Kannada NewsLatest

ಉಪ ಚುನಾವಣೆ: ಹೊಸಕೇರಿ ಚೆಕ್ ಪೋಸ್ಟ್ ನಲ್ಲಿ 6 ಲಕ್ಷ ನಗದು‌ ವಶ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಮದುರ್ಗ ತಾಲ್ಲೂಕಿನ ಹೊಸಕೇರಿ ಚೆಕ್ ಪೋಸ್ಟ್ ಬಳಿ ಸೋಮವಾರ ರಾತ್ರಿ ಕಾರಿನಲ್ಲಿ ಸಾಗಿಸಲಾಗುತ್ತಿದ್ದ 6 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣಾ ಕರ್ತವ್ಯನಿರತ ಎಸ್.ಎಸ್.ಟಿ‌ ತಂಡವು ಸುರಪುರ ತಾಲೂಕಿನ ಕೆಂಭಾವಿ ಗ್ರಾಮದ ವ್ಯಕ್ತಿಯೊಬ್ಬರಿಂದ ಹಣವನ್ನು ವಶಪಡಿಸಿಕೊಂಡಿದೆ.

ಹಣದ ಮೂಲ ಹಾಗೂ ಸಾಗಾಣಿಕೆ ಕುರಿತು ಮಾಹಿತಿಯನ್ನು ಪಡೆದುಕೊಂಡು ಜಿಲ್ಲಾ ಪಂಚಾಯತ್ ಸಿಇಓ ಅವರ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಮಟ್ಟದ ನಗದು ಜಪ್ತಿ ಮತ್ತು ಪರಿಹಾರ ಸಮಿತಿಗೆ ಪ್ರಕರಣವನ್ನು ವರ್ಗಾಯಿಸಿದೆ.

ಸದರಿ ಸಮಿತಿಯು ಹಣದ ಮೂಲದ ಕುರಿತು ಕೂಲಂಕುಷ ವಿಚಾರಣೆ ನಡೆಸಿ, ಒಂದು ವೇಳೆ ಸದರಿ ಹಣವು ಚುನಾವಣೆಗೆ ಸಂಬಂಧಿಸಿರುವುದಿಲ್ಲ ಎಂಬುದು‌ ಖಾತ್ರಿಪಟ್ಟರೆ ಜಪ್ತಿ ಮಾಡಲಾದ ಹಣವನ್ನು ಸಂಬಂಧಿಸಿದವರಿಗೆ ಹಿಂದಿರುಗಿಸಲಿದೆ.

Home add -Advt

ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ: ಮಂಗಲಾ ಅಂಗಡಿ ನಾಮಪತ್ರ ಸಲ್ಲಿಕೆಗೆ ಉಪಸ್ಥಿತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button