ನಾಲಿಗೆ ಹರಿಬಿಟ್ಟ ಮಾಜಿ ಶಾಸಕ; ಬಿಜೆಪಿ ಹಾಗೂ ಗ್ರಾಮೀಣ ಮತದಾರರಿಗೆ ಅವಮಾನ: ಕಾಂಗ್ರೆಸ್ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾಕ್ಸಮರದ ಬರದಲ್ಲಿ ಬಿಜೆಪಿ ಮುಖಂಡ, ಮಾಜಿ ಶಾಸಕ ಸಂಜಯ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ .
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ನೈಟ್ ಪಾಲಿಟಿಕ್ಸ್ ಗೊತ್ತು. ರಾತ್ರಿ ರಾಜಕಾರಣದಿಂದಲೇ ಅವರು ಗೆದ್ದು ಬಂದಿದ್ದಾರೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಶಾಸಕಿಯಾಗುವ ಮೊದಲು ಲಕ್ಷ್ಮಿ ಹೆಬ್ಬಾಳ್ಕರ್ ನಾನು ನಿಮ್ಮ ಮಗಳು, ಚಾಂದ್ ತಾರೆ ತೋಡ್ ಕೇ ಲಾವೂಂಗಿ ಎಂದು ಹೇಳುತ್ತಿದ್ದರು. ಶಾಸಕರಾದ ಮೇಲೆ ಕ್ಷೇತ್ರದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸವನ್ನು ಕೂಡ ಮಾಡಿಲ್ಲ ಎಂದು ಬಾಲಿಶ ಹೇಳಿಕೆ ನೀಡಿದ್ದಾರೆ.
ಗ್ರಾಮೀಣ ಮತದಾರರಿಗೆ ಅವಮಾನ:
ಸಂಜಯ ಪಾಟೀಲ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಮಹಿಳಾ ಕಾಂಗ್ರೆಸ್, ಕರ್ನಾಟಕ ಪ್ರದೇಶ ಕಾಂಗ್ರೆಸ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್ ಮೊದಲಾದವರು ಸಂಜಯ ಪಾಟೀಲ ಹೇಳಿಕೆಗೆ ಕಿಡಿಕಾರಿದ್ದು, ಸಂಜಯ ಪಾಟೀಲ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಇದು ಆರ್ ಎಸ್ಎಸ್ ಸಂಸ್ಕೃತಿಯೇ ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ರಾತ್ರಿ ರಾಜಕಾರಣದಿಂದ ಅವರು ಆರಿಸಿಬಂದಿದ್ದಾರೆ. ರಾತ್ರಿ ರಾಜಕಾರಣ ಮಾಡದಿದ್ದರೆ ಅವರು ಆರಿಸಿಬರಲು ಸಾಧ್ಯವಿರಲಿಲ್ಲ ಎನ್ನುವ ಮೂಲಕ ಸಂಜಯ ಪಾಟೀಲ ಗ್ರಾಮೀಣ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ. ಜೊತೆಗೆ ಬಿಜೆಪಿ ಮತ್ತು ಆರ್ ಎಸ್ಎಸ್ ನವರು ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತ್ರಿಕ್ರಿಯಿಸಿದೆ.
ಸಂಜಯ ಪಾಟೀಲ ವಿರುದ್ಧ ಸಂಕೇಶ್ವರ ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಸಹ ನಡೆದಿವೆ. ಸಂಜಯ ಪಾಟೀಲ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ನಿಷ್ಠಾವಂತ ಕಾರ್ಯಕರ್ತರಿಗೆ ಜಿಪಂ, ತಾಪಂ ಟಿಕೆಟ್ – ಆನಂದ ಮಾಮನಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ