Kannada NewsLatest

ತೊಟ್ಟಿಲು ತೂಗುವ `ಕೈ’ ಇಂದು ಜಗತ್ತನ್ನು ಆಳಬಲ್ಲದು: ಸುಜನ್ ಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇಲ್ಲಿನ ಮಹಾತ್ಮಫುಲೆ ರಸ್ತೆಯ ವಿಜಯಲಕ್ಷ್ಮಿ ಕಾರ್ಯಾಲಯದಲ್ಲಿ ಶಿವಗಿರಿ ಕೋ ಆಪ್ ಕ್ರೆಡಿಟ್ ಸೊಸೈಟಿ ಹಾಗೂ ಬಿಲ್ಲವರ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ, ಮಹಿಳಾ ದಿನಾಚರಣೆಯನ್ನು ಆಚರಿಸಿ, ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯಧನವನ್ನು ನೀಡಲಾಯಿತು.

ಸೊಸೈಟಿಯ ಅಧ್ಯಕ್ಷರಾದ ಸುಜನ್ ಕುಮಾರ್ ಅವರು ಮಾತನಾಡಿ, ತೊಟ್ಟಿಲು ತೂಗುವ `ಕೈ’ ಇಂದು ಜಗತ್ತನ್ನು ಆಳಬಲ್ಲಳು ಎಂದು ನಿರೂಪಿಸಿದ್ದಾಳೆ. ಹೆಣ್ಣು ಮಕ್ಕಳಿಗೆ ಸಹಕಾರ ನೀಡಿ ಬೆಳೆಯುವ ಪ್ರಯತ್ನ ಮಾಡಬೇಕಿದೆ. ಕಷ್ಟದಲ್ಲಿರುವ ಮಹಿಳೆಯರಿಗೆ ಶಿವಗಿರಿ ಸೊಸೈಟಿಯಿಂದ ಕೈಲಾದಷ್ಟು ಸಹಾಯ ಮಾಡಲಾಗಿದೆ. ಮಹಿಳೆಯರು ಬೆಳೆದರೆ ದೇಶವೇ ಬೆಳೆದಂತೆ ಎಂದರು.

ಮಹಿಳೆಯರಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನೇತ್ರಾವತಿ ಸಬ್ನಿಸ್, ವಿಜಯಲಕ್ಷ್ಮಿ, ಪ್ರದೀಪ್ ಪೂಜಾರಿ ತೀರ್ಪುಗಾರರು ಬಹುಮಾನ ವಿತರಿಸಿದರು. ಈ ವೇಳೆಯಲ್ಲಿ ಸಮಾಜ ಸೇವಕಿ ರೇಣುಕಾ ಬಸವರಾಜ್ ಪೂಜಾರಿ ಯವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೋಟೆಲ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ಸಾಲಿಯಾನ್ ಮಹಿಳಾ ಮಂಡಳಿಯ ಮುಖ್ಯಸ್ಥ ಚಂದ್ರಾವತಿ ಪೂಜಾರಿ ಹಾಗೂ ಇತರರು ಇದ್ದರು. ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿವರ್ಗ, ಬಿಲ್ಲವ ಸಂಘದ ಸದಸ್ಯರು ಹಾಜರಿದ್ದರು. ಚಂದ್ರ ಪೂಜಾರಿ ನಿರೂಪಿಸಿದರು. ಸಂತೋಷ ಪೂಜಾರಿ ವಂದಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button