Belagavi NewsBelgaum NewsKarnataka NewsLatest

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಮಂಡಿಸುವಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರ ಆಗ್ರಹ: ಮಹಾನಗರ ಪಾಲಿಕೆ ಮುಂದೆ ಹೈಡ್ರಾಮಾ

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಕರ್ನಾಟಕದ ವಿಭಾಜ್ಯ ಅಂಗ ಎಂದು ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಗೊತ್ತವಳಿ ಅಂಗೀಕಾರ ಮಾಡಬೇಕು ಎಂದು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದು, ಇಂದು ಪಾಲಿಕೆ ಮಹತ್ವದ ಸಭೆ ಹಿನ್ನೆಲೆ ಪೊಲೀಸ ಬಂದೋಬಸ್ತ್ ನಿಯೋಜಿಸಲಾಗಿದೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಮಹಾನಗರ ಪಾಲಿಕೆಯಲ್ಲಿ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಇನ್ನೊಂದು ಕಡೆ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕಾರಕ್ಕೆ ಎಂಇಎಸ್ ವಿರೋಧಿಸಿದೆ. ಹೀಗಾಗಿ ಪಾಲಿಕೆ ಸಭೆಯತ್ತ ಕುತೂಹಲ ಹೆಚ್ಚಿದೆ.

ಕರ್ನಾಟಕದ ಪರ ಗೊತ್ತವಳಿ ಅಂಗೀಕಾರಕ್ಕೆ ಮಾಡಬೇಕು ಎಂದು ಈಗಾಗಲೆ ಧರಣಿ ಸತ್ಯಾಗ್ರಹ ಆರಂಭವಾಗಿದೆ.‌ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ರೂ ಅಂಗೀಕಾರಕ್ಕೆ ಮೀನಾಮೇಷ ತೋರಲಾಗುತ್ತಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಮುಂದೆ ಹೈಡ್ರಾಮಾ ಶುರುವಾಗಿದೆ. ಪಾಲಿಕೆ ಸಭೆಗೆ ನುಗ್ಗಲು ಯತ್ನಿಸಿದ ಕನ್ನಡ ಹೋರಾಟಗಾರರನ್ನು ಪೊಲೀಸರು ತಡೆದಿದ್ದಾರೆ.‌ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ಪಾಲಿಕೆ ಸುತ್ತಲೂ ಡಿಸಿಪಿ ನೇತೃತ್ವದಲ್ಲಿ ಮಾರ್ಕೆಟ್, ಮಾಳಮಾರುತಿ ಪೊಲೀಸ ಸಿಬ್ಬಂದಿಗಳಿಂದ ಪೊಲೀಸ ಸರ್ಪಗಾವಲು ನಿಯೋಜಿಸಲಾಗಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button