Belagavi NewsBelgaum News

*ಬೆಳಗಾವಿ: ಆತ್ಮಹತ್ಯೆಗೆ ಶರಣಾದ ನೇಕಾರ*

ಪ್ರಗತಿವಾಹಿನಿ ಸುದ್ದಿ: ಸಾಲಬಾಧೆಗೆ ನೊಂದ ನೇಕಾರರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದ ವಾಡೆಗಲ್ಲಿಯಲ್ಲಿ ನಡೆದಿದೆ.

47 ವರ್ಷದ ಪರಶುರಾಮ ಕಲ್ಲಪ್ಪ ವಾಗೂಕರ ಆತ್ಮಹತ್ಯೆ ಮಾಡಿಕೊಂಡವರು. ನೇಕಾರಿಕೆ ಉದ್ಯಮಕ್ಕಾಗಿ ಪರಶುರಾಮ ಸಾಲ ಮಾಡಿದ್ದರು. ಆದರೆ ಉದ್ಯಮದಲ್ಲಿ ನಷ್ಟವುಂಟಾಗಿ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

Home add -Advt

ಸಾಲಬಾಧೆಯಿಂದ ತೀವ್ರವಾಗಿ ಮನನೊಂದಿದ್ದ ಪರಶುರಾಮ್, ಪತ್ನಿ ಹಾಗೂ ಮಗಳು ಬೆಳಗಾವಿ ನಗರಕ್ಕೆ ಹೋಗಿದ್ದ ವೇಳೆ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button