ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಶಿವಸೇನೆ ಅದನ್ನು ಮರಾಠಿ ಭಾಷಿಕರ ಸೋಲೆಂದು ಬಿಂಬಿಸಲು ಹೊರಟಿದ್ದು, ಭಾಷಾ ವಿವಾದದ ಕಿಡಿ ಹೊತ್ತಿಸಲು ಷಡ್ಯಂತ್ರ ರೂಪಿಸಿದೆ.
ಸಾಮ್ನಾ ಪತ್ರಿಕೆಯಲ್ಲಿ ಶಿವಸೇನೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಸೋಲಿನ ಬಗ್ಗೆ ಬರೆದುಕೊಂಡಿದ್ದು, ’ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ’ ಎಂದು ಶೀರ್ಷಿಕೆ ನೀಡುವ ಮೂಲಕ ಬೆಳಗಾವಿಯ ಮುಗ್ಧ ಮರಾಠಿಗರ ದಾರಿ ತಪ್ಪಿಸಲು ಪ್ರಯತ್ನಿಸಿದೆ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಬಳಸಿ ಬೆಳಗಾವಿ ಮರಾಠಿಗರ ಹಾದಿ ತಪ್ಪಿಸುವ ಕುತಂತ್ರ ನಡೆಸಿದ್ದು, ಆಗ್ರಾದಲ್ಲಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು. ಆದರೆ ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲವರು ಮಹಾರಾಷ್ಟ್ರದಲ್ಲಿಯೂ ಇದ್ದರು. ಅದೇ ಪ್ರವೃತ್ತಿಯ ಜನರು ಬೆಳಗಾವಿಯಲ್ಲಿ ಮರಾಠಿಗರ ಸೋಲನ್ನು ಸಂಭ್ರಮಿಸುತ್ತಿದ್ದಾರೆ. ಮರಾಠಿಗರು ಹಾಗೂ ಹುತಾತ್ಮರ ಶಾಪ ಅವರಿಗೆ ತಟ್ಟುತ್ತದೆ ಎಂದು ಸಾಮ್ನಾದಲ್ಲಿ ಶಿವಸೇನೆ ಬರೆದುಕೊಂಡಿದೆ.
ಈ ಮೂಲಕ ಮರಾಠಿ ಭಾಷಿಕರಿಗೆ ಪ್ರಚೋದನೆ ನೀಡುವ ತಂತ್ರ ಹೆಣೆದಿದ್ದು, ವಿವಾದ ಸೃಷ್ಟಿಸಲು ಮುಂದಾಗಿದೆ.
ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವಕ್ಕೆ ಸಿಎಂ ಒಪ್ಪಿಗೆ – ಅಭಯ ಪಾಟೀಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ