Belagavi NewsBelgaum NewsLatestPolitics

*ಬೆಳಗಾವಿಯಲ್ಲಿ ಎಲ್‌ಪಿಜಿ ಗ್ಯಾಸ್‌ಗಾಗಿ ಆಟೋ ಚಾಲಕರ ಪರದಾಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಆಟೋಗಳಿಗೆ ಬಳಸುವ ಎಲ್‌ಪಿಜಿ ಗ್ಯಾಸ್ ಕೊರತೆ ಉಂಟಾಗಿದ್ದು, ಆಟೋಗಳಿಗೆ ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಕಿಲೋಮಿಟರ್ ಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲುವಂತೆ ಆಗಿದೆ.

ಬೆಳಗಾವಿ ನಗರದಲ್ಲಿ ಇರುವ ಎಲ್ಲಾ ಎಲ್‌ಪಿ ಜಿ ಗ್ಯಾಸ್ ಪಂಪ್ ಗಳಲ್ಲಿ ಗ್ಯಾಸ್ ಖಾಲಿ ಆಗಿದೆ. ಆರ್‌ಟಿಓ ಸರ್ಕಲ್ ಬಳಿ ಇರುವ ಒಂದೆ ಪಂಪ್ ನಲ್ಲಿ ಗ್ಯಾಸ್ ಬಾಕಿ ಇದೆ. ಹಾಗಾಗಿ ಪಂಪ್ ಮುಂದೆ ನೂರಾರು ಆಟೋಗಳ ಸಾಲು ನಿಂತಿವೆ.‌ ಈ ಗಾಗಲೇ ಕಮರ್ಷಿಯಲ್ ಗ್ಯಾಸ್ ಕೊರತೆ ಉಂಟಾಗಿದೆ. ಇದರ ಮಧ್ಯೆ ಗ್ಯಾಸ್ ಬೆಲೆ ಏರಿಕೆಯಿಂದ ಆಟೋ ಚಾಲಕರಿಗೆ ಡಬಲ್ ಶಾಕ್ ಎದುರಾಗಿದೆ.

ಕಳೆದ ಎರಡು ದಿನಗಳಿಂದ ಆಟೋಗಳಿಗೂ ಗ್ಯಾಸ್ ಕೊರತೆ ಆಗುತ್ತಿದೆ. ಚಾಲಕರು

ಎರಡು ಮೂರು ಗಂಟೆ ಕ್ಯೂ ಹಚ್ಚಿ ಗ್ಯಾಸ್ ತುಂಬಿಸಿಕೊಳ್ಳಬೇಕಿದೆ. ಜೊತೆಗೆ

ಯದ್ಧದಿಂದಾಗಿ ಮುಂಚೆ 50ರೂಪಾಯಿ ಕೊಡ್ತಿದ್ದ ಆಟೋ ಚಾಲಕರು ಈಗ ಕೆಜಿಗೆ 80 ಪಾವತಿಸಬೇಕಾಗಿದೆ.

ದರ ಏರಿಕೆ, ಗ್ಯಾಸ ಕೊರತೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಏಕಾಏಕಿ ಗ್ಯಾಸ್ ದರ ಏರಿಕೆಯಿಂದ ಜೀವನ ನಡೆಸೋದು ಹೇಗೆ ಅಂತಾ ಚಾಲಕರ ಆಕ್ರೋಶ ಹೊರ ಹಾಕಿದ್ದಾರೆ.‌ ಸರ್ಕಾರ ಕೂಡಲೇ ಏನಾದ್ರೂ ಮಾಡುವಂತೆ ಚಾಲಕರು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button