Latest

ಗ್ರಾಮಗಳ ಅಭಿವೃದ್ಧಿಗೆ ರೋಟರಿ ಸಂಸ್ಥೆಯ ಕೊಡುಗೆ ಅಪಾರ: ಸಂಗ್ರಾಮ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸೌಲಭ್ಯ ವಂಚಿತ ಕುಗ್ರಾಮವನನ್ನು ಮಾದರಿ `ಸೌರ’ಗ್ರಾಮವನ್ನಾಗಿ ಪರಿವರ್ತನೆ ಮಾಡಿದ ಬೆಳಗಾವಿಯ ರೋಟರಿ ಸಂಸ್ಥೆಯು ಅಭಿನಂದನೀಯ ಎಂದು ರೋಟರಿ ಜಿಲ್ಲಾ 3170 ಗವರ್ನರ್ ರೊ. ಸಂಗ್ರಾಮ ಪಾಟೀಲ ಅಭಿಪ್ರಾಯ ಪಟ್ಟರು.

130 ಮನೆಗಳನ್ನು ಹೊಂದಿದ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಇವೆ ಆದರೆ ತಿಂಗಳಾನುಗಟ್ಟಲೇ ವಿದ್ಯುತ್ ಸರಬರಾಜು ಇಲ್ಲದೆ ಮಕ್ಕಳ ಅಭ್ಯಾಸ, ರಹವಾಸಿಗಳ ಕಷ್ಟಗಳನ್ನು ಪರಿಹರಿಸಲು ಸೆಲ್ಕೊ ಸೋಲಾರ್ ಪೈ.ಲಿ.ಮತ್ತು ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ರೋಟರಿ ಕ್ಲಬ್ ಈ ಯೋಜನೆಯನ್ನು ಲೋಕಾರ್ಪಣೆ ಮಾಡಲು ನನಗೆ ಹೆಮ್ಮೆ ವಿಷಯ ಎಂದರು.

ಇಂತಹ ಕುಗ್ರಾಮಗಳನ್ನು ರೋಟರಿ ಕ್ಲಬ್ ನವರು ದತ್ತಕ ಪಡೆದು ಸರ್ವತೋಮುಖ ಅಭಿವೃದ್ಧಿ ಮಾಡಲು ಮುಂದೆ ಬಂದಲ್ಲಿ ರೋಟರಿ ಜಿಲ್ಲಾ ನಿಧಿಯಿಂದ ಆರ್ಥಿಕ ಸಹಾಯ ಮಾಡುವದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೆಲ್ಕೊ ಸೋಲಾರ್ ಸಂಸ್ಥೆಯ ಡೆಪುಟಿ ಜನರಲ್ ಮ್ಯಾನೇಜರ್ ಶ್ರೀ ಪ್ರಸನ್ನ ಹೆಗಡೆ ಮಾತನಾಡುತ್ತಾ ಅರಣ್ಯ ಪ್ರದೇಶದಲ್ಲಿರುವ ಚಾಪೆÇೀಲಿ ಗ್ರಾಮ ಮಳೆಗಾಲದಲ್ಲಿ ನಾಲ್ಕು ತಿಂಗಳು ಸಮರ್ಪಕ ವಿದ್ಯುತ್ ಪೂರೈಕೆ ಇರುತ್ತಿರಲಿಲ್ಲ. ಸೆಲ್ಕೊ ಸಂಸ್ಥೆ ಗ್ರಾಮಸ್ಥರಿಗೆ ಸೌರವಿದ್ಯುತ್ತ ಮತ್ತು ಜೀವನ ಆಧಾರದ ಬಗ್ಗೆ ಮಾಹಿತಿ ನೀಡಿ ಬೆಳಕಿನ ಸ್ವಾವಲಂಬನೆ ಪಡೆಯುವಂತೆ ಪ್ರೇರಣೆ ನೀಡಿತು. ಆದರೆ ಇದಕ್ಕೆಲ್ಲ ಹಣ ವಿನಿಯೋಗಿಸಲು ಗ್ರಾಮಸ್ಥರಿಗೆ ಸಾದ್ಯವಾಗಿರಲಿಲ್ಲ.ಸಮಸ್ಯೆ ಅರಿತ ಬೆಳಗಾವಿ ರೋಟರಿ ಮಿಡ್ ಟೌನ್ ಆರ್ಥಿಕ ಸಹಾಯ ಮಾಡಿದ್ದನ್ನು ನೆನಸಿಕೊಂಡರು.

ಫಲಾನುಭವಿ ಸುರೇಖಾ ನಾಯ್ಕ ಮಾತನಾಡುತ್ತಾ ನನಗೆ ಸೋಲಾರ್ ಆಧಾರಿತ ಹೊಲಿಗೆ ಯಂತ್ರ ಪಡೆದು ಜೀವನ ನಿರ್ವಹಣೆ ಮಾಡುತ್ತಿದ್ದೇನೆ.ರೋಟರಿ, ಸೆಲ್ಕೊ,ಸಂಸ್ಥೆ ಗಳು ಜನರ ಪಾಲಿಗೆ ಆದರ್ಶವಾಗಿವೆ ಅಂತಾ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಹಕಾರ ನೀಡಿದ ಗ್ರಾಮದ ಶ್ರೀ ಕಾಶಿನಾಥರವರನ್ನು ಸತ್ಕರಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಮಿಡ್ ಟೌನ್ ಅದ್ಯಕ್ಷರಾದ ಅಶೋಕ ಕೋಳಿಯವರು ಮುಂಬರುವ ದಿನಗಳಲ್ಲಿ ಬೆಳಗಾವಿ ತಾಲೂಕಿನ “ಅಮಗಾಂವ” ಕುಗ್ರಾಮವನ್ನು ದತ್ತಕ ಪಡೆದು ಅಭಿವೃದ್ಧಿ ಪಡಿಸಲಾಗುವದು ಅಂತಾ ಹೇಳಿದರು.

ಈ ಯೋಜನೆಗೆ ಮುಖ್ಯ ಕಾರಣರಾದ ಹಿಂದಿನ ರೋಟರಿ ಅದ್ಯಕ್ಷರಾದ ಅಶೋಕ ಮಳಗಲಿಯರನ್ನು ಸನ್ಮಾನಿಸಲಾಯಿತು.ವೇದಿಕೆಯ ಮೇಲೆ ರೋಟರಿ ಸಹಾಯಕ ಗವರ್ನರ್ ಡಾ. ಮನೋಜ ಸುತಾರ.ಸೆಲ್ಕೊ ಫೌಂಡೇಶನ್ ದ ರಾಜೇಂದ್ರ ಗೀತೆ ,ರೋಟರಿ ಕಾರ್ಯದರ್ಶಿ ನಾಗೇಶ ಮೋರೆಯವರು ವಂದನಾರ್ಪಣೆ ಮಾಡಿದರು. ಮನೋಹರ ಜರತಾರಕರ ನಿರೂಪಿಸಿದರು. ಅಶೋಕ ಬಾದಾಮಿ, ಗುಲಾಬಚಂದ ಚೌಗಲೆ,ಗಿರೀಶ್ ಕತ್ತಿಶೆಟ್ಟಿ,ನಾಗೇಂದ್ರ ಭೊಸಲೆ,ಪ್ರಕಾಶ ಡೋಲೆಕರ,ಡಾ. ಮನೋಹರ ಚೌಗಲೆ,ವಿನಾಯಕ ಹೆಗ್ಡೆ, ಆನಂದ,ಸಂಜಯ ಹಾಗೂ ಇತರರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button