ಜಾತಿ ಬೇಧ ಭಾವ ಎನ್ನದೇ ಚಿಕಿತ್ಸೆ ನೀಡುತ್ತ ಸಮಾಜದ ಪ್ರತಿಯೊಬ್ಬರ ಆರೋಗ್ಯ ಕಾಳಜಿಯಲ್ಲಿ ತೊಡಗಿಕೊಂಡಿರುವ ಕಾರ್ಯ ಅತ್ಯಂತ ಶ್ಲಾಘನೀಯ. ಮುಖ್ಯವಾಗಿ ದೇಶದ ನಾಗರೀಕರ ರಕ್ಷಣೆ ನಮ್ಮ ಜವಾಬ್ದಾರಿ ಹಾಗೂ ಆದ್ಯ ಕರ್ತವ್ಯ ಎಂದು ಮರಾಠಾ ಲೈಟ್ ಇನ್ಫೆಂಟ್ರಿಯ ಜ್ಯೂ. ಲೀಡರ್ ವಿಂಗ ಕಮಾಂಡರ್ ಮೇ. ಆ. ಪರಮದೀಪ ಸಿಂಗ್ ಬಾಜ್ವಾ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹನ ನೆರವೇರಿಸಿ ಮಾತನಾಡಿದ ಅವರು, ಕೋವಿಡ್ ಮಹಾಮಾರಿ ನಮಗೆ ಒಂದು ಸವಾಲಾಗಿ ಪರಿಣಮಿಸಿತು. ಆದರೆ ವೈದ್ಯಕೀಯ ಸಿಬ್ಬಂದಿ ಧೃತಿಗೆಡದೇ ಚಿಕಿತ್ಸೆ ನೀಡುವಲ್ಲಿ ನಿರತವಾಯಿತು. ಪ್ರತಿಯೊಬ್ಬರು ದೇಶದ ಅಭಿವೃದ್ದಿಗಾಗಿ ಶ್ರಮಪಡಬೇಕಾಗಿದೆ. ವೈದ್ಯರು ಯಾವುದೇ ವೈರಿಗಳಿಗೂ ಕೂಡ ಚಿಕಿತ್ಸೆ ನೀಡುತ್ತಾರೆ. ಆದರೆ ಮಿಲಟರಿಯವರು ವೈರಿಯನ್ನು ಸೆದೆಬಡಿಯುತ್ತಾರೆ. ನಮ್ಮ ನೆರಹೊರೆಯವರ ಜೊತೆ ಅನೇಕ ಯುದ್ದಗಳಾಗಿವೆ. ಆದರೆ ಗಡಿಯಲ್ಲಿ ನಾವು ನಮ್ಮ ಸೇವೆಯನ್ನು ಸಲ್ಲಿಸಬೆಕಾಗುತ್ತದೆ. ಆದರೆ ವೈದ್ರ ಸೇವೆ ಕೇವಲ ಜೀವ ಉಳಿಸುವ ಕರ‍್ಯ. ಗಡಿಯಲ್ಲಿನ ಯುದ್ದಂತೆ ವೈದ್ಯಕೀಯ ಯುದ್ದವಲ್ಲ. ಯಾವುದೇ ರೀತಿಯ ಜೈವಿಕ ಯುದ್ದಕ್ಕೂ ವೈದ್ಯಕೀಯ ಸಿಬ್ಬಂದಿ ಸನ್ನದ್ದವಾಗಿ ನಿಂತು ಹೋರಾಟ ನಡೆಸಬೇಕಾಗುತ್ತದೆ. ಅದೇ ನಮಗೆ ಮತ್ತು ವೈದ್ಯರಿಗೂ ಇರುವ ವ್ಯತ್ಯಾಸ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೆಎಲ್‌ಇ ವಿಶ್ವವಿದ್ಯಾಲಯದ (ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ ಆ್ಯಂಡ್ ರಿಸರ್ಚ) ಕುಲಪತಿ ಡಾ. ವಿವೇಕ ಸಾವೋಜಿ ಅವರು ಮಾತನಾಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಅವರು ಮಾತನಾಡಿ, ಅಮೇರಿಕೆಯ ಲೈಫ್ ಫಾರ ಚೈಲ್ಡ್ ಹಾಗೂ ಆಸ್ಟ್ರೇಲಿಯಾದ ಇಂಟರನ್ಯಾಶನಲ್ ಡಯಾಬಿಟಿಸ್ ಫೆಡರೇಶನ್ ಜಂಟಿಯಾಗಿ ಡಯಾಬಿಟಿಸ್ ಮಕ್ಕಳನ್ನು ಕೋವಿಡ್ನಿಂದ ರಕ್ಷಿಸಲು ಸಹಕಾರಿಯಾಗುವಂತೆ 16 ಲಕ್ಷ 1 ಸಾವಿರ ರೂ.ಗಳ ಮೌಲ್ಯದ ವೈದ್ಯಕೀಯ ಸಲಕರಣೆಗಳನ್ನು ನೀಡಿವೆ. ಡಾ. ಸುಜಾತಾ ಜಾಲಿ ಹಾಗೂ ಅವರ ತಂಡವು ಮಧುಮೇಹ ಪೀಡಿತ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡಿರವದನ್ನು ಪರಿಗಣಿಸಿ ಈ ಧನಸಹಾಯವನ್ನು ನೀಡಿವೆ. ಇದರಲ್ಲಿ 6 ಲಕ್ಷ ಮೌಲ್ಯದ ಸಿಪ್ಯಾಪ್ ಯಂತ್ರವನ್ನು ಚಾರಿಟೇಬಲ್ ಆಸ್ಪತ್ರೆಯ ಮಕ್ಕಳ ವಾರ್ಡಗೆ, 1 ಸಿಪ್ಯಾಪ ಹಾಗೂ 2 ಡ್ಯುರಾ ಸಿಲಿಂಡರ( ಪ್ರತಿಯೊಂದಕ್ಕೆ 6 ಲಕ್ಷ) ಹಾಗೂ 4 ಲಕ್ಷ ಮೌಲ್ಯದ 630 ಮಕಗ್ಕಳಿಗೆ ಕೋವಿಶೀಲ್ಡ ವ್ಯಾಕ್ಸಿನ್ ಚಿಕ್ಕೋಡಿ ಆಸ್ಪತ್ರೆಗೆ ನೀಡಲಾಗಿದೆ. ಕೋವಿಡ್ ಮಕ್ಕಳ ಚಿಕಿತ್ಸೆಗಾಗಿ ವೈದ್ಯಕೀಯ ಸಲಕರಣೆಗಳ ಅತ್ಯಾಧುನಿಕ ತೀವ್ರ ನಿಗಾ ಘಟಕ 10 ಸೇರಿದಂತೆ 30 ಹಾಸಿಗೆಗಳ ವಾರ್ಡ ಅನ್ನು ಮೀಸಲಿರಿಸಲಾಗಿದೆ. 4200ಕ್ಕೂ ಅಧಿಕ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 175 ಬ್ಲ್ಯಾಕ್ ಫಂಗಸ್ ಶಸ್ತ್ರಚಿಕಿತ್ಸೆ, 4 ಸಾವಿರ ಕಿಡ್ನಿ ರೋಗಿಗಳಿಗೆ ಉಚಿತ ಡಯಾಲಿಸಿಸ್ ಮಾಡಲಾಗಿದೆ ಎಂದು ವಿವರಿಸಿದರು.
ಆಸ್ಪತ್ರೆಯು ಹೊರತರುವ ವಿಶೇಷ ಸಂಚಿಕೆ ಲೈಪ್‌ಲೈನ್, ಮಧುಮೇಹ ವೈದ್ಯ, ಫೋಕಸ್ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಡಾ. ವಿ ಡಿ ಪಾಟೀಲ, ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿ ಎ ಕೋಠಿವಾಲೆ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯೆ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಆರ್ ಬಿ ನೇರ್ಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ