*ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥಸಂಚಲನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಜಾಗೃತಿ ಕುರಿತು ಪೊಲೀಸ್ ಇಲಾಖೆಯಿಂದ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥಸಂಚಲನ ನಡೆಸಲಾಯಿತು.
ಬೆಳಗಾವಿ ನಗರದಲ್ಲಿ ಸಾರ್ವಜನಿಕ ಶ್ರೀ.ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ರಾಪಿಡ್ ಆ್ಯಕ್ಷನ್ ಫೋರ್ಸ (ಆರ್ಎಎಫ್) ಮತ್ತು ಸ್ಥಳಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪಥಸಂಚಲನ (ರೂಟ್ ಮಾರ್ಚ)ವನ್ನು ಕೈಗೊಳ್ಳಲಾಯಿತು.
ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಥಸಂಚಲನ
ಈ ಪಥಸಂಚನಲವು ಅಂಬೇವಾಡಿ ಗ್ರಾಮದ ಗಣೇಶ ಗಲ್ಲಿ, ಮಾರುತಿ ಗಲ್ಲಿ, ಅಲತಗಾ ಕ್ರಾಸ್, ಕಡೋಲಿ ಗ್ರಾಮದ ಪೇಠ ಗಲ್ಲಿ, ಸಾಹುಕಾರ ಗಲ್ಲ, ಕಛೇರಿ ಗಲ್ಲಿ, ಮಾಯನ್ನಾ ಗಲ್ಲ, ಲಕ್ಷ್ಮೀ ಗಲ್ಲಿ, ಬಿ. ಕೆ. ಕಂಗ್ರಾಳಿಯ ಎಲ್ಲ ಮುಖ್ಯ ರಸ್ತೆಗಳಲ್ಲಿ ಕೈಗೊಳ್ಳಲಾಯಿತು.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ಹದ್ದಿಯಲ್ಲಿ ಪಥಸಂಚಲನ
ಈ ಪಥಸಂಚನಲವು ಮಚ್ಛೆ ಗ್ರಾಮದಲ್ಲಿ ಆನಂದ ಗಲ್ಲಿ, ಪಾಟೀಲ ಗಲ್ಲಿ, ಬಸ್ತಿ ಗಲ್ಲಿ, ಲಕ್ಷ್ಮೀ ಗಲ್ಲಿ, ಮರಗಾಯ ಗಲ್ಲಿ, ಕಛೇರಿ ಗಲ್ಲಿ, ಗಣಪತ ಗಲ್ಲಿ ಬಳಿ ಮುಕ್ತಾಯಗೊಂಡಿರುತ್ತದೆ. ಪೀರನವಾಡಿ ಗ್ರಾಮದಲ್ಲಿ ತಾರಾ ನಗರ. ದರ್ಗಾ- ಜಾಂಬೋಟಿ ರೋಡ್, ಪಾಟೀಲ್ ಗಲ್ಲಿ, ಬೀರದೇವ ಗಲ್ಲಿ, ರಾಮದೇವ ಗಲ್ಲ, ಸಿದ್ದೇಶ್ವರ ಗಲ್ಲಿ, ಜಾಂಟೋಟಿ ರಸ್ತೆ, ಪೀರನವಾಡಿ ನಾಕಾ ಬಳಿ ಮುಕ್ತಾಯವಾಗಿರುತ್ತದೆ.
ಬೆಳಗಾವಿ ನಗರದ ಸಾರ್ವಜನಿಕರು ಗಣೇಶ ಚತುರ್ಥಿಯ ಹಬ್ಬದ ಆಚರಣೆ ಕಾಲಕ್ಕೆ ಎಲ್ಲರೂ ಶಾಂತ ರೀತಿಯಿಂದ ಹಾಗೂ ಯಾವುದೇ ಕೋಮಿನ ಜನರ ಭಾವನೆಗಳಿಗೆ ದಕ್ಕೆ ಆಗದಂತೆ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಿಕೊಂಡು ಬರುವುದು. ಇದರೊಂದಿಗೆ ಎಲ್ಲ ನಿಯಮಗಳನ್ನು ಪಾಲಿಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಬರುವಲ್ಲಿ ಪೊಲೀಸ್ ಇಲಾಖೆಗೆ ಸಹಕರಿಸುವಂತೆ ಕೋರಲಾಗಿದೆ.