*ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ೨೦೨೩-೨೪ ಸಾಲಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಥಮ ಪಿ.ಯು.ಸಿ (ಪಿ.ಸಿ.ಎಂ.ಬಿ) ವಿಜ್ಞಾನ ವಿಭಾಗ ಮತ್ತು ವಾಣಿಜ್ಯ (ಸಿ.ಇ.ಟಿ.ಎ) ವಿಭಾಗದ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಳಗಾವಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಉನ್ನತಿಕರಣಗೊಂಡ ಬೆಳಗಾವಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೋ ನಂ ೭೪೦೬೫೧೬೫೯೬, ಮೂಡಲಗಿ ವಸತಿ ಶಾಲೆಯ ಮೋ ನಂ ೭೪೧೧೨೨೬೮೦೬ ಹಾಗೂ ಹೂಲಿಅಕಟ್ಟಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮೋ ನಂ ೭೦೨೬೨೨೩೩೭೩ ಗೆ ಸಂಪರ್ಕಿಸಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತಯುಳ್ಳ ವಿದ್ಯಾರ್ಥಿಗಳು ಜು.೩೧ ೨೦೨೩ ರ ಒಳಗಾಗಿ ಅಗತ್ಯ ದಾಖಲೆಗಳೊಂದಿಗೆ ಸಂಬAಧಪಟ್ಟ ವಸತಿ ಶಾಲೆಗೆ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯಾಲಯ, ಮೌಲಾನಾ ಆಜಾದ್, ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಹಾಗೂ ದೂರವಾಣಿ ಸಂಖ್ಯೆ: ೦೮೩೧-೨೯೫೦೩೪೯ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ