ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈ ಹೆಮ್ಮಾರಿ ಸೋಂಕು ದೇಶಾದ್ಯಂತ ವ್ಯಾಪಿಸಿದ್ದು. ಇದನ್ನು ನಿಯಂತ್ರಿಸಿ , ಜನಸಾಮಾನ್ಯರನ್ನು ರಕ್ಷಿಸುವಲ್ಲಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಿಡಿಕಾರಿದ್ದಾರೆ.
ನಗರದಲ್ಲಿ ಮಾದ್ಯಮದರೊಂದಿಗೆ ಮಾತನಾಡಿದ ಅವರು, ಸೋಂಕಿತರ ಪರೀಕ್ಷೆ ವರದಿ, ಸಂಪರ್ಕಿತರ ಪತ್ತೆ ಹಾಗೂ ಲಸಿಕೆ ವಿತರಣೆವರೆಗೂ ಸರ್ಕಾರವು ಎಡವಿದೆ. ರಾಷ್ಟ್ರಾದ್ಯಂತ ಕೊರೋನಾ ಅಲೆ ರೌದ್ರನರ್ತನ ತಾಳಿದೆ. ಈ ಸಂಗ್ಧಿದ ಸ್ಥಿತಿಯಲ್ಲಿ ಸರ್ಕಾರ ಎಚ್ಚತ್ತಕೊಂಡು ಲಸಿಕೆ ವಿತರಿಸುವ ಕಾರ್ಯವಾಗಬೇಕಿದೆ . ಇದ್ಯಾವುದೇ ಹಂತದಲ್ಲಿ ಸರ್ಕಾರ ಜನರಪರ ಕಾಳಜಿ ಮಾಡುತ್ತಿಲ್ಲ.
ರಾಜ್ಯದಲ್ಲಿ 20 ರಿಂದ 35 ವಯೋಮಾನವರಿಗೆ ಸೋಂಕು ತಗುಲುತ್ತಿದೆ. ಆದರೆ, ಸರ್ಕಾರ ಮಾತ್ರ 45 ವರ್ಷಕ್ಕೂ ಮೇಲ್ಪಟ್ಟವರಿಗೆ ಮಾತ್ರ ಈ ಲಸಿಕೆ ನೀಡುತ್ತಿದೆ. ಕಳೆದ, 15 ದಿನಗಳಲ್ಲಿ ಯುವಕರು ಸೋಂಕಿಗೆ ಬಲಿಯಾಗಿದ್ದಾರೆ. ಸರ್ಕಾರ ಇದರ ಬಗ್ಗೆ ಸೂಕ್ಷ್ಮವಾಗಿ ಗಮಿಸಿಲ್ಲ ಎಂದು ಸತೀಶ ಜಾರಕಿಹೊಳಿ ಚಾಟಿ ಬೀಸಿದರು.
ಚಾಮರಾಜನಗರದಲ್ಲಿ ನಡೆದ ದುರತಂವೇ ಜ್ವಲಂತ ಸಾಕ್ಷಿ..! ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ಸಾಲು-ಸಾಲು ಸಾವುಗಳಾಗುತ್ತಿವೆ. ಬಡಪಾಯಿಗಳ ಸ್ಥಿತಿ ಏನು? ಎಂದು ಪ್ರಶ್ನಿಸಿದ್ದಾರೆ. ಜನರ ಕಣ್ಣಿಗೆ ಮಣ್ಣೆರೇಚಲು, ಕಾಟಾಚಾರಕ್ಕೆ ನಿರ್ಧಾರ ತೆಗೆದುಕೊಂಡು ನೈಟ್ ಕರ್ಪ್ಯೂ, 50% ಜನಸಂದಣಿಯಂತಹ ಅವೈಜ್ಞಾನಿಕ ನಿರ್ಧಾರದ ಬದಲು ಲಸಿಕೆ ನೀಡುವತ್ತ ಗಮನ ಹರಿಸಬೇಕು.
ರಾಜಕೀಯ ಪ್ರಚಾರದಲ್ಲಿ ಬಿಜೆಪಿ ಸರ್ಕಾರಗಳು ಮೈಮರೆಯದೆ, ಆದಷ್ಟು ಬೇಗ ಎಲ್ಲ ವಯೋಮಾನದವರಿಗೆ ಲಸಿಕೆ ಸಿಗುವಂತೆ ಮಾಡಬೇಕು ಎಂದರು.
ಸರ್ಕಾರದ ನಿರ್ಲಕ್ಷ್ಯ ಮುಂದುವರಿದರೆ ಬೀದಿಗಿಳಿಯಬೇಕಾಗುತ್ತದೆ: ಸಿದ್ದರಾಮಯ್ಯ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ