ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಹಾಗೂ ತಾಲೂಕಿನಲ್ಲಿ 110 ಕೆವಿ 2 ನೇ ವಿದ್ಯುತ್ ಮಾರ್ಗವನ್ನು 220 ಕೆವಿ ಇಂಡಾಲ್ ಬೆಳಗಾವಿದಿಂದ 110/11 ಕೆವಿ ವಿದ್ಯುತ್ ಕೇಂದ್ರ ಮಚ್ಛೆ ವರೆಗೆ ಮೇಲುಮಾರ್ಗ 28.295 ಕಿಮಿ ಹಾಗೂ ಭೂಗತ ಮಾರ್ಗ 1.245 ಕಿಮೀ ಒಟ್ಟು 29.54 ಕಿಮೀ ಉದ್ದದ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ.
ಸದರಿ 110 ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಬೆಳಗಾವಿ ಜಿಲ್ಲೆಯ ಹಾಗೂ ತಾಲೂಕಿ ಯಮನಾಪೂರ, ಗೌಡವಾಡ, ಕಂಗ್ರಾಳಿ ಬಿ ಕೆ ಕಡೋಲಿ,ಅಳತಗೆ, ಅಂಬೇವಾಡಿ, ಮಣ್ಣೂರು, ಗೋಜಗಾ, ಉಚಗಾಂವ, ಸುಳಗಾ, ಬೆನಕನಹಳ್ಳಿ, ಮಂಡೋಳಿ ಚೇತನಮಾಳ, ಪೀರಣವಾಡಿ, ಕುಟ್ಟಲವಾಡಿ, ಮಚ್ಛೆ ಹಾಗೂ ಅಕ್ಕಪಕ್ಕದ ಹದ್ದಿನಲ್ಲಿ ಬರುವ ಹಳ್ಳಿಗಳು ಮತ್ತು ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ಆದಕಾರಣ ವಿದ್ಯುತ್ ಪ್ರಸರಣ ಮಾರ್ಗವನ್ನು ಡಿಸೆಂಬರ್ 11 ರಂದು ಇಲ್ಲವೆ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವದು. ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ ಅಥವಾ ತಂತಿಗಳನ್ನು ಮುಟ್ಟುವುದಾಗಲಿ ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ/ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಪ್ರಾಣಾಪಾಯಕವಾಗುವ ಸಂಭವವಿರುತ್ತದೆ.
ಆದ್ದರಿಂದ ಸಾರ್ವಜನಿಕರು ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಳಗಾವಿಯ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು (ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಅಪಹರಣ ಮಾಡಿ ಹಣ ಸುಲಿಗೆ ಮಾಡಿದ್ದ 7 ಜನರ ಬಂಧನ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ