ಎರಡನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ನಿಪ್ಪಾಣಿಗೆ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆಗೆ ಅದ್ದೂರಿ ಸ್ವಾಗತ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಎರಡನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ತಮ್ಮ ಸ್ವಂತ ಕ್ಷೇತ್ರಕ್ಕೆ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ನಗರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಸಾವಿರಾರು ಕಾರ್ಯಕರ್ತರು ಸೇರಿ ಅದ್ದೂರಿ ಸ್ವಾಗತ ಮಾಡಿದರು.
ನಗರದ ಬೆಳಗಾವಿ ನಾಕಾದಿಂದ ಕೆಎಲ್‌ಇ ಸಂಸ್ಥೆಯ ಜಿ ಆಯ್ ಬಾಗೇವಾಡಿ ಕಾಲೇಜಿನ ಆವರಣದಲ್ಲಿರುವ ಆಶೀರ್ವಾದ ಮಂಗಲ ಕಾರ್ಯಾಲಯವರೆಗೆ ಕಾರ್ಯಕರ್ತರು ಪಾದಯಾತ್ರೆ ಮಾಡಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ತೆರೆದ ವಾಹನದಲ್ಲಿ ಪ್ರಮುಖ ಮಾರ್ಗದಲ್ಲಿ ಸಂಚರಿಸಿ ಡೊಳ್ಳು ವಾದ್ಯಗಳ ನಡುವೆ ಮಹಿಳಾ ಕಾರ್ಯಕರ್ತರು ಕುಣಿಯುತ್ತ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜ್ರಂಭಣೆಯಿಂದ ಸ್ವಾಗತಿಸಿದರು.
ಬೆಳಗಾವಿ ನಾಕಾ ಮತ್ತು ರಣದಿವೆ ಕಾಂಪ್ಲೆಕ್ಸ್ ಹತ್ತಿರ ಕಾರ್ಯಕರ್ತರು ಕ್ರೇನ್ ಮೂಲಕ ದೊಡ್ಡ ಗಾತ್ರದ ಹಾರ ಹಾಕಿ ಸ್ವಾಗತ ಮಾಡಿದರು. ನಗರದ ಆಶೀರ್ವಾದ ಕಾರ್ಯಲಯದಲ್ಲಿ ಭವ್ಯ ಸತ್ಕಾರ ಸಮಾರಂಭ ಆಯೋಜಿಸಿ ನೂತನ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸತ್ಕರಿಸಿದರು.
ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ನನ್ನ ಮೇಲೆ ರಾಜಕೀಯ ಷಡ್ಯಂತ್ರ ರಚಿಸಿ ವಿರೋಧಿಗಳು ನನ್ನ ಹೆಸರಿಗೆ ಕಪ್ಪು ಮಸಿ ಬೆಳೆಯುವ ಪ್ರಯತ್ನ ಮಾಡಿದರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಲು ಪ್ರಯತ್ನ ಮಾಡಲಾಗಿದೆ ಆದರೆ ನಾನು ಮಹಿಳಾ ಕಾರ್ಯಕರ್ತೆಯಾಗಿ ಕಳೆದ 25 ವರ್ಷಗಳಿಂದ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಪಕ್ಷ ನನಗೆ ಮೂರು ಬಾರಿ ಟಿಕೆಟ್ ನೀಡಿದೆ ಕ್ಷೇತ್ರದ ಜನ ನನ್ನನ್ನು ಎರಡು ಬಾರಿ ಆರಿಸಿ ಕೊಟ್ಟಿದ್ದಾರೆ ಕ್ಷೇತ್ರದ ಜನರ ಆಶೀರ್ವಾದ ಮತ್ತು ಪಕ್ಷ ಹಾಗೂ ರಾಷ್ಟ್ರೀಯ ನಾಯಕರು ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೆ ನನಗೆ ಸಚಿವ ಸ್ಥಾನ ನೀಡಿದಾರೆ. ನಾನು ಎಲ್ಲಾ ಅಗ್ನಿಪರೀಕ್ಷೆಗಳಿಂದ ಹೊರಗೆ ಬಂದಿದ್ದು ಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಮತ್ತು ರಾಜ್ಯಾದ್ಯಂತ ಸರಕಾರದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಿ ವಿರೋಧಿಗಳಿಗೆ ಉತ್ತರಿಸುವುದಾಗಿ ಹೇಳಿದರು.
ಶನಿವಾರ ವಿಜಯಪುರ ಜಿಲ್ಲೆಗೆ ತೆರಳಿ ಅಲ್ಲಿನ ಗಡಿ ಭಾಗದಲ್ಲಿ ನಿರ್ಮಿಸಿರುವ ಚಕ್ ಪೋಸ್ಟುಗಳನ್ನು ಪರಿಶೀಲಿಸುವುದಾಗಿ ಹೇಳಿದರು. ಸೋಮವಾರದಿಂದ ನಿಪ್ಪಾಣಿ ಕ್ಷೇತ್ರಾದ್ಯಂತ ಪ್ರವಾಹಪೀಡಿತ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರವಾಸ ಸಂತ್ರಸ್ಥರಿಗೆ ಸೂಕ್ತ ಪರಿಹಾರ ನೀಡುವುದಾಗಿ ಹೇಳಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ವಿರೋಧಿಗಳು ನಮಗೆ ತೊಂದರೆ ಮಾಡಲು ಪ್ರಯತ್ನಿಸಿದರು ವಿರೋಧಿಗಳ ಆರೋಪ ಹಾಗೂ ಹೇಳಿಕೆಗಳಿಗೆ ನಾವು ತಲೆಕೆಡಿಸಿಕೊಳ್ಳದೆ ಅಭಿವೃದ್ಧಿ ಕಾರ್ಯ ಮಾಡಿದ್ದೆವೆ ಇವತ್ತು ನಮ್ಮ ಕಾರ್ಯಕರ್ತರು ಈ ಬೃಹತ್ ವಿಜಯೋತ್ಸವವನ್ನು ಮಾಡಿ ವಿರೋಧಿಗಳಿಗೆ ಉತ್ತರ ನೀಡಿದ್ದಾರೆ.ಕೊನೆಯ ಬಾಲಿಗೆ ಸಿಕ್ಸ್ ಹೊಡೆದು ಮತ್ತೆ ಸಚಿವರಾಗಿದ್ದೆವೆ, ಬರುವ ದಿನಗಳಲ್ಲಿ ಕ್ಷೇತ್ರಾದ್ಯಂತ ಕೊರೊನಾ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅದ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ಸ್ಥಾಯಿ ಸಮಿತಿ ಚೇರಮನ್ ಸದ್ದಾಂ ನಗಾರಜಿ, ಜ್ಯೋತಿಪ್ರಸಾದ ಜೊಲ್ಲೆ, ಚಂದ್ರಕಾAತ ಕೋಟ್ಟಿವಾಲೆ, ರಾಮಗೋಂಡಾ ಪಾಟೀಲ. ನಗರಸಭೆ ಸದಸ್ಯರಾದ ರಾಜು ಗುಂದೇಶಾ, ದತ್ತಾ ಜೋತ್ರೆ, ಆಶಾ ಟವಳೆ, ಸೂನಲ್ ಕೂಠಾಡಿಯಾ, ದೀಪಕ ಪಾಟೀಲ, ಉದಯ ನಾಯಿಕ, ಅರುನಾ ಮುದಕುಡೆ, ವಿಜಯ ಟವಳೆ, ವಿಕಾಸ ವಾಸುದೇವ, ಸೇರಿದಂತೆ ಗ್ರಾಮೀಣ ಭಾಗದ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ