Kannada NewsLatest

ಸುಳಗಾಂವ,ಅಪ್ಪಾಚಿವಾಡಿ,ಮತ್ತಿವಾಡೆ ಗ್ರಾಮದಲ್ಲಿ ಆಹಾರ ಕಿಟ್ ಗಳನ್ನು ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮತಕ್ಷೇತ್ರದ ಸುಳಗಾಂವ ಗ್ರಾಮದಲ್ಲಿ ಕೋವಿಡ್-19 ಪರಿಹಾರಾರ್ಥವಾಗಿ ಕಾರ್ಮಿಕ ಇಲಾಖೆ ವತಿಯಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸಚಿವೆ ಶಶಿಕಲಾ ಜೊಲ್ಲೆ ಆಹಾರದ ಕಿಟ್ ವಿತರಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಅಂಗವಿಕಲರಿಗೆ ಮಂಡಳಿ, ಕಾರ್ಮಿಕ ಇಲಾಖೆ ವತಿಯಿಂದ ಅಂಗವಿಕಲರಿಗೆ ಬೂತ್ ಕಮಿಟಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸಹಾಯಕಿಯರಿಗೆ, ಕೆಇಬಿ ನೌಕರರಿಗೆ ಒಟ್ಟು 350 ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಹಾಗೂ ಕಟ್ಟಡ ಕಾರ್ಮಿಕರಿಗೆ 30 ಸುರಕ್ಷತಾ ಕಿಟ್ ಗಳ ವಿತರಣೆ ಮಾಡಲಾಯಿತು.

ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ನಿಪ್ಪಾಣಿ ಮತಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ, ಜನರಿಗೆ ಅನುಕೂಲ ಕಲ್ಪಿಸಿ, ಅವರ ಹಿತಕಾಡುವುದು ಕೂಡ ನನ್ನ ಕರ್ತವ್ಯ. ಹೀಗಾಗಿ ಕ್ಷೇತ್ರದ ಜನತೆಗೆ ಆಹಾರ ಕಿಟ್ ಗಳ ವಿತರಣೆ ಮೂಲಕ ನೆರವು ನೀಡುತ್ತಿದ್ದೇವೆ.ಅಭಿವೃದ್ಧಿ ಕಾರ್ಯಗಳಯೊಂದಿಗೆ ಜನರ ಒಳಿತಾಗಿ ನಾವು ಶ್ರಮಿಸುತ್ತಿದ್ದೇವೆ. ಹೀಗಾಗಿ ಅವರ ಹಿತಕಾಪಾಡುವ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಅಗತ್ಯ ನೆರವು ನೀಡಿ, ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆರ್ಯನ ಖೋತ, ವಿನೋದ ಮಾನೆ, ಆನಂದ್ ಕವಾಳೆ, ಭಾವುಸೋ ಪೂಜಾರಿ, ಶಾಹು ಜಾಧವ, ರಾಜು ಡೊಂಗರೆ, ಶಿವಗೊಂಡ ಪಾಟೀಲ, ನುಲೆ, ತಾನಾಜಿ ಕುಳಮುಡೆ, ಸಂಜಯ ದೇಶಪಾಂಡೆ, ಜಯಶಿಂಗ ಮೊರೆ, ಅನಿಲ ಪಾಟೀಲ ಪಕ್ಷದ ಕಾರ್ಯಕರ್ತರು ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಹೈಟೆಕ್ ಅನುಭವ ಮಂಟಪ ಸ್ಥಾಪನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button