ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್ಇ ಸಂಗೀತ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ದಿವಂಗತ ಪಂಡಿತ್ ಹಯವದನ ಜೋಶಿ ಇವರ 11ನೇ ಪುಣ್ಯತಿಥಿ ನಿಮಿತ್ತ ಸಮೂಹ ಭಜನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಯಶಸ್ವಿಯಾಗಿ ಜರಗಿದವು.
ಜನೆ ಸ್ಪರ್ಧೆಗಳಲ್ಲಿ ಬೆಳಗಾವಿ ಹಾಗೂ ಸುತ್ತಮುತ್ತಲಿನ ಸ್ಥಳಗಳಿಂದ ಖಾನಾಪುರ, ಕಾಕತಿ, ನಂದಗಡ, ಎಲ್ಲ ಕ್ಷೇತ್ರದಿಂದ ಒಟ್ಟು 22 ಭಜನೆ ಮಂಡಳಿ ಗಳು ಭಾಗವಹಿಸಿದ್ದರು. ಸ್ಪರ್ಧೆಗೆ ನಿರ್ಣಾಯಕರಾಗಿ ಗದುಗಿನ ಪಂಡಿತ್ ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಸುಮಿತ್ರ ಕಾಡದೇವರಮಠ ಹಾಗೂ ಕೊಲ್ಲಾಪುರದ ಡಾ ರಂಜನ ಕುಲಕರ್ಣಿ ಕಾರ್ಯನಿರ್ವಹಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಜೆ, ಎನ್, ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾಕ್ಟರ್ ರಾಜೇಶ ಪವಾರ್ ಉಪಸ್ಥಿತರಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವೇದಿಕೆಯ ಲ್ಲಿರುವ ಎಲ್ಲ ಗಣ್ಯಮಾನ್ಯರು ಸ್ಪರ್ಧೆಯ 3 ಬಹು ಮಾನಗಳನ್ನು ಘೋಷಿಸಿದರು. ಪ್ರಥಮ ಬಹುಮಾನ
ರೂ 5000,ಕ್ರಾಂತಿ ಮಹಿಳಾ ಮಂಡಳಿ ಖಾಸಬಾಗ ಬೆಳಗಾವಿ. ದ್ವಿತೀಯ ಬಹುಮಾನ ರೂ 3000 ಸಾಧನಾ ಭಜನೆ ಮಂಡಳಿ ಬೆಳಗಾವಿ, ಹಾಗೂ ತೃತೀಯ ಬಹುಮಾನ ರೂ 2000 ರವಳನಾಥ ಭಜನೆ ಮಂಡಳಿ ಬೆಳಗಾವಿ ಇವರು ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಸಂಯೋಜಕರಾದ ಡಾಕ್ಟರ್ ರಾಜೇಂದ್ರ ಭಾಂಡ ನಕರ ಸಭೆಯನ್ನುದ್ದೇಶಿಸಿ ಮಾತನಾಡಿ 2008ರಲ್ಲಿ ದಿವಂಗತ ಪಂಡಿತ್ ಹಯವದನ ಜೋಶಿ ಅವರು ಸಂಗೀತ ವಿಭಾಗವನ್ನು ಹುಟ್ಟುಹಾಕಿದರು ,ಅವರ ಒಂದು ಮಾರ್ಗದರ್ಶನದಲ್ಲಿ ಇವತ್ತಿನ ಸಂಗೀತ ವಿಭಾಗದ ಸಿಬ್ಬಂದಿಗಳು 13 ವರ್ಷದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸು ತ್ತಾ ಬಂದಿದ್ದಾರೆ ಎಂದು ಎಲ್ಲ ಸಿಬ್ಬಂದಿಗಳನ್ನು ಪ್ರಶಂಸಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಡಾ ರಾಜೇಶ್ ಪವಾರ ಮಾತನಾಡಿ ಸಂಗೀತ ವಿಭಾಗ ನನ್ನದೇ ಮನೆಯಾಗಿದ್ದು ಹೊರಗಡೆ ನಾನು ಅನೇಕ ಸನ್ಮಾನಗಳನ್ನು ಸ್ವೀಕರಿಸಿದ್ದು ಆದರೆ ಇವತ್ತು ನನ್ನ ಮನೆಯಲ್ಲಿ ನನಗೆ ಸನ್ಮಾನ ದೊರಕಿದ್ದು ಅತ್ಯಂತ ಖುಷಿ ತಂದಿದೆ ಎಂದು ಅಭಿಮಾನ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಪ್ರಥಮದಲ್ಲಿ ಸಂಗೀತ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಸಂಗೀತ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಸ್ನೇಹಾ ರಾಜು ರಿಕರ್ ಸಭೆಯನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಿದರು, ಡಾಕ್ಟರ್ ಸುನೀತಾ ಪಾಟೀಲ್ ಹಾಗೂ ಡಾಕ್ಟರ್ ದುರ್ಗಾ ನಾಡ್ಕರ್ಣಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸೀಮಾ ಕುಲಕರ್ಣಿ ವಂದಿಸಿದರು. ಜಿತೇಂದ್ರ ಸಾಬಣ್ಣವರ್, ಯಾದವೇಂದ್ರ ಪೂಜಾರಿ, ರಾಜೇಂದ್ರ ಭಾಗವತ್, ತಬಲಾ ಹಾಗೂ ಹಾರ್ಮೋನಿಯಂ ಸಾಥ್ ನೀಡಿದರು. ಶ್ರೀಮತಿ ಸುಹಾಸಿನಿ ಹಾಗೂ ವಿದ್ಯಾ ದೇಶಪಾಂಡೆ, ಶ್ರೇಯಾ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ