ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಇಂದಿನಿಂದ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಇದಕ್ಕೆ ವಿರುದ್ಧವಾಗಿ ಟಿಳಕವಾಡಿಯಲ್ಲಿ ಎಂಇಎಸ್ ಮಹಾಮೆಳಾವ್ ಆಯೋಜನೆ ಮಾಡಿತ್ತು. ಆದರೆ ಇದೀಗ ಮಹಾಮೆಲಾವ್ ಗೆ ತಡೆ ನೀಡಲಾಗಿದೆ.
ಟಿಳಕವಾಡಿಯ ವ್ಯಾಕ್ಸಿನ್ ಡಿಪೋಪದಲ್ಲಿ ಮಹಾಮೇಳಾವ್ ಸಮಾವೇಶಕ್ಕೆ ಎಂಇಎಸ್ ಸಿದ್ಧತೆ ಮಾಡಿಕೊಂಡಿದೆ. ಆದರೆ ಮಹಾಮೇಳಾವ್ ಗೆ ಅನುಮತಿ ಇಲ್ಲ ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ. ಈ ಮೂಲಕ ಎಂಇಎಸ್ ಮಹಾಮೆಳಾವ್ ಗೆ ಬ್ರೇಕ್ ಹಾಕಲಾಗಿದೆ. 2006ರಿಂದ ಮಹಾಮೆಳಾವ್ ನಡೆಸುತ್ತಾ ಬಂದಿದ್ದ ಎಂಇಎಸ್ ಗೆ ಇದೇ ಮೊದಲ ಬಾರಿಗೆ ತಡೆ ನಿಡಲಾಗಿದೆ.
ಎಂಇಎಸ್ ಸಂಘಟನೆ ನಿಗದಿ ಪಡಿಸಿದ್ದ ಮಹಾಮೇಳಾವ್ ಸ್ಥಳಕ್ಕೆ ಬರಲು ಯಾರಿಗು ಅವಕಾಶವಿಲ್ಲ. ವ್ಯಾಕ್ಸಿನ್ ಡಿಪೋ ಸುತ್ತ ಅರ್ಧ ಕೀ.ಮೀವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಾಗಾಗಿ ಯಾರಿಗೂ ಬರಲು ಅವಕಾಶವಿಲ್ಲ. ರಾತ್ರೋ ರಾತ್ರಿ ನಿರ್ಮಿಸಿದ್ದ ವೇದಿಕೆಯನ್ನೂ ತೆರವುಗೊಳಿಸಲಾಗಿದೆ.
ಮಹಾಮೇಳಾವ್ ಆಯೋಜಿಸಿರುವ ಸ್ಥಳದಲ್ಲಿ ನಿಷೇಧಾಜ್ಞೆ ಇರುವುದರಿಂದ ಯಾರಿಗೂ ಬರಲು ಬಿಡುವುದಿಲ್ಲ. ಎಲ್ಲಿಯೂ ಗುಂಪುಗೂಡಲು ಅವಕಾಸವಿಲ್ಲ ಎಂದು ತಿಳಿಸಿದರು. ಒಟ್ಟಾರೆ ಇದೇ ಮೊದಲ ಬಾರಿಗೆ ಎಂಇಎಸ್ ಮಹಾಮೇಳಾವ್ ಸಮಾವೇಶಕ್ಕೆ ಬೆಳಗಾವಿ ಪೊಲೀಸರು ತಡೆ ನೀಡಿದ್ದು, ಸಮಾವೇಶದ ವೇದಿಕೆಯನ್ನೇ ತೆರವುಗೊಳಿಸಿದ್ದಾರೆ.
*ಬೆಳಗಾವಿ ಅಧಿವೇಶನ; ಸಿಎಂ ಬೊಮ್ಮಾಯಿ ಕಾರ್ಯಕಲಾಪದ ಬಗ್ಗೆ ಇಲ್ಲಿದೆ ಮಾಹಿತಿ*
https://pragati.taskdun.com/belagaviwinter-sessioncm-basavaraj-bommai-2/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ