Kannada NewsKarnataka News

3ನೇ ಅಲೆಯಲ್ಲಿ ಮೊದಲಬಾರಿಗೆ ಬೆಳಗಾವಿಯಲ್ಲಿ 500 ದಾಟಿದ ಕೊರೋನಾ ಸೋಂಕಿತರ ಸಂಖ್ಯೆ ; ಒಂದು ಸಾವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – 3ನೇ ಅಲೆಯಲ್ಲಿ ಮೊದಲ ಬಾರಿಗೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 500 ದಾಟಿದೆ. ಶುಕ್ರವಾರ ಜಿಲ್ಲೆಯಲ್ಲಿ 518 ಜನರಿಗೆ ಸೋಂಕು ಪತ್ತೆಯಾಗಿದೆ.

ಬೆಳಗಾವಿ ನಗರದಲ್ಲಿ 298 ಜನರಿಗೆ ಸೋಂಕು ದೃಢಪಟ್ಟಿದ್ದು, ಗೋಕಾಕದಲ್ಲಿ 40, ಚಿಕ್ಕೋಡಿಯಲ್ಲಿ 32, ಹುಕ್ಕೇರಿಯಲ್ಲಿ 31, ಖಾನಾಪುರದಲ್ಲಿ 30, ಬೈಲಹೊಂಗಲದಲ್ಲಿ 23, ರಾಮದುರ್ಗದಲ್ಲಿ 18, ಅಥಣಿಯಲ್ಲಿ 17, ಸವದತ್ತಿಯಲ್ಲಿ 16, ರಾಯಬಾಗದಲ್ಲಿ 13 ಜನರಿಗೆ ಸೋಂಕು ದೃಢಪಟ್ಟಿದೆ.

Home add -Advt

ಜಿಲ್ಲೆಯಲ್ಲಿ 4033 ಜನರ ಟೆಸ್ಟ್ ರಿಪೋರ್ಟ್ ಬರಬೇಕಿದೆ.3663 ಜನರು ಕೊರೋನಾಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕ್ಕೋಡಿಯಲ್ಲಿ 73 ವರ್ಷದ ವ್ಯಕ್ತಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು.

ಹನಿಟ್ರ್ಯಾಪ್ ಕೇಸ್; ಜ್ಯೋತಿಷಿಯಿಂದಲೇ 49 ಲಕ್ಷ ವಸೂಲಿ ಮಾಡಿದ್ದ ದಂಪತಿ

Related Articles

Back to top button