*ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಿರ್ಮಿಸಿಕೊಟ್ಟ ನೂತನ ಕಲ್ಯಾಣ ಮಂಟಪದಲ್ಲಿ ಚೊಚ್ಚಲ ಮದುವೆಯ ಸಂಭ್ರಮ!*

ಮೊದಲ ವಿವಾಹ ಮಹೋತ್ಸವ ಮನಸ್ಸಿಗೆ ಅಪಾರ ಸಂತಸ ತಂದಿದೆ ಎಂದ ಸಚಿವೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾರ್ವಜನಿಕರ ಹಾಗೂ ರೈತರ ಮಕ್ಕಳ ಕಲ್ಯಾಣ ಹಾಗೂ ಇತರ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ಮಾಸ್ತಮರ್ಡಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಟ್ಟಿಸಿರುವ ಭವ್ಯ ಸಾರ್ವಜನಿಕ ಕಲ್ಯಾಣ ಮಂಟಪದಲ್ಲಿ ಇಂದು ಮೊದಲ ವಿವಾಹ ಮಹೋತ್ಸವ ಜರುಗಿತು.
ಈ ಮದುವೆಯಲ್ಲಿ ಪಾಲ್ಗೊಂಡ ಸಚಿವರು, ಮನಸ್ಸಿಗೆ ಅಪಾರ ಸಂತಸ ಹಾಗೂ ತೃಪ್ತಿ ನೀಡಿದೆ ಎಂದು ಪ್ರತಿಕ್ರಿಯಿಸಿದರು.

ಗ್ರಾಮದ ಹಿರಿಯರಾದ ಚನ್ನಗೌಡ ಪಾಟೀಲ ಅವರ ಸುಪುತ್ರನ ಮದುವೆ ಸಮಾರಂಭವು ಈ ಸುಸಜ್ಜಿತ ಮಂಟಪದಲ್ಲಿ ವೈಭವದಿಂದ ನಡೆಯಿತು. ನಾವು ಮಾಡಿದ ಅಭಿವೃದ್ಧಿ ಕಾರ್ಯ ಸಾರ್ಥಕವಾದ ಕ್ಷಣ ಇದು ಎಂದು ಹೆಬ್ಬಾಳಕರ್ ಹೇಳಿದರು.
ಈ ಶುಭ ಸಂದರ್ಭದಲ್ಲಿ ಪಾಟೀಲ ಕುಟುಂಬದ ನವದಂಪತಿಗಳ ಸುಖಿ ಸಂಸಾರಕ್ಕಾಗಿ ಶುಭ ಹಾರೈಸಿದರು.
ಕ್ಷೇತ್ರದ ಜನರ ಸೇವೆಗೆ ಈ ಕಲ್ಯಾಣ ಮಂಟಪ ಸದಾ ಮುಕ್ತವಾಗಿದ್ದು, ನಿಮ್ಮೆಲ್ಲರ ಹಾರೈಕೆ ಸದಾ ನನ್ನ ಮೇಲಿರಲಿ ಎಂದು ಆಶಿಸುತ್ತೇನೆ. ಬರುವ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಇಂತಹ ಕಲ್ಯಾಣ ಮಂಟಪಗಳು ನಿರ್ಮಾಣಗೊಳ್ಳಲಿವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




