Kannada NewsLatest

ಕಾಂಗ್ರೆಸ್ ಸಂಘಟಿತಗೊಳಿಸಲು ಪಂಚರಾಜ್ಯಗಳ ಚುನಾವಣೆ ಒಂದು ಪಾಠ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಾಂಗ್ರೆಸ್ ಬದಲಾವಣೆಗೆ ಹಾಗೂ ಹೆಚ್ಚು ಸಂಘಟಿತಗೊಳಿಸಲು ಈ ಪಂಚರಾಜ್ಯಗಳ ಚುನಾವಣೆ ಒಂದು ಪಾಠವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲಡೆ ಕಾಂಗ್ರೆಸ್‌ ಮುಕ್ತ ಕರ್ನಾಟಕವಾಗಲಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಅದು ಅವರು ಕಾಣುತ್ತಿರುವ ಹಗಲು ಕನಸು. ಎಂದೇದಿಗೂ ಕಾಂಗ್ರೆಸ್‌ ಮುಕ್ತ ಮಾಡಲು ಅವರಿಂದ ಸಾಧ್ಯವಿಲ್ಲ. ಗೋವಾದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಮ್ಮ ಪಕ್ಷಕ್ಕೆ ತೊಂದರೆಯಾಗಿದೆ ವಿನಃ ಯಾವ ದೊಡ್ಡ ಮಟ್ಟದಲ್ಲಿ ನಾವೇನು ಸೋತಿಲ್ಲ ಎಂದರು.

ಗೋವಾದಲ್ಲಿಹಾಗೂ ಉತ್ತರ ಪ್ರದೇಶದಲ್ಲಿ ಮತಗಳು ವಿಭಜನೆಯಾಗಿದ್ದರಿಂದ ನಾವು ಸೋಲಲಿಕ್ಕೆ ಕಾರಣವಾಗಿದೆ. ಗೋವಾದಲ್ಲಿ ನಮ್ಮ ವೋಟ್‌ ಬ್ಯಾಂಕ್‌ ಶೇ 32ರಷ್ಟಿದ್ದು, ಅದರಲ್ಲಿ ಕೇವಲ ಶೇ. 2ರಷ್ಟು ಮಾತ್ರ ಕಡಿಮೆಯಾಗಿದೆ. ಹೊರತು ಅಷ್ಟು ದೊಡ್ಡಮಟ್ಟದಲ್ಲಿ ವೋಟ್‌ ಕಳೆದುಕೊಂಡಿಲ್ಲ.ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಸಂಘಟಿಸಿ ರಾಜ್ಯದಲ್ಲಿ ಅಧಿಕಾರ ತರಲು ಶ್ರಮಿಸಲಾಗುವುದು ಎಂದರು.

ಕರ್ನಾಟಕದಲ್ಲಿ ಡಿಫಿರೆಂಟ್‌ ಚುನಾವಣೆ: ನಮ್ಮ ರಾಜ್ಯದಲ್ಲಿ ನಾವು ಪಕ್ಷ ಮೇಲೆ ಚುನಾವಣೆ ಮಾಡಲಾಗುತ್ತೆ ಹೊರತು ನಾಯಕತ್ವದ ಮೇಲಲ್ಲ, ನಮ್ಮದು ಪಕ್ಷಾದರಿತ. ಬೇರೆ ರಾಜ್ಯಗಳ ಫಲಿತಾಂಶ ನಮ್ಮ ರಾಜ್ಯಕ್ಕೆ ಹೋಲಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಡಿಫಿರೆಂಟ್‌ ಚುನಾವಣೆ ನಡೆಯುತ್ತೆದೆ ಎಂದರು.

ಬಿಜೆಪಿಯವರು ಒಮ್ಮಲೇ ಮೇಲೆ ಬಂದಿಲ್ಲ. ಅವರು ಸಹ 100 ವರ್ಷಗಳ ಕಾಲ ಹಂತ ಹಂತವಾಗಿ ಕಳೆದ ನಂತರ ಅಧಿಕಾರಕ್ಕೆ ಬಂದಿದ್ದಾರೆ. ನಮಗೆ ಈಗ ಸೋಲಾಗಿರಬಹುದು ಮತ್ತೆ ನಾವು ಕೂಡಾ ಹಂತ ಹಂತವಾಗಿ ಜನರ ವಿಶ್ವಾಸ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಯತ್ನಿಸಲಾಗುವುದು. ಬಿಜೆಪಿಯವರು ದೇಶದಲ್ಲಿರುವ ಜನರಿಗೆ ಸುಳ್ಳುಗಳನ್ನು ಹೇಳುತ್ತಾ ಅಧಿಕಾರಿಕ್ಕೆ ಬಂದಿದ್ದಾರೆ. ಆದರೆ ನಮ್ಮ ಪಕ್ಷ ಸತ್ಯ ಹೇಳಿ ಬರುವ ಚುನಾವಣೆಗಳಲ್ಲಿ ಬದಲಾವಣೆ ಮಾಡಲು ಪ್ರಯತ್ನಿಸಲಾಗುವುದು ಎಂದರು.

ಇದೇ ವೇಳೆ ಮಾ.31ರೊಳಗಾಗಿ 50 ಲಕ್ಷ ಸದಸ್ಯತ್ವ ಗುರಿ ಮುಟ್ಟುವ ಅಗತ್ಯವಿದೆ. ಈ‌ ‌ನಿಟ್ಟನಲ್ಲಿ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡಬೇಕು. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸದಸ್ಯತ್ವ ಅಭಿಯಾನ ನಡೆಯಬೇಕಿದೆ. ಮನೆಯಲ್ಲಿನ ಜನರು ಕೆಲಸಗಳಿಗೆ ಹೋದರು ಕಾಯ್ದು ನೋಂದಣಿ ಮಾಡಿಸಬೇಕು. ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ತಳಮಟ್ಟದಿಂದ ಕಟ್ಟಬೇಕಾಗಿದೆ. ನಮಗೆ ಇನ್ನೂ ಕಾಲಾವಕಾಶವಿದೆ. ಸ್ವಲ್ಪ ಶ್ರಮ %LS

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button