ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿರುವ ವೀವರ್ಸ್ ವರ್ಕ್ಸ್ ಮೇಳವನ್ನು ಮರಾಠಾ ಮಂದಿರದಲ್ಲಿ ಮಾಜಿ ಮೇಯರ್ ಸರೀತಾ ಪಾಟೀಲ್ ಉದ್ಘಾಟಿಸಿದರು.
ಮರಾಠಾ ಮಂದಿರದ ಟ್ರಸ್ಟ್ ಅಧ್ಯಕ್ಷ ಅಪ್ಪಾಸಾಹೇಬ್, ಬೆಳಗಾವಿ ಜಾಯಿಂಟ್ ಸಖಿಯ ಅಧ್ಯಕ್ಷೆ ನೀತಾ ಉಮೇಶ್ ಪಾಟೀಲ್, ಆಧಾರ್ ಸಂಸ್ಥೆ ನಿರ್ದೇಶಕಿ ಪೂಜಾ ಪ್ರೇಮಾನಂದ್ ಮತ್ತು ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಅನಂತ್ ಲಾಡ್ ಉಪಸ್ಥಿತರಿದ್ದರು.
ಮಾರ್ಚ್ 13ರಿಂದ ಆರಂಭವಾಗಿರುವ ಈ ಪ್ರದರ್ಶನ 21ರವರೆಗೆ ನಡೆಯಲಿದೆ. ದೇಶದ 50ಕ್ಕೂ ಹೆಚ್ಚು ಭಾಗದ ನೇಕಾರರು ಭಾಗವಹಿಸಿದ್ದಾರೆ. ಕರ್ನಾಟಕದ ಕೆಫ್ ಸಿಲ್ಕ್, ಜಾರ್ಜೆಟ್ ಸಿಲ್ಕ್, ತಮಿಳುನಾಡಿನ ಕಾಂಜಿವರಂ ಸಿಲ್ಕ್ ಸೀರೆ, ಡಿಸೈನರ್ ಫ್ಯಾನ್ಸಿ ಸೀರೆ, ಆಂಧ್ರಪ್ರದೇಶದ ಧರ್ಮಾವರಂ, ಮಂಗಳಗಿರಿ, ಗಡ್ವಾಲ್ ಸೀರೆಗಳು, ಮಹಾರಾಷ್ಟ್ರದ ಡಿಸೈನರ್ ಸೀರೆ, ಎಂಬ್ರಾಯಡರಿ ಡ್ರೆಸ್ ಮೆಟಿರಿಯಲ್ಸ್, ಪಂಜಾಬಿ ಪಟಿಯಾಲಾ ಡ್ರೆಸ್ ಮೆಟಿರಿಯಲ್ಸ್, ಓರಿಸ್ಸಾ ಸಂಬಲ್ ಪುರಿ, ಕಾಟನ್ ಸೀರೆ, ಪಶ್ಚಿಮ ಬಂಗಾಳದ ಬಲೂಚಾರಿ ಹೀಗೆ ವಿವಿಧ ರಾಜ್ಯಗಳ ಸೀರೆ, ಡ್ರೆಸ್ ಮೆಟೀರಿಯಲ್ಸ್, ದುಪ್ಪಟ್ಟಾ, ಆಭರಣಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ