Cancer Hospital 2
Bottom Add. 3

*ಧೀರ ಮಹಿಳೆ ಒನಕೆ ಓಬವ್ವಳ ಧೈರ್ಯ, ಸಾಹಸಗುಣ ಮೈಗೂಡಿಸಿಕೊಳ್ಳಿ: ಸಾಹಿತಿ ಡಾ.ಸುಬ್ಬರಾವ ಎಂಟೆತ್ತಿನವರ*

ಬೆಳಗಾವಿಯಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಒನಕೆ ಓಬವ್ವ ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಹೈದರಾಲಿಯ ಸೈನ್ಯದೊಂದಿಗ ಏಕಾಂಗಿಯಾಗಿ ಹೋರಾಡಿದ ಒಬ್ಬ ಧೀರ ಮಹಿಳೆ. ಇಂದಿನ ಯುವ ಪೀಳಿಗೆ ಅವರ ಧೈರ್ಯ, ಸಾಹಸ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಾಹಿತಿಗಳಾದ ಡಾ.ಸುಬ್ಬರಾವ ಎಂಟೆತ್ತಿನವರ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ (ನ.11) ರಂದು ಏರ್ಪಡಿಸಲಾಗಿದ್ದ ಒನಕೆ ಓಬವ್ವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಓಬವ್ವ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಹೈದರಾಲಿಯ ನೂರಾರು ಸೈನಿಕರನ್ನು ಎದುರಿಸಿದ ವೀರ ಮಹಿಳೆ ಹಾಗೆಯೇ ಎಲ್ಲ ಮಹಿಳೆಯರು ಶಿಕ್ಷಣದ ಜೊತೆಗೆ ತಮ್ಮನ್ನು ರಕ್ಷಿಸಿಕೊಳ್ಳುವ ಇಚ್ಚಾಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಓಬವ್ವನ ಹೆಸರಿನಲ್ಲಿ ಪ್ರಶಸ್ತಿ ನೀಡಲು ಮನವಿ:

ಒನಕೆ ಓಬವ್ವನ ಸವಿನೆನಪಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಒನಕೆ ಓಬ್ಬವ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು. ಎಲ್ಲ ಸರಕಾರಿ ಕಚೇರಿಗಳಲ್ಲಿ ಒನಕೆ ಓಬವ್ವ ಜಯಂತಿ ಆಚರಣೆ ಮಾಡವುದರ ಜೊತೆಗೆ ಒನಕೆ ಓಬವ್ವ ಕುರಿತು ಮುಂದಿನ ವರ್ಷದಿಂದ ವಿಚಾರ ಸಂಕೀರ್ಣ ನಡೆಸಬೇಕು ಎಂದು ಸಾಹಿತಿಗಳಾದ ಡಾ.ಸುಬ್ಬರಾವ ಎಂಟೆತ್ತಿನವರ ಅವರು ಸರಕಾರಕ್ಕೆ ಮನವಿ ಮಾಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಉದಯ ಕುಮಾರ್ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮುಖಂಡರಾದ ಮಲ್ಲೇಶ ಚೌಗಲೆ, ವಿವೇಕ ಕರ್ಪೆ ಮಲ್ಲಿಕಾರ್ಜುನ ರಾಶಿಂಗೆ, ಮಹದೇವ ತಳವಾರ ಮತ್ತಿತರರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page