*ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 51ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕಕಲ್ಯಾಣಾರ್ಥವಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ 51ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಸಪ್ತಪದಿ ಫೌಂಡೇಷನ್ ಮೈಸೂರು/ ಬೆಂಗಳೂರು, ವಿಶ್ವ ಮಧ್ವ ಮಹಾಪರಿಷತ್, ಬೆಳಗಾವಿ ಘಟಕ,ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜ, ಶ್ರೀ ಶಂಕರಾ ಚಾರ್ಯ ಸೇವಾ ಸಮಿತಿ,ಬೆಳಗಾವಿ ಜಿಲ್ಲಾ ಬ್ರಾಹ್ಮಣ ವಿವಿಧ ಸಂಘಟನೆಗಳ ಸಂಯುಕ್ತಾ ಆಶ್ರಯದಲ್ಲಿ 2-12-23 ಶನಿವಾರ ಹಾಗೂ 3-12-23 ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ 51ನೇ ರಾಜ್ಯ ಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣಾ ಸಮಾವೇಶ ಹಾಗೂ ಶೀಘ್ರ ಮೇವ ಕಲ್ಯಾಣ ಪ್ರಾಪ್ತಿಗಾಗಿ 3-12-23ರ ಸಂಜೆ 3ಘಂಟೆಗೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು ನಗರದ ಶ್ರೀ ಸತ್ಯಪ್ರಮೋದ ಕಲ್ಯಾಣ ಮಂಟಪ ಬೆಳಗಾವಿಯಲ್ಲಿ ಆಯೋಜಿಸಲಾಗಿದೆ.
ಜನದಟ್ಟಣೆ ತಡೆಯುವ ಉದ್ದೇಶದಿಂದ ಬೆಳಗಾವಿ ಸುತ್ತಮುತ್ತಲಿನ ಆಸಕ್ತ ವಧು-ವರರು ದಿನಾಂಕ 25-11-23 ರಿಂದ 1-12-23ರ ವರಗೆ 1ಪೋಸ್ಟ್ ಕಾರ್ಡ್ ಸೈಜ್ ಫೋಟೊ,1ಜಾತಕ,1 ಬಯೋಡಾಟಾದೊಂದಿಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಸ್ಥಳ ಶ್ರೀ ಸತ್ಯ ಪ್ರಮೋದ ಕಲ್ಯಾಣ ಮಂಟಪ ಬೆಳಗಾವಿ. ವಿಪ್ರ ಬಾಂಧವರು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆಸಿಕೊಳ್ಳಬೇಕೆಂದು ಬೆಳಗಾವಿ ಬ್ರಾಹ್ಮಣ ಸಂಘಟನೆಗಳ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ವಿಪ್ರ ಮುಖಂಡರಾದ ಎಸ್. ಎಂ.ಕುಲಕರ್ಣಿ,ಶ್ರೀಧರ್ ಹುಕ್ಕೇರಿ,ಪ್ರಿಯಾ ಪುರಾಣಿಕ್ ಶೀರಿಷ್ ಪಾಂಡುರಂಗ ಕಾನೆಟ್ಕರ,ರಾಕೇಶ್ ದೇಶಪಾಂಡೆ,ಅನಂತ ಚಿಂಚನಿ,ಮಾಲತೇಶ್ ಪಾಟೀಲ್, ಶ್ರೀನಿವಾಸ್ ಭಾರದ್ವಾಜ್ ಮುಂತಾದವರು ಭಾಗವಹಿಸಿದ್ದರು. ಮಾಹಿತಿಗಾಗಿ 94494 255 36/821787 6335 ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ