Latest

ಭಾರೀ ವೈರಲ್ ಆದ ಶಾಸಕಿ ಅಂಜಲಿ ನಿಂಬಾಳ್ಕರ್ ಟ್ವೀಟ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಸರ್ದಾರ್ ಪ್ರೌಢ ಶಾಲೆಯಲ್ಲಿ ಹಿಜಾಬ್ ಕಿರಿಕ್ ಮತ್ತೆ ಹೆಚ್ಚಿದ್ದು, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಆಗಮಿಸುತ್ತಿದ್ದಾರೆ. ಇದಕ್ಕೆ ಸಿಬ್ಬಂದಿಗಳು ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರೂ ಪಟ್ಟು ಬಿಡದ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಿಲ್ಲ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಸಾಮಾಜಿಕ ಹೋರಾಟಗಾರ್ತಿ ಸೀಮಾ ಇನಾಮದಾರ್ ಬೆಂಬಲ ಕೂಡ ವ್ಯಕ್ತವಾಗಿದೆ.

ಈ ನಡುವೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಟ್ಟೀಟ್ ಭಾರಿ ವೈರಲ್ ಆಗಿದೆ. ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ ನಾನು ಹಿಜಾಬ್ ಪರವಾಗಿದ್ದೇನೆ, ನನ್ನ ಮೇಲೆ ಬಲವಂತವಾಗಿ ಹಿಜಾಬ್ ಹೇರಿದರೆ ನಾನು ಹಿಜಾಬ್ ವಿರುದ್ಧ… ಭಾರತದ ಮಗಳು ಎಂದು ಬರೆದುಕೊಂಡಿದ್ದಾರೆ.

ಹೈಕೋರ್ಟ್ ಮಧ್ಯಂತರ ಆದೇಶದ ನಡುವೆಯೂ ಬೆಳಗಾವಿಯ ಕೆಲ ಶಾಲೆಗಳಲ್ಲಿ ವಿದ್ಯಾರ್ಥಿನಯರು ಹಿಜಾಬ್ ಧರಿಸಿ ಆಗಮಿಸುತ್ತಿದ್ದು, ಗೊಂದಲಮಯ ವಾತಾವರಣಕ್ಕೆ ಕಾರಣವಾಗಿದೆ.


ರಾಹುಲ್ ಗಾಂಧಿ ವಿರುದ್ಧ 1000 ದೂರು ದಾಖಲು

Related Articles

Back to top button