Belagavi NewsBelgaum News
*BREAKING: ಬೆಳಗಾವಿ ಪಾಲಿಕೆ ಬಿಜೆಪಿ ಮಡಿಲಿಗೆ: ಮೇಯರ್ ಆಗಿ ಮಂಗೇಶ್, ಉಪ ಮೇಯರ್ ಆಗಿ ವಾಣಿ ಜೋಶಿ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮೇಯರ್ ಆಗಿ ಮಂಗೇಶ್ ಪವಾರ ಹಾಗೂ ಉಪ ಮೇಯರ್ ಆಗಿ ವಾಣಿ ಜೋಶಿ ಆಯ್ಕೆಯಾಗಿದ್ದಾರೆ.
ಕೈ ಎತ್ತು ಮೂಲಕ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಚುನಾವಣಾಧಿಕಾರಿ
ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 5 ಮತಗಳು ಹಾಗೂ ವಾಣಿ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 19ಮತಗಳು ಬಂದಿದ್ದವು.
ಈ ಹಿನ್ನೆಲೆಯಲ್ಲಿ ಮೇಯರ್ ಆಗಿ ಮಂಗೇಶ್ ಹಾಗೂ ಉಪ ಮೇಯರ್ ಆಗಿ ವಾಣಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.