Kannada NewsLatest

ನಾನು ಮಂತ್ರಿಯಾಗಿ 1 ವರ್ಷವಾಗಿದೆ; 9 ತಿಂಗಳು ಕೋವಿಡ್ ನಿಂದಲೇ ಕಳೆದಿದ್ದೇವೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಸರತ್ತು ಮುಂದುವರೆದಿದ್ದು, ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಇಂದು ಸಂಜೆ ವೇಳೆಗೆ ಹೊಸ ಸಚಿವರ ಪಟ್ಟಿ ಸಿದ್ಧಗೊಳ್ಳಲಿದೆ.

ಈ ನಡುವೆ ಕೆಲ ಹಾಲಿ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಪಶುಸಂಗೋಪನಾ ಸಚಿವ ಪ್ರಭು ಚೌವಾಣ್ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಚೌವಾಣ್, ನನ್ನನ್ನು ಸಂಪುಟದಿಂದ ಕೈಬಿಡುವ ಬಗ್ಗೆ ರಾಜ್ಯ ನಾಯಕರಾಗಲಿ, ಹೈಕಮಾಂಡ್ ಆಗಲಿ ನನಗೆ ಮಾಹಿತಿ ನೀಡಿಲ್ಲ ನನ್ನನ್ನು ಸಂಪುಟದಿಂದ ಕೈಬಿಡಲಾಗದು ಎಂದಿದ್ದಾರೆ.

ನಾನು ಬೇರೆ ಪಕ್ಷದಿಂದ ಬಿಜೆಪಿ ಬಂದವನಲ್ಲ. ನಾನು ಬಿಜೆಪಿಯಲ್ಲಿಯೇ ಇದ್ದು ಆಯ್ಕೆಯಾದವನು. ನಾನು ಸಚಿವನಾಗಿ ಕೇವಲ ಒಂದು ವರ್ಷವಾಗಿದೆ. ಅದರಲ್ಲಿ 9 ತಿಂಗಳು ಕೋವಿಡ್ ನಿಂದಲೇ ಕಳೆದಿದ್ದೇವೆ. ಹೀಗಿರುವಾಗ ನನ್ನನ್ನು ಸಚಿವ ಸ್ಥಾನದಿಂದ ಯಾಕೆ ಕೈಬಿಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

 

Home add -Advt

Related Articles

Back to top button