Kannada NewsLatest

ಚುನಾವಣೆ ಕರ್ತವ್ಯ ನಿರತ ಪೊಲೀಸ್ ಸಾವು; ಚುನಾವಣೆಯ ಸಮಗ್ರ ಮಾಹಿತಿ ಇಲ್ಲಿದೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ:  ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ 2,566 ಮತಗಟ್ಟೆಗಳಲ್ಲಿ ಏ.17ರಂದು ಉಪ ಚುನಾವಣೆ ಅಂಗವಾಗಿ ಮತದಾನ ನಡೆಯಲಿದೆ. ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶನಿವಾರ (ಏ.17) ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಮತದಾನಕ್ಕೆ ಅವಕಾಶವಿದೆ. ಭಾನುವಾರ (ಮೇ.2) ಮತದಾನದ ಎಣಿಕೆ ನಡೆಯಲಿದೆ. ಲೋಕಸಭಾ ಉಪ ಚುನಾವಣೆ ಕಣದಲ್ಲಿ ಒಟ್ಟು 10 ಅಭ್ಯರ್ಥಿಗಳಿದ್ದಾರೆ.

ಈ ಮಧ್ಯೆ, ಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮತಗಟ್ಟೆಗಳಿಗೆ ತೆರಳಿದ ಚುನಾವಣಾ ಸಿಬ್ಬಂದಿ:
ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಚುನಾವಣಾ ಸಿಬ್ಬಂದಿಗಳು ಆಯಾ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯ ಮಸ್ಟರಿಂಗ್ ಕೇಂದ್ರಗಳಿಂದ ಇ.ವಿ.ಎಮ್., ವಿವಿಪ್ಯಾಟ್ ಹಾಗೂ ಇತರ ಚುನಾವಣಾ ಸಾಮಗ್ರಿಗಳೊಂದಿಗೆ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ಶುಕ್ರವಾರ ಮಧ್ಯಾಹ್ನ ಸಾರಿಗೆ ಸಂಸ್ಥೆಯ ಬಸ್‍ಗಳ ಮೂಲಕ ತೆರಳಿದರು.

ಒಟ್ಟು ಮತದಾರರು 18,13,567 :

ವಿವಿಧ ಕ್ಷೇತ್ರಗಳನ್ನೊಳಗೊಂಡಂತೆ ಒಟ್ಟು 18,13,567 ಮತದಾರರಿದ್ದು, ಅದರಲ್ಲಿ 25,327 ಯುವ ಮತದಾರರಿದ್ದಾರೆ. 8,047 ಸೇವಾ ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಒಟ್ಟು 12,440 ವಿಶೇಷಚೇತನ ಮತದಾರರಿದ್ದಾರೆ.

ವಿಧಾನ ಸಭಾ ಮತಕ್ಷೇತ್ರವಾದ 08-ಅರಭಾವಿಯಲ್ಲಿ 1,20,503 ಪುರುಷ ಮತದಾರರಿದ್ದು, 1,19,500 ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ 9 ಆಗಿದ್ದು, ಈ ಮತಕ್ಷೇತ್ರದಲ್ಲಿ ಒಟ್ಟು 2,40,012 ಜನ ಮತದಾರರಿದ್ದಾರೆ.

ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ 1,23,538 ಪುರುಷ ಮತದಾರರಿದ್ದರೆ, 1,26,446 ಮಹಿಳಾ ಮತದಾರರಿದ್ದಾರೆ. ಇತರ ಮತದಾರರು 14 ಹಾಗೂ ಒಟ್ಟು 2,49,998 ಮತದಾರರಿದ್ದಾರೆ.

ಬೆಳಗಾವಿ ಉತ್ತರ ವಿಧಾನ ಸಭಾ ಮತಕ್ಷೇತ್ರದಲ್ಲಿ 1,20,502 ಪುರುಷ ಮತದಾರರು ಹಾಗೂ 1,22,105 ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ 11 ಆಗಿದ್ದು, ಒಟ್ಟು 2,42,618 ಮತದಾರರು ಈ ಕ್ಷೇತ್ರದಿಂದ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಅಂತೆಯೇ, ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ 1,22,705 ಪುರುಷ ಮತದಾರರು ಹಾಗೂ 1,20,316 ಮಹಿಳಾ ಮತದಾರರಿದ್ದಾರೆ. 6 ಜನ ಇತರ ಮತದಾರರಿದ್ದಾರೆ. 2,43,027 ಜನ ಒಟ್ಟು ಮತದಾರರಿದ್ದಾರೆ.

ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ 1,24,158 ಪುರುಷ ಮತದಾರರು ಹಾಗೂ 1,19,922 ಮಹಿಳಾ ಮತದಾರರಿದ್ದಾರೆ. 4 ಇತರ ಮತದಾರರಿದ್ದು, ಒಟ್ಟು 2,44,084 ಮತದಾರರು ಈ ಮತಕ್ಷೇತ್ರದಲ್ಲಿದ್ದಾರೆ.

ಬೈಲಹೊಂಗಲ ಮತಕ್ಷೇತ್ರವು 95,472 ಪುರುಷ ಮತದಾರರನ್ನು ಮತ್ತು 94,383 ಮಹಿಳಾ ಮತದಾರರನ್ನು ಹೊಂದಿದೆ. ಈ ಮತಕ್ಷೇತ್ರವು 3 ಇತರ ಮತದಾರರನ್ನು ಹೊಂದಿದ್ದು, ಒಟ್ಟು 1,89,858 ಮತದಾರರಿದ್ದಾರೆ.

ಸವದತ್ತಿ ಯಲ್ಲಮ್ಮ ವಿಧಾನ ಸಭಾ ಮತಕ್ಷೇತ್ರವು 99,145 ಪುರುಷ ಹಾಗೂ 98,239 ಮಹಿಳಾ ಮತದಾರರನ್ನು ಹೊಂದಿದೆ. ಈ ಕ್ಷೇತ್ರವು ಯಾವುದೇ ಇತರ ಮತದಾರರನ್ನು ಹೊಂದಿರುವುದಿಲ್ಲ. ಒಟ್ಟು 1,97,384 ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

ರಾಮದುರ್ಗ ಮತಕ್ಷೇತ್ರದಲ್ಲಿ 1,05,010 ಪುರುಷ ಮತದಾರರು ಮತ್ತು 1,01,565 ಮಹಿಳಾ ಮತದಾರರಿದ್ದಾರೆ. ಇತರ ಮತದಾರರ ಸಂಖ್ಯೆ 11 ಅಗಿದ್ದು, ಒಟ್ಟು ಮತದಾರರ ಸಂಖ್ಯೆ 2,06,586 ಆಗಿದೆ.

ಒಟ್ಟು 8 ಬೆಳಗಾವಿ ವಿಧಾನ ಸಭಾ ಮತಕ್ಷೇತ್ರಗಳಲ್ಲಿ, ಒಟ್ಟು 9,11,033 ಪುರುಷ ಮತದಾರರು ಹಾಗೂ ಒಟ್ಟು 9,02,476 ಮಹಿಳಾ ಮತದಾರರಿದ್ದಾರೆ. ಒಟ್ಟು 58 ಇತರ ಮತದಾರರನ್ನು ಒಳಗೊಂಡಂತೆ, 18,13,567 ಒಟ್ಟು ಮತದಾರರು ವಿವಿಧ ವಿಧಾನ ಸಭಾ ಮತಕ್ಷೇತ್ರಗಳಿಂದ ಮತ ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

8,047 ಒಟ್ಟು ಸೇವಾ ಮತದಾರರ ಸಂಖ್ಯೆ :

ಇನ್ನು ಸೇವಾ ಮತದಾರರ ವಿವರಗಳನ್ನು ಗಮನಿಸುವುದಾದರೆ, ಮೊದಲನೆಯದಾಗಿ 08-ಅರಭಾವಿ ವಿಧಾನ ಸಭಾ ಮತಕ್ಷೇತ್ರವು 933 ಪುರುಷ ಹಾಗೂ 21 ಮಹಿಳಾ ಮತದಾರರನ್ನು ಹೊಂದಿದ್ದು, ಒಟ್ಟು 954 ಸೇವಾ ಮತದಾರರನ್ನು ಹೊಂದಿದೆ. ಅದೇ ರೀತಿಯಾಗಿ, ಗೋಕಾಕ ಮತಕ್ಷೇತ್ರವು 1,769 ಪುರುಷ ಸೇವಾ ಮತದಾರರನ್ನು, 27 ಮಹಿಳಾ ಮತದಾರರನ್ನು ಹೊಂದಿದೆ. ಒಟ್ಟು 1,796 ಸೇವಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 312 ಪುರುಷ ಮತ್ತು 23 ಮಹಿಳಾ ಸೇವಾ ಮತದಾರರಿದ್ದಾರೆ. ಈ ಕ್ಷೇತ್ರವು ಒಟ್ಟು 335 ಸೇವಾ ಮತದಾರರನ್ನು ಹೊಂದಿದೆ. ಬೆಳಗಾವಿ ದಕ್ಷಿಣ ಭಾಗದಲ್ಲಿ 542 ಪುರುಷ ಸೇವಾ ಮತದಾರರು ಹಾಗೂ 37 ಮಹಿಳಾ ಸೇವಾ ಮತದಾರರು ಸೇರಿದಂತೆ ಒಟ್ಟು 579 ಸೇವಾ ಮತದಾರರಿದ್ದಾರೆ.

ಬೆಳಗಾವಿ ಗ್ರಾಮೀಣ ಭಾಗದಲ್ಲಿ 2,198 ಪುರುಷ ಮತ್ತು 102 ಮಹಿಳಾ ಸೇವಾ ಮತದಾರರಿದ್ದು, 2,300 ಒಟ್ಟು ಸೇವಾ ಮತದಾರರಿದ್ದಾರೆ. ಬೈಲಹೊಂಗಲ ಮತಕ್ಷೇತ್ರವು 952 ಪುರುಷ ಮತ್ತು 14 ಮಹಿಳಾ ಸೇವಾ ಮತದಾರರನ್ನು ಹೊಂದಿದ್ದು, 966 ಒಟ್ಟು ಸೇವಾ ಮತದಾರರನ್ನು ಒಳಗೊಂಡಿದೆ.

ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ 548 ಪುರುಷ ಸೇವಾ ಮತದಾರರು ಹಾಗೂ 11 ಮಹಿಳಾ ಸೇವಾ ಮತದಾರರು ಸೇರಿದಂತೆ ಒಟ್ಟು 559 ಸೇವಾ ಮತದಾರರು ಈ ಮತ ಕ್ಷೇತ್ರದಲ್ಲಿದ್ದಾರೆ.

ರಾಮದುರ್ಗ ಮತಕ್ಷೇತ್ರದಲ್ಲಿ 546 ಪುರುಷ ಹಾಗೂ 12 ಮಹಿಳಾ ಸೇವಾ ಮತದಾರರಿದ್ದು, 558 ಒಟ್ಟು ಸೇವಾ ಮತದಾರರಿದ್ದಾರೆ. ಒಟ್ಟು 8 ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಒಟ್ಟು ಪುರುಷ ಸೇವಾ ಮತದಾರರ ಸಂಖ್ಯೆ 7,800 ಹಾಗೂ ಮಹಿಳಾ ಸೇವಾ ಮತದಾರರ ಸಂಖ್ಯೆ 247 ಆಗಿದ್ದು, ಒಟ್ಟು ಸೇವಾ ಮತದಾರರ ಸಂಖ್ಯೆ 8,047 ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

25,327 ಒಟ್ಟು ಯುವ ಮತದಾರರ ಸಂಖ್ಯೆ :
ಇನ್ನು ಯುವ ಮತದಾರರ ವಿವರಗಳನ್ನು ಗಮನಿಸುವುದಾದರೆ, ಮೊದಲನೆಯದಾಗಿ 08-ಅರಭಾವಿ ವಿಧಾನ ಸಭಾ ಮತಕ್ಷೇತ್ರವು 2,288 ಪುರುಷ ಹಾಗೂ 1,287 ಮಹಿಳಾ ಮತದಾರರನ್ನು ಹೊಂದಿದ್ದು, ಒಟ್ಟು 3,575 ಯುವ ಮತದಾರರನ್ನು ಹೊಂದಿದೆ.

ಗೋಕಾಕ ಮತಕ್ಷೇತ್ರವು 2,317 ಪುರುಷ ಯುವ ಮತದಾರರನ್ನು, 1,518 ಮಹಿಳಾ ಮತದಾರರನ್ನು ಹೊಂದಿದೆ. ಒಟ್ಟು 3,836 ಯುವ ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ 1,173 ಪುರುಷ ಮತ್ತು 1,204 ಮಹಿಳಾ ಯುವ ಮತದಾರರಿದ್ದಾರೆ. ಈ ಕ್ಷೇತ್ರವು ಒಟ್ಟು 2,377 ಯುವ ಮತದಾರರನ್ನು ಹೊಂದಿದೆ.

ಬೆಳಗಾವಿ ದಕ್ಷಿಣ ಭಾಗದಲ್ಲಿ 1,024 ಪುರುಷ ಯುವ ಮತದಾರರು ಹಾಗೂ 782 ಮಹಿಳಾ ಯುವ ಮತದಾರರು ಸೇರಿದಂತೆ ಒಟ್ಟು 1,806 ಯುವ ಮತದಾರರಿದ್ದಾರೆ. ಬೆಳಗಾವಿ ಗ್ರಾಮೀಣ ಭಾಗದಲ್ಲಿ 1,889 ಪುರುಷ ಮತ್ತು 1,155 ಮಹಿಳಾ ಯುವ ಮತದಾರರಿದ್ದು, 3,045 ಒಟ್ಟು ಯುವ ಮತದಾರರಿದ್ದಾರೆ.

ಬೈಲಹೊಂಗಲ ಮತಕ್ಷೇತ್ರವು 1,892 ಪುರುಷ ಮತ್ತು 1,219 ಮಹಿಳಾ ಯುವ ಮತದಾರರನ್ನು ಹೊಂದಿದ್ದು, 3,111 ಒಟ್ಟು ಯುವ ಮತದಾರರನ್ನು ಒಳಗೊಂಡಿದೆ. ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ 2,301 ಪುರುಷ ಯುವ ಮತದಾರರು ಹಾಗೂ 1,419 ಮಹಿಳಾ ಯುವ ಮತದಾರರು ಸೇರಿದಂತೆ ಒಟ್ಟು 3,720 ಯುವ ಮತದಾರರು ಈ ಮತ ಕ್ಷೇತ್ರದಲ್ಲಿದ್ದಾರೆ.

ರಾಮದುರ್ಗ ಮತಕ್ಷೇತ್ರದಲ್ಲಿ 2,408 ಪುರುಷ ಹಾಗೂ 1,448 ಮಹಿಳಾ ಯುವ ಮತದಾರರಿದ್ದು, 3,857 ಯುವ ಒಟ್ಟು ಯುವ ಮತದಾರರಿದ್ದಾರೆ. ಒಟ್ಟು 8 ವಿಧಾನ ಸಭಾ ಮತಕ್ಷೇತ್ರಗಳಲ್ಲಿ ಒಟ್ಟು ಪುರುಷ ಯುವ ಮತದಾರರ ಸಂಖ್ಯೆ 15,292 ಹಾಗೂ ಮಹಿಳಾ ಯುವ ಮತದಾರರ ಸಂಖ್ಯೆ 10,032 ಆಗಿದ್ದು, ಒಟ್ಟು ಯುವ ಮತದಾರರ ಸಂಖ್ಯೆ 25,327 ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಒಟ್ಟು 2,566 ಮತಗಟ್ಟೆಗಳು:

ಇನ್ನು, ಒಟ್ಟು 2,566 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, 2,064 ಮುಖ್ಯ ಮತಗಟ್ಟೆಗಳಾದರೆ, 502 ಉಪ ಮತಗಟ್ಟೆಗಳಾಗಿವೆ. ಇವುಗಳಲ್ಲಿ 587 ಸೂಕ್ಷ್ಮ ಹಾಗೂ 118 (ವಲ್ನರೇಬಲ್) ದುರ್ಬಲ ಮತಗಟ್ಟೆಗಳಿವೆ. 2,566 ಮತಗಟ್ಟೆಗಳ ಪೈಕಿ 1,283 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ ಹಾಗೂ 159 ಮತಗಟ್ಟೆಗಳು ವಿಡಿಯೋಗ್ರಾಫಿ ವ್ಯವಸ್ಥೆಯನ್ನು ಹೊಂದಿವೆ.

ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16 ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.ಲೋಕಸಭಾ ಉಪ ಚುನಾವಣಾ ಮತಗಟ್ಟೆಗಳಲ್ಲಿ ರ್ಯಾಂಪ್, ವ್ಹೀಲ್ ಚೇರ್, ಮ್ಯಾಗ್ನಿಫಾಯಿಂಗ್ ಗ್ಲಾಸ್, ಶೆಡ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ತಿಳಕವಾಡಿಯ ರಾಣಿ ಪಾರ್ವತಿ ದೇವಿ ಕಾಲೇಜಿನಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದ್ದು, 17 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಸುಗಮ ಮತದಾನ ಹಾಗೂ ಮತ ಎಣಿಕೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮತದಾರರು ಯಾವುದೇ ಆತಂಕವಿಲ್ಲದೇ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತದಾನ ಚಲಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ.ಹರೀಶ್‍ಕುಮಾರ ಅವರು ತಿಳಿಸಿದ್ದಾರೆ.

ಸಿಬ್ಬಂದಿಗಳ ನಿಯೋಜನೆ:

ಒಟ್ಟು 2,566 ಮತಗಟ್ಟೆಗಳಲ್ಲಿ 200 ಜನ ಸೂಕ್ಷ್ಮ ವೀಕ್ಷಕರ (ಒiಛಿಡಿo ಔbseಡಿveಡಿ) ನೇಮಕ ಮಾಡಲಾಗಿದೆ. ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ಒಟ್ಟು 72 ಸಿ.ಆಯ್.ಎಸ್.ಎಫ್. ಸಿಬ್ಬಂದಿ 132 ಎ.ಎಸ್.ಆಯ್. ಸಿಬ್ಬಂದಿಗಳ ಆಯೋಜನೆ ಮಾಡಲಾಗಿದೆ. ಒಟ್ಟು 977 ಹೆಡ್ ಕಾನ್ಸಟೇಬಲ್ ಹಾಗೂ 1406 ಪೊಲೀಸ್ ಕಾನ್ಸಟೇಬಲ್‍ಗಳು ಮತ್ತು 905 ಹೋಮ್ ಗಾರ್ಡ್‍ಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ವಿಶೇಷಚೇತನ ಮತದಾರರÀ ಸಹಾಯಕ್ಕಾಗಿ 1,497 ಸ್ವಯಂಸೇವಕರ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ಹರೀಶ್‍ಕುಮಾರ ಅವರು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 25,327 ಚುನಾವಣಾ ಫೋಟೋ ಗುರುತಿನ ಚೀಟಿಗಳ ಹಂಚಿಕೆ ಮಾಡಲಾಗಿದೆ.ಅಲ್ಲದೇ, ಮತದಾರರ ಮಾಹಿತಿ ಸ್ಲೀಪ್‍ಗಳು ಮತದಾರರನ್ನು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ.

ಎಪಿಕ್ ಕಾರ್ಡ್ ಇಲ್ಲದವರಿಗೆ ಮತದಾನಕ್ಕಾಗಿ ಪರ್ಯಾಯ ವ್ಯವಸ್ಥೆ:

ಎಪಿಕ್ ಕಾರ್ಡ್ ಹೊಂದಿಲ್ಲದ ಮತದಾರರು ಮತ ಚಲಾಯಿಸಲು ಪಾಸ್ಪೋರ್ಟ್(ರಹದಾರಿ ಪರವಾನಗೆ), ಚಾಲನೆ ಪರವಾನಗಿ(ಡ್ರೈವಿಂಗ್ ಲೈಸೆನ್ಸ್), ಕೇಂದ್ರ/ರಾಜ್ಯ ಸರ್ಕಾರ ಅಥವಾ ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳು, ಸಾರ್ವಜನಿಕ ಸೀಮಿತ ಸಂಸ್ಥೆಗಳು ಉದ್ಯೋಗಿಗಳಿಗೆ ನೀಡಿರುವ ಭಾವ ಚಿತ್ರದೊಂದಿಗಿನ ಸೇವಾ ಗುರುತಿನ ಚೀಟಿಗಳು, ಬ್ಯಾಂಕ್ ಅಥವಾ ಅಂಚೆ ಕಛೇರಿಯ ಭಾವಚಿತ್ರದೊಂದಿಗಿನ ಪಾಸ್‍ಬುಕ್‍ಗಳು, ಪಾನ್‍ಕಾರ್ಡ್, ಆಧಾರಕಾರ್ಡ್, ನರೇಗಾ ಉದ್ಯೋಗ ಕಾರ್ಡ್, ಚುನಾವಣಾ ಆಯೋಗವು ನೀಡಿರುವ ಅಧೀಕೃತ ವೋಟರ್ ಸ್ಲೀಪ್‍ಗಳನ್ನು ಬಳಸಿ ಮತ ಚಲಾವಣೆ ಮಾಡಲು ಅವಕಾಶ ಒದಗಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ನಗದು ಹಾಗೂ ಮದ್ಯ ವಶ:
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು 27 ಫ್ಲೈಯಿಂಗ್ ಸ್ಕ್ವಾಡ್(ಈಟಥಿiಟಿg Squಚಿಜs), 27 SSಖಿಗಳು ಕಾರ್ಯನಿರತವಾಗಿದ್ದು, ಇಲ್ಲಿಯವರೆಗೆ 509 ಗೋಡೆಬರಹಗಳು, 967 ಪೋಸ್ಟರ್, 1232 ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿಯವರೆಗೆ ರೂ.62,55,510 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ರೂ.11,97,628.70 ಮೌಲ್ಯದ 4327.74 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಕೋವಿಡ್ ನಿಯಮಾವಳಿಗಳು:
ಕೋವಿಡ್ ನಿಯಮಾವಳಿಯಂತೆ ಎಲ್ಲ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಲ್ಲ ಎ.ಆರ್.ಒ.ಗಳಿಗೆ ನಿರ್ದೇಶನ ನೀಡಲಾಗಿದೆ. ಚುನಾವಣಾ ಸಿಬ್ಬಂದಿಗೆ ಥರ್ಮಲ್ ಸ್ಸ್ಯಾನರ್, ಗ್ಲೌಸ್, ಮಾಸ್ಕ್,ಸಾನಿಟೈಜರ್‍ಗಳನ್ನು ಪೂರೈಸಲಾಗುತ್ತದೆ. ಎಲ್ಲ ತರಬೇತಿ ಹಾಗೂ ಮತದಾನ ಕೊಠಡಿಗಳನ್ನು ಸಾನಿಟೈಜ್ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ನಿಧನ

ಯಮಕನಮರಡಿ ಪೊಲೀಿಸ್ ಠಾಣೆಯ ಎಎಸ್ಐ ಜೆ.ಬಿ. ಪೂಜಾರ್ (57) ಚುನಾವಣೆ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಗೋಕಾಕದಲ್ಲಿ ಸೆಕ್ಟರ್ ಆಫೀಸರ್ ಆಗಿ ಅವರು ಕೆಲಸಕ್ಕೆ ನಿಯೋಜನೆಗೊೆಡಿದ್ದರು. ಘಟಪ್ರಭಾದ ಎಸ್ ಬಿಟಿ ಪಿಯು ಕಾಲೇಜಿನ ಮತಗಟ್ಟೆಯಲ್ಲಿ ಅವರು ಸಾವಿಗೀಡಾದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button