ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸವದತ್ತಿ ಪಟ್ಟಣದಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಸ್ಪಿ ಭೀಮಾಶಂಕರ ಗುಳೇದ ಪತ್ರಕರ್ತರಿಗೆ ಈ ಕುರಿತು ಮಾಹಿತಿ ನೀಡಿದರು.
ಸವದತ್ತಿಯ ಸಂಗಪ್ಪನ ಕೊಳ್ಳ ಸಮೀಪ, ದಿ.24-8-2023ರಂದು ನಿರ್ಜನವಾದ ಗುಡ್ಡಗಾಡು ಪ್ರದೇಶದಲ್ಲಿ ಅಶೋಕ ಬಸಪ್ಪಾ ಬಾಗೇವಾಡಿ ಎಂಬುವವರು ಸವದತ್ತಿ ಶಾಂತಿ ನಗರದಿಂದ-ಸವದತ್ತಿ ಪಟ್ಟಣದತ್ತ ಬೈಕ್ ನಲ್ಲಿ ತೆರಳುತ್ತಿದ್ದಾಗ ದರೋಡೆಕೋರರ ಗ್ಯಾಂಗ್ ಬೈಕ್ ಅಡ್ಡಗಟ್ಟಿ ಚಾಕೂ ತೋರಿಸಿ, ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಚೈನ್, ಬಂಗಾರದ ಕೈ ಖಡಗ ಹಾಗೂ ವಿವೋ ಕಂಪನಿಯ ಮೊಬೈಲನ್ನು ದೋಚಿಕೊಂಡು ಪರಾರಿಯಾಗಿತ್ತು.
ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಅಶೋಕ್ ಬಸಪ್ಪಾ ದೂರು ದಾಖಲಿಸಿದ್ದರು. ಇದೀಗ ಪ್ರಕರಣ ಸಂಅಬ್ಂಧ ಸವದತ್ತಿ ಪೊಲಿಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹ್ಮದ ಇಮಾಮಸಾಬ ಕಲ್ಲೇದ ಸವದತ್ತಿಯ ಶಾಂತಿ ನಗರ, ಲಿಂಗಸಗೂರಿನ ಮುತ್ತಣ್ಣಾ ಯಲ್ಲಪ್ಪಾ ಗುತ್ತೆದಾರ, ರಾಂಪುರದ ಲಾಲಸಾಬ ದಾವಲಸಾಬ, ಇಬ್ರಾಹಿಂ ಅಕ್ಬರ ಕುಡಚಿ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಬಂಗಾರದ ೫೮ ಗ್ರಾಂ ಚೈನ್, ೩೫ ಗ್ರಾಂ ೧೦೦ ಮೀಲಿ ಬಂಗಾರ ಕೈ ಖಡಗ, ಅಪರಾಧ ಸ್ಥಳದಲ್ಲಿಂದ ಬಂಗಾರದ ಚೈನದ ಲಾಕೇಟ್, ೨ ಗ್ರಾಂ ೧೦೦ ಮೀಲಿ ಅ.ಕಿ. ೧೩,೧೬೫/- ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ದರೋಡೆಗೆ ಬಳಕೆ ಮಾಡಿದ ಟಂ ಟಂ ಆಟೋ ರಿಕ್ಷಾ, ಬೈಕ್ , ನಾಲ್ಕು ಮೊಬೈಲಗಳು ಹೀಗೆ ಒಟ್ಟು ೮,೬೮,೧೬೫/- ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ