Kannada NewsLatest

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಗಡಿ ಕ್ಷೇತ್ರವಾಗಿರುವ ನಿಪಾಣಿ ಕ್ಷೇತ್ರದಲ್ಲಿ ಹೆಚ್ಚು ಗ್ರಾಮೀಣ ಪ್ರದೇಶಗಳಿವೆ. ಈ ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಕಳೆದ ಏಂಟು ವರ್ಷಗಳಿಂದ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಸುಸಜ್ಜಿತ ಕಟ್ಟಡಗಳು, ಗ್ರಂಥಾಲಯ, ಪ್ರಯೋಗಾಲಯ ಮತ್ತು ಉನ್ನತ ಶಿಕ್ಷಣ ಪಡೆದ ಶಿಕ್ಷಕರನ್ನು ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣವಂತರನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಸಾಮಾಜಿಕ, ರಾಜಕೀಯ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸುವಾಗ ಶಿಕ್ಷಣದ ಮಹತ್ವ ಅರಿತು ಶಿಕ್ಷಣ ಕ್ಷೇತ್ರಕ್ಕೆ ಹೇಚ್ಚಿನ ಆದ್ಯತೆ ನೀಡಿಲಾಗುತ್ತಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸೋಮವಾರ ಪಟ್ಟಣದಲ್ಲಿ ತಮ್ಮ ಪ್ರಯತ್ನದಿಂದ ಮಂಜೂರಾದ 10.60 ಲಕ್ಷ ರೂ.ಗಳ ಅನುದಾನದಡಿ ಸರಕಾರಿ ಕನ್ನಡ ಮಕ್ಕಳ ಶಾಲಾ ಕೊಠಡಿಗಳ ನರ‍್ಮಾಣಕ್ಕೆ ಭೂಮಿಪೂಜೆ ಕರ‍್ಯಕ್ರಮಕ್ಕೆ ಚಾಲನೆ ನಿಡಿ ಮಾತನಾಡಿದ ಅವರು, ಬೋರಗಾಂವದಲ್ಲಿ ಈಗಾಗಲೇ ನಾಲ್ಕು ಹೊಸ ಶಾಲಾ ಕೊಠಡಿಗಳನ್ನು ನರ‍್ಮಿಸಲಾಗಿದ್ದು, ಸರಕಾರಿ ಪದವಿಪರ‍್ವ ಕಾಲೇಜಿಗೆ ಎರಡು ಕೊಠಡಿಗಳನ್ನು ನರ‍್ಮಿಸಲಾಗಿದ್ದು, ಚರಂಡಿ, ಕಟ್ಟಡ, ರೈತರಿಗೆ ಸುಸಜ್ಜಿತ ರಸ್ತೆ, ಶುದ್ಧ ನೀರು, ಸಮಗ್ರ ಅಭಿವೃದ್ಧಿ ಸೇರಿದಂತೆ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಜೊಲ್ಲೆ ಹೇಳಿದರು. ಮುಂದಿನ ದಿನಮಾನಗಳಲ್ಲಿ ನಗರದ ರ‍್ವಾಂಗೀಣ ಅಭಿವೃದ್ಧಿಯಾಗಲಿದೆ ಎಂದು ಸಚಿವ ಜೊಲ್ಲೆ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸುನೀಲ ಪಾಟೀಲ, ವಿಷ್ಣು ತೋಡಕರ, ದಾದಾಸೋ ಭಾದುಲೆ, ಜಮೀಲ್ ಅತ್ತಾರ, ಪ.ಪಂ ಸದಸ್ಯ ಶರದ ಜಂಗಟೆ, ಬಾಬಾಸಾಹೇಬ ಚೌಗುಲೆ, ಶಿವಾಜಿ ಭೋರೆ, ರಮೇಶ ಮಾಲಗಾವೆ, ಅಜಿತ ತೇರದಾಳೆ, ರ‍್ಷಾ ಹವಲೆ, ರಾಣಿ ಬೇವಿನಕಟ್ಟಿ, ಪಿಂಟು ಬೇವಿನಕಟ್ಟಿ, ಅಯೂಬ್ ಮಕಾದಾರ್, ರಾಜು ಕುಂಬಾರ, ಶೇಶು ಐದಮಾಳೆ, ಕಾಕಾಸಾಹೇಬ ವಾಘಮೋಡೆ, ಧೋಂಡಿರಾಮ ಭೋರೆ, ಲೋಕೋಪಯೋಗಿ ಇಲಾಖೆ ಅಭಿಯಂತರ ಬಿ.ಬಿ.ಬೇಡಕಿಹಾಳೆ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಕೆ ಎಲ್ ಇ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಅಭಿಯಾನಕ್ಕೆ ಸಂಸದೆ ಮಂಗಳಾ ಅಂಗಡಿ ಚಾಲನೆ
ಆತ್ಮಹತ್ಯೆಗೆ ಶರಣಾದ ಉದ್ಯಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button