ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ “ಪ್ರಭಾತಕಾರ ವಾ.ರಾ.ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ ” ಪ್ರದಾನ ಮಾಡಿ ಗೌರವಿಸಲಾಯಿತು.
ಮಹಾರಾಷ್ಟ್ರದ ಸಾಂಗಲಿ ಪಟ್ಟಣದಲ್ಲಿ ನಡೆದ ದಕ್ಷಿಣ ಭಾರತ ಜೈನ ಸಭೆಯ ತ್ರೈವಾರ್ಷಿಕ ಮಹಾ ಅಧಿವೇಶನದ ಶತಮಾನೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅದೇ ರೀತಿ ಕರ್ನಾಟಕ ಶ್ರವಣಬೆಳಗೊಳದ ಡಾ.ಸಿ.ಪಿ.ಕುಸಮಾ ಅವರಿಗೆ ಆಚಾರ್ಯ ಕುಂದ ಕುಂದ ಪ್ರಾಕೃತ ಗ್ರಂಥ ಸಂಶೋಧನ ಮತ್ತು ಲೇಖನ ಪುರಸ್ಕಾರ , ಮೈಸೂರಿನ ಮೋಹನ ಶಾಸ್ತಿç ಅವರಿಗೆ ಆಚಾರ್ಯ ಬಾಹುಬಲಿ ಕನ್ನಡ ಸಾಹಿತ್ಯ ಪುರಸ್ಕಾರ , ಬೆಂಗಳೂರಿನ ಡಾ.ಅಜೀತ ಮುರಗುಂಡೆ ಅವರಿಗೆ ಶ್ರೀ, ಬಾಳ ಪಾಟೀಲ ಸೋಷಲ ಕಲ್ಚರಲ್ ಅವೇರನೆಸ್ಸ ಆವಾರ್ಡ ಸೇರಿದಂತೆ ಇನ್ನಿತರರಿಗೆ ಪುರಸ್ಕಾರಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಹಾರಾಷ್ಟç ರಾಜ್ಯದ ಆರೋಗ್ಯ ಸಚಿವ ಹಾಗೂ ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ. ರಾಜೇಂದ್ರ ಶಾ.ಪಾಟೀಲ ಯಡ್ರಾವಕರ , ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ದಾದಾ ,ಚೇರಮನ್ ಆರ್.ಎ.ಪಾಟೀಲ, ಮುಖ್ಯಮಹಾಮಂತ್ರಿ ಡಾ.ಅಜೀತ ಪಾಟೀಲ, ಹಿರಿಯ ಉಪಾಧ್ಯಕ್ಷ ಭಾಲಚಂದ್ರ ಪಾಟೀಲ, ಉಪಾಧ್ಯಕ್ಷ ದತ್ತಾ ಡೋರ್ಲೆ, ಸಾಂಗಲಿ ಮಾಜಿ ಮಹಾಪೌರ ಸುರೇಶ ಪಾಟೀಲ, ಜಿ.ಜಿ.ಲೋಬೋಗೋಳ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪರಿಷತ್ ಚುನಾವಣೆ: ಶಸ್ತ್ರಾಸ್ತ್ರ ವಿನಾಯಿತಿ ನೀಡಲು ಜಿಲ್ಲಾಮಟ್ಟದ ಸ್ಕ್ರೀನಿಂಗ್ ಕಮಿಟಿ ರಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ