*ಜನವರಿ 12 ಮತ್ತು 13 ರಂದು ಕೆಎಲ್ಎಸ್ ಜಿ ಐ ಟಿ ಆರ್ಕಿಟೆಕ್ಚರ್ ವಿಭಾಗದ ರಜತ ಮಹೋತ್ಸವ ಸಮಾರಂಭ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಎಲ್ಎಸ್ ಜಿಆಯ್ ಟಿಯ ಆರ್ಕಿಟೆಕ್ಚರ್ (ವಾಸ್ತುಶಿಲ್ಪ) ವಿಭಾಗವು 25 ವರ್ಷಗಳ ಸಂಭ್ರಮಾಚರಣೆಯನ್ನು ಇದೆ ಜನವರಿ 12 ಮತ್ತು 13 ರಂದು ರೆಸೊನಾನ್ಸ್ – ಪ್ರತಿಧ್ವನಿ ಎಂಬ ವಿಶಿಷ್ಟ ಕಾರ್ಯಕ್ರಮದೊಂದಿಗೆ ಆಚರಿಸಲಿದೆ .
ಜನವರಿ 12 ರಂದು ಕಾರ್ಯಕ್ರಮದ ಭವ್ಯ ಉದ್ಘಾಟನೆಗೆ ಮುಖ್ಯ ಅತಿಥಿಯಾಗಿ, ಪ್ರತಿಭಾನ್ವಿತ ವಾಸ್ತುಶಿಲ್ಪಿ ಅಬಿನ್ ಚೌಧುರಿ, ಅಬಿನ್ ಡಿಸೈನ್ ಸ್ಟುಡಿಯೋ – ಇಂಡಿಯಾದ ಸಂಸ್ಥಾಪಕ ಮತ್ತು ಪ್ರಧಾನ ವಾಸ್ತುಶಿಲ್ಪಿ,. ಕೋಲ್ಕತ್ತಾ ಅವರು ಭಾಗವಹಿಸುವರು.
ವಾಸ್ತುಶಿಲ್ಪಿ , ಮೋಹನ್ ಬಿ.ಆರ್. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (ಐಐಎ), ಕರ್ನಾಟಕ ವಲಯದ ಅಧ್ಯಕ್ಷರು, ಈ ಸಂದರ್ಭದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂಧರ್ಭದಲ್ಲಿ ಆರ್ಕಿಟೆಕ್ಚರಲ್ ಕೋರ್ಸ್ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಪ್ರದರ್ಶನವನ್ನು ಪ್ರಸ್ತುತ ಪಡಿಸಲಿದ್ದು , ಇದನ್ನು ಮೋಹನ್ ಬಿ.ಆರ್ ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ . ಅನಂತ್ ಮಂಡಗಿ ಅವರು ವಹಿಸಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕ ಲಾ ಸೊಸೈಟಿಯ ಚೇರ್ಮನ್. ಪ್ರದೀಪ್ ಸಾವಕಾರ , ಕೆಎಲ್‌ಎಸ್ ಜಿಐಟಿ ಗವರ್ನಿಂಗ್ ಕೌನ್ಸಿಲ್ (ಎಂಎಎಂ), ಅಧ್ಯಕ್ಷರಾದ ಪ್ರಮೋದ ಎನ್. ಕಥಾವಿ, ಮತ್ತು ಕೆಎಲ್‌ಎಸ್ ಜಿಐಟಿ, (ಇಂಜಿನಿಯರಿಂಗ್) ಅಧ್ಯಕ್ಷರಾದ ರಾಜೇಂದ್ರ ಬೆಳಗಾಂವಕರ ಉಪಸ್ಥಿತಲಿರಲಿದ್ದಾರೆ.
ಜನವರಿ 13 ರಂದು ಅಭಿನಂದನಾ ಸಮಾರಂಭ ಹಾಗೂ 25 ವರ್ಷಗಳ ಯಶಸ್ಸಿಗೆ ಶ್ರಮಿಸಿದ ಹಿರಿಯ ಅಧ್ಯಾಪಕರನ್ನು ಗೌರವಿಸಿ , 2023 ಬ್ಯಾಚ್ ನ ಆರ್ಕಿಟೆಕ್ಚರ್ ಪದವಿ ಪಡೆದ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಸಂಭ್ರಮಾಚರಣೆಯೊಂದಿಗೆ ಕೊನೆಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ