Kannada NewsLatest

ಬೋರಗಾಂವಲ್ಲಿ ಕೋವಿಡ್ ಲಸಿಕೆ ಅಭಿಯಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ: ದೇಶದಲ್ಲಿ ಕೋವಿಡ್ ನಿಯಂತ್ರಿಸಲು ಪ್ರಧಾನಿ ಮೋದಿಯವರು ಕಳೇದ 2 ವರ್ಷಗಳಿಂದ ಪ್ರಯತ್ನಿಸುತ್ತಿದ್ದು, ಅವರ ಪ್ರಯತ್ನ ಸಫಲವಾಗುತ್ತಿದೆ. ಮೂರನೆ ಅಲೆಯಲ್ಲಿ ಮಕ್ಕಳಿಗೆ ಕೋವಿಡ್ ಸೋಂಕು ಬರಬಾರದು ಎಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರವು 15-18 ವರ್ಷದ ಮಕ್ಕಳಿಗ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಿದ್ದು, ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವಲ್ಲಿ ತಾಲೂಕಾ ಆರೋಗ್ಯಾಡಳಿತ ಬದ್ಧವಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸೋಮವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡ ಕೋವಿಡ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ತಮ್ಮ ಮಕ್ಕಳ ಬಗ್ಗೆ ಪಾಲಕರು ಈಗ ಚಿಂತಿಸುವಹಾಗಿಲ್ಲ, ಕೇಂದ್ರ ಹಾಗೂ ರಾಜ್ಯ ಸರ್ಕಾರವು 15-18 ವರ್ಷದ ಎಲ್ಲ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಲಿದೆ. ಮಕ್ಕಳು ತಮ್ಮ ಆಧಾರ ನೊಂದಣಿ ಮಾಡಿ ಲಸಿಕೆ ಲಾಭ ಪಡೇದು ಸುರಕ್ಷಿತರಾಗಿರಿ. ಈ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಬೇಕೆಂದು ಹೇಳಿದರು.

ತಾಲೂಕಾ ಆರೋಗ್ಯಾಧಿಕಾರಿ ಡಾ.ವಿಠ್ಠಲ ಶಿಂದೆ ಸ್ವಾಗತಿಸಿ, ಲಸಿಕೆ ಅಭಿಯಾನದ ಬಗ್ಗೆ ಮಾಹಿತಿ ನಿಡಿದರು.

ಅಭಿಯಾನದಲ್ಲಿ ಬಿಜಪಿ ಮುಖಂಡ ಸುನೀಲ ಪಾಟೀಲ, ಪ.ಪಂ ಸದಸ್ಯ ಶರದ ಜಂಗಟೆ, ವಿಷ್ಣು ತೋಡಕರ, ಜಮೀಲ ಅತ್ತಾರ, ಬಾಬಾಸಾಬ ಚೌಗುಲೆ, ರಮೇಶ ಮಾಲಗಾಂವೆ, ದಾದಾ ಭಾದುಲೆ, ಅಜೀತ ತೇರದಾಳೆ, ರಾಣಿ ಬೇವಿನಕಟ್ಟಿ, ಪಿಂಟು ಬೇವಿನಕಟ್ಟಿ, ಅಯುಬ ಮಕಾಂದರ, ಶೇಸು ಐದಮಾಳೆ, ಮಹಪತಿ ಖೋತ, ಮುಖ್ಯಾಧಿಕಾರಿ ಪಿ.ಎ.ಕಲ್ಯಾಣಶೇಟ್ಟಿ, ಆರೋಗ್ಯಾಧಿಕಾರಿ ವಿಲೋಲ ಜೋಶಿ, ರಾಜು ಕುಂಭಾರ, ಅಪ್ಪರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಾಯಕರ, ಶಿವಾಜಿ ಭೋರೆ, ಆರ.ಎಚ.ತಿಪ್ಪೆಮಣಿ, ಆರ.ಆರ.ಭಿಮನ್ನವರ ಸೇರಿದಂತೆ ಬಿಜೆಪಿ ಮುಖಂಡರು, ಆರೋಗ್ಯ ಸಿಬ್ಬಂದಿ, ಆಶಾ ಹಾಗೂ ಅಂಗಣವಾಡಿ ಕಾರ್ಯಕರ್ತೇಯರು ಹಾಜರಿದ್ದರು.
ಕೋವಿಡ್ ತೊಲಗಿಸಲು ಪಣ ತೋಡೋಣ: ಸಿಎಂ ಬೊಮ್ಮಾಯಿ ಕರೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button