Kannada NewsLatest

ಬಕ್ರೀದ್ ಆಚರಣೆಗೆ ಷರತ್ತು ವಿಧಿಸಿದ ಜಿಲ್ಲಾಡಳಿತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೋವಿಡ್-19 ಸೋಂಕು ಹಿನ್ನೆಲೆ ರಾಜ್ಯಾದ್ಯಂತ 2021 ಬಕ್ರೀದ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಈಗಾಗಲೇ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸರ್ಕಾರದ ಮಾರ್ಗಸೂಚಿಯನ್ವಯವೇ ಬಕ್ರೀದ್ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರಕಾರದ ಮಾರ್ಗಸೂಚಿ ಪ್ರಕಾರ ಈದ್ಗಾಗಳಲ್ಲಿ (Ed-ul-Azha) ನಮಾಜನ್ನು ನಿರ್ಬಂಧಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಎಲ್ಲಾ ಮಸಿದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಿರ್ವಹಿಸಲು ಇಚ್ಛಿಸಿದಲ್ಲಿ
ಮಾರ್ಗಸೂಚಿಯನ್ವಯ ಆಯಾ ಮಸೀದಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಶೇ. 50% ಜನರು
ಮೀರದಂತೆ, ಒಂದು ವೇಳೆ ಅಧಿಕ ಜನಸಂಖ್ಯೆಯಲ್ಲಿ ಆಗಮಿಸಿದ ಪಂತಿಗಳಲ್ಲಿ (Batch Wise) ಈ
ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಪ್ರಾರ್ಥನೆಯನ್ನು ನಿರ್ವಹಿಸಬಹುದು.

ಬೆಳಗಾವಿ ಜಿಲ್ಲೆಯ ಎಲ್ಲ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಯವರು ಬಕ್ರೀದ್ ಹಬ್ಬವನ್ನು ಆಚರಿಸಲು
ಈ ಕೆಳಗಿನಂತೆ ಮಾರ್ಗಸೂಚಿಯನ್ನು ಅನುಸರಿಸಿ ಕ್ರಮ ವಹಿಸಲು ಸೂಚಿಸಿದೆ.

> ಪ್ರಾರ್ಥನಾ ಸ್ಥಳಗಳಲ್ಲಿ ಮಾಸ್ಕಗಳನ್ನು ಕಡ್ಡಾಯವಾಗಿ ಹಾಕತಕ್ಕದ್ದು.
> 65 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ
ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡುವುದು.
> ನಮಾಜ್ ನಿರ್ವಹಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳುವುದು.
> ಮಸೀದಿಗಳಲ್ಲಿ ಪ್ರವೇಶಿಸುವ ಮೊದಲು ದೇಹದ ತಾಪಮಾನವನ್ನು ತಪಾಸಣೆ
ಮಾಡುವುದು.
> ಕೈಗಳನ್ನು ಸೋಪು ಅಥವಾ ಸ್ಯಾನಿಟೈಜರನಿಂದ ಶುಚಿಗೊಳಿಸುವುದು.
> ತಮ್ಮ ಮನೆಗಳಿಂದ ಮುಸಲ್ಲಾವನ್ನು (ಜಾಯನಮಾಜ್) ಕಡ್ಡಾಯವಾಗಿ ತರುವುದು.
> ಹಸ್ತಲಾಘವನ್ನು ಮತ್ತು ಆಲಿಂಗನ ಮಾಡದಿರಲು ಸೂಚಿಸುವುದು.

ಪ್ರಾಣಿ ವಧೆ ಮತ್ತು ಬಲಿದಾನ ಮಾಡುವ (ಕುರ್ಬಾನಿ) ಪ್ರಕ್ರಿಯೆಗೆ ಈ ಕೆಳಕಂಡ ಸ್ಥಳಗಳಲ್ಲಿ ನಿಷೇಧಿಸಿದೆ:

> ರಸ್ತೆಗಳು, ಪಾದಚಾರಿ ಮಾರ್ಗಗಳು.
> ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್ ಹೋಂ ಒಳ ಹಾಗೂ ಹೊರ
ಆವರಣಗಳು.
> ಶಾಲೆ ಕಾಲೇಜುಗಳು ನಡೆಯುತ್ತಿದ್ದಲ್ಲಿ, ಅಂತಹ ಶಾಲೆ/ಕಾಲೇಜುಗಳ ಒಳ ಹಾಗೂ ಹೊರ ಆವರಣಗಳು.
> ಆಟದ ಮೈದಾನಗಳಲ್ಲಿ, ಮಸೀದಿಗಳ ಹಾಗೂ ಇತರೆ ಧಾರ್ಮಿಕ ಸ್ಥಳ ಹಾಗೂಆವರಣಗಳಲ್ಲಿ
> ಉದ್ಯಾನವನಗಳ ಹಾಗೂ ಒಳಗೆ ಮತ್ತು ಹೊರಗೆ ಅಥವಾ ಇನ್ನಾವುದೇ ಸಾರ್ವಜನಿಕ
ಪ್ರದೇಶಗಳಲ್ಲಿ ಪ್ರಾಣಿವಧೆ ಹಾಗೂ ಬಲಿದಾನ ಪ್ರಕ್ರಿಯೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಣ್ಣಾ ಸಾಹೇಬ ಜೊಲ್ಲೆಯವರ 2 ಪ್ರಶ್ನೆ: ಕೇಂದ್ರ ಸರಕಾರದ ಉತ್ತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button