Kannada NewsLatest

ಗೋವು ಇದ್ದ ಮನೆ ಭಾಗ್ಯಶಾಲಿ – ಸಚಿವ ಪ್ರಭು ಚವ್ಹಾಣ್

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಯಾರ ಮನೆಯಲ್ಲಿ ಗೋವು ಇರುತ್ತದೋ ಆ ಕುಟುಂಬ ಭಾಗ್ಯಶಾಲಿ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯಪಟ್ಟಿದ್ದಾರೆ.

ನಿಪ್ಪಾಣಿಯಲ್ಲಿ ಆರ್.ಐ.ಡಿ.ಎಫ್ ಯೋಜನೆಯಡಿಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪಶು ಆಸ್ಪತ್ರೆಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಗೋವು ನಮಗೆ ಪೂಜನೀಯ, ತಾಯಿಯ ಸಮಾನ ನಮ್ಮ ಆರೋಗ್ಯವನ್ನು ಎಲ್ಲ ವಿಧಗಳಿಂದ ಕಾಪಾಡುತ್ತಿರುವ ಗೋವನ್ನು ಎಂದು ಕಸಾಯಿಖಾನೆಗೆ ಹೋಗಲು ಬಿಡಬಾರದು. ಹಾಲು, ಮೊಸರು, ತುಪ್ಪ, ಗೋಮೂತ್ರ ಸಗಣಿ ಎಲ್ಲವನ್ನು ಇಂದು ನಾವು ಯಥೇಚ್ಛವಾಗಿ ಬಳಸುತ್ತಿದ್ದೇವೆ.

ಕಟ್ಟಡ ನಿರ್ಮಾಣಕ್ಕೆ ಎಪಿಎಂಸಿ ಯಿಂದ ಸ್ಥಳ ನೀಡಿದ್ದು ಸಂತಸವಾಗಿದೆ. ಇಲಾಖೆಗಗಳ ಮಧ್ಯ ಈ ತರಹದ ಸಮನ್ವಯತೆ ಇದ್ದರೆ ಸರ್ಕಾರಿ ಕೆಲಸಗಳು ಅತ್ಯಂತ ಸರಾಗವಾಗಿ ನಡೆಯುವುದಲ್ಲದೆ ರೈತಾಪಿ ವರ್ಗಕ್ಕೂ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು. ಕಟ್ಟಡದ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 21 ಲಕ್ಷ ನೀಡುವುದಾಗಿ ಸಚಿವ ಪ್ರಭು ಚವ್ಹಾಣ್ ಈ ಸಂಧರ್ಭದಲ್ಲಿ ಘೋಷಣೆ ಮಾಡಿದರು.

Home add -Advt

ಈ ಸಂಧರ್ಭದಲ್ಲಿ ಮಠದ ಗೋಶಾಲೆಗೂ ಸಹ ಈ ಭೇಟಿ ನೀಡಲಾಯಿತು. ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಪಶುಸಂಗೋಪನೆ ಇಲಾಖೆಯ ಆಯುಕ್ತ ಬಸವರಾಜೇಂದ್ರ ಹಾಗೂ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Related Articles

Back to top button