Kannada NewsLatest

ಸಚಿವ ಜಗದೀಶ್ ಶೆಟ್ಟರ್ ಗೆ ಬಹಿರಂಗ ಸವಾಲು ಹಾಕಿದ ಎಂ.ಬಿ.ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಲಿದೆ ಎಂದು ಹೇಳಿಕೆ ನೀಡಿರುವ ಸಚಿವ ಜಗದೀಶ್ ಶೆಟ್ಟರ್ ಗೆ ತಿರುಗೇಟು ನೀಡಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್, ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಬಿ.ಪಾಟೀಲ್, ಶೆಟ್ಟರ್ ಗೆ ಚಿಲ್ಲರೆ ರಾಜಕಾರಣ ಗೊತ್ತಿದೆ ಅದಕ್ಕೆ ಅವರು ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ಓರ್ವ ಮಾಜಿ ಸಿಎಂ ಮತ್ತೆ ಸಚಿವರಾಗಿರುವುದನ್ನು ಅರಿತು ಮಾತನಾಡಲಿ ಎಂದರು.

ಪ್ರಧಾನಿ ಮೋದಿ 2014ರಲ್ಲಿ ನೀಡಿದ್ದ ಭರವಸೆಗಳನ್ನೇ ಈಡೇರಿಸಿಲ್ಲ. ವಿದೇಶಗಳಲ್ಲಿನ ಕಪ್ಪುಹಣ ವಾಪಸ್ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವ ಬಗ್ಗೆ ಹೇಳಿದ್ದರು. 7 ವರ್ಷದಲ್ಲಿ 14 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತೆ ಎಂದರು. ಆದರೆ ಲಕ್ಷಾಂತರ ಜನರು ಉದ್ಯೋಗವನ್ನೇ ಕಳೆದುಕೊಂಡರು. ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದರು. ಅದರೆ ರೈತರು ಹಲವು ತಿಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ ಆದರೂ ಸೌಜನ್ಯಕ್ಕೂ ರೈತರನ್ನು ಹೋಗಿ ಭೇಟಿಯಾಗಿಲ್ಲ. ಅವರ ಸಂಕಷ್ಟ ಆಲಿಸಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಗಗನಕ್ಕೆ ಏರಿಕೆಯಾಗಿದೆ. ಮೋದಿ ಹೇಳಿದ ಅಚ್ಚೆ ದಿನಗಳು ಎಲ್ಲಿ? ಅಚ್ಚೆ ದಿನ್ ಬಂದಿದ್ದು ಯಾರಿಗೆ ಅದಾನಿ, ಅಂಬಾನಿಯವರಿಗೆ ಹೊರತು ಸಾಮಾನ್ಯ ಜನರಿಗಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮೊದಲಾದವರು ಇದ್ದರು.

ಕಮಲ ಹಿಡಿಯಲು ಮುಂದಾದ ಲಖನ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button