Kannada NewsLatest

ಬೆಳಗಾವಿಯಲ್ಲಿ ಸ್ಪಾ ಸೆಂಟರ್ ಹೆಸರಲ್ಲಿ ಅನೈತಿಕ ಚಟುವಟಿಕೆ; ಇಬ್ಬರ ಬಂಧನ

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕುಂದಾನಗರಿಯಲ್ಲಿ ಮಸಾಜ್ ಸೆಂಟರ್ ಹೆಸರಲ್ಲಿ ಅನೈತ ಚಟುವಟಿಕೆ ನಡೆಸುತ್ತಿದ್ದ ತಾಣದ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬರು ಅರೋಪಿಗಳನ್ನು ಬಂಧಿಸಿದ್ದು, ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

ಟಿಳಕವಾಡಿ ಬಳಿ ನ್ಯೂ ಗೇಟ್ ವೇ ಯುನಿಸೆಕ್ಸ್ ಸ್ಪಾ ಹೆಸರಲ್ಲಿ ಮಸಾಜ್ ಸೆಂಟರ್ ತೆರೆಯಲಾಗಿದ್ದು, ಇಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಖಚಿತ ಮಾಹಿತಿ ಪಡೆದ ಪೊಲೀಸರು, ಸಿಪಿಐ ಗಡ್ಡೆಕರ್ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಯುವತಿಯರನ್ನು ರಕ್ಷಿಸಿದ್ದಾರೆ.

Home add -Advt

ಮಸಾಜ್ ಸೆಂಟರ್ ಹೆಸರಲ್ಲಿ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕೇದಾರಿ ಶಿಂಧೆ ಹಾಗೂ ಪ್ರಕಾಶ್ ಯಳ್ಳೂಕರ್ ಎಂದು ಗುರುತಿಸಲಾಗಿದೆ. ಸ್ಪಾ ಹೆಸರಲ್ಲಿ ಅನುಮತಿ ಪಡೆದು ಮಸಾಜ್ ಸೆಮ್ತರ್ ನಲಿ ಅಮಾಯಕ ಹೆಣ್ಣುಮಕ್ಕಳನ್ನು ಅನಿತಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button