Belagavi NewsBelgaum NewsKannada NewsKarnataka NewsLatest

*ಬೆಳಗಾವಿ ನಗರದಲ್ಲಿ ಸಂಚಾರ ಮಾರ್ಗ ಬದಲಾವಣೆ*

ನಾಳೆ ಬೆಳಗಾವಿಗೆ ಸಿಎಂ ಸಿದ್ದರಾಮಯ್ಯ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಳಗಾವಿ ನಗರ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಅ.3ರಂದು ನಾಳೆ ಸಿಎಂ ಸಿದ್ದರಾಮಯ್ಯ ಬೆಳಾವಿಯ ನೆಹರು ಕ್ರೀಡಾಂಗಣದಲ್ಲಿ ನಡೆಯುವ “ಅಖಿಲ ಭಾರತೀಯ ರಾಷ್ಟ್ರೀಯ ಕುರುಬರ ಸಮಾವೇಶ ಮತ್ತು 9ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶ ಹಾಗೂ ರಾಷ್ಟ್ರೀಯ ಸನ್ಮಾನ ಕಾರ್ಯಕ್ರಮ” ದಲ್ಲಿ ಭಾಗವಹಿಸಲು ಬೆಳಗಾವಿ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಪ್ರವಾಸ ಕಾರ್ಯಕ್ರಮದ ಸಮಯದಲ್ಲಿ ದಿನಾಂಕ: 03/10/2023 ರಂದು ಬೆಳಗ್ಗೆ 07:00 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಮಾರ್ಗಗಳನ್ನು ಬದಲಾಯಿಸಲಾಗಿತ್ತಿದೆ.

ಸಾರ್ವಜನಿಕರು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಲು ಕೋರಲಾಗಿದೆ.

  1. ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಸಂಕೇಶ್ವರ, ಯಮಕನಮರ್ಡಿ, ಕಾಕತಿ ಕಡೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳು ರಾಷ್ಟ್ರೀಯ ಹೆದ್ದಾರಿ-48 ರ ಮುಖಾಂತರ ನಿಸರ್ಗ ಢಾಬಾ ಎದುರಿಗಿನ ಸರ್ವಿಸ್ ರಸ್ತೆ ಮೂಲಕ ಶ್ರೀನಗರ ಗಾರ್ಡನ್, ಶಿವಬಸವನಗರ ರಸ್ತೆಯಲ್ಲಿ, ಜನರನ್ನು ಇಳಿಸಿ, ಮರಳಿ ನಿಸರ್ಗ ದಾಬಾ, ಕೆಎಲ್ಇ ಛತ್ರಿ, ಹಿಂಡಾಲ್ಕೋ ಅಂಡರ್‌ ಬ್ರಿಡ್ಜ್ ಮೂಲಕ ಹಿಂಡಾಲ್ಕೋ ಮೈದಾನದಲ್ಲಿ ನಿಲುಗಡೆ ಮಾಡುವುದು,
  2. ಗೋಕಾಕ, ಕಣಬರ್ಗಿ ಕಡೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳು

ಕನಕದಾಸ ಸರ್ಕಲ್‌, ಅಶೋಕ ನಗರ ಮೂಲಕ ಎಸ್‌.ಜಿ.ಬಾಳೆಕುಂದ್ರಿ ಇಂಜನಿಯರಿಂಗ್ ಕಾಲೇಜ್ ಮೈದಾನದಲ್ಲಿ ವಾಹನಗಳನ್ನು ನಿಲುಗೊಸುವುದು.

  1. ಬಾಗಲಕೋಟ, ರಾಮದುರ್ಗ, ಯರಗಟ್ಟಿ ಕಡೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಕನಕದಾಸ ವೃತ್ತ, ಅಶೋಕ ನಗರ, ಶಿವಬಸವ ನಗರ, ಕೆಪಿಟಿಸಿಎಲ್ ಕಲ್ಯಾಣ ಮಂಟಪ ಮಾರ್ಗವಾಗಿ

ಕೆಪಿಟಿಸಿಎಲ್‌ ಪಾರ್ಕಿಂಗ್‌ ನಲ್ಲಿ ವಾಹನಗಳನ್ನು ನಿಲುಗಡೆಗೊಳಿಸುವುದು.

  1. ವೆಂಗುರ್ಲಾ, ಸಾವಂತವಾಡಿ, ಸುಳಗಾ ಕಡೆಗಳಿಂದ ಸಮಾರಂಭಕ್ಕೆ ಬರುವ ಸಾರ್ವಜನಿಕರು ಹಿಂಡಲಗಾ

ಫಾರೆಸ್ಟ್‌ ನಾಕಾ, ಬಾಕ್ಸೈಟ್ ರಸ್ತೆ ಹಿಂಡಲಗಾ ಗಣೇಶ ಮಂದಿರ, ಗಾಂಧಿ ಸರ್ಕಲ್, ಹನುಮಾನ ನಗರ ರಸ್ತೆ ಮೂಲಕ ನೆಹರು ನಗರ, ರೆಡ್ಡಿ ಭವನ ಹತ್ತಿರ ಮೈದಾನದಲ್ಲಿ

ವಾಹನಗಳನ್ನು ನಿಲುಗಡೆಗೊಳಿಸುವುದು:

  1. ಖಾನಾಪೂರ, ಕಾರವಾರ, ಹಳಯಾಳ ಮಾರ್ಗವಾಗಿ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳು ಸರದಾರ ಮೈದಾನದಲ್ಲಿ ನಿಲುಗಡೆಗೊಳಿಸುವುದು.
  2. ಚಿಕ್ಕೋಡಿ, ನಿಪ್ಪಾಣಿ, ಯರಗಟ್ಟಿ, ಬಾಗಲಕೋಟ, ವಿಜಯಪೂರ, ಗೋಕಾಕ ಕಡೆಗೆ ಸಂಚರಿಸುವ ಹಾಗೂ ಒಳ ಬರುವ ಕೆಎಸ್‌‌ಆರ್ ಟಿಸಿ ಬಸ್ಸುಗಳು ಕಿಲ್ಲಾ ಕೆರೆ ಅಶೋಕ ವೃತ್ತ, ಲೇಕ್‌ವಿವ್‌ ಆಸ್ಪತ್ರೆ, ಕನಕದಾಸ ಸರ್ಕಲ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಸೇರಿ ಸಂಚರಿಸುವುದು.
  3. ಹುಬ್ಬಳ್ಳಿ, ಧಾರವಾಡ, ಬೈಲಹೊಂಗಲ, ಸವದತ್ತಿ, ಕಿತ್ತೂರ ಹಿರೇಬಾಗೇವಾಡಿ ಕಡಗೆ ಸಂಚರಿಸುವ

ಹಾಗೂ ಒಳಬರುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಹಾಗೂ ಇನ್ನಿತರ ಎಲ್ಲ ವಾಹನಗಳು ಹಳೆ ಪಿ.ಬಿ. ರಸ್ತೆ,
ಅಲಾರವಾಡ ಸರ್ವಿಸ್ ರಸ್ತೆ ಮುಖಾಂತರ ರಾಷ್ಟ್ರೀಯ ಹೆದ್ದಾರಿ 48 ಕ್ಕೆ ಸೇರಿ ಸಂಚರಿಸುವುದು.

  1. ಖಾನಾಪುರ ಕಡೆಗೆ ಸಂಚರಿಸುವ ಕೆಎಸ್‌ಆರ್‌ಟಿಸಿ, ಬಣ್ಣುಗಳು, ಕೇಂದ್ರ ಬಸ್ ನಿಲ್ದಾಣ ಸರ್ಕಲ್ (ಮಾರ್ಕೆಟ್ ಪೊಲೀಸ್ ಠಾಣೆ), ಸಂಗೋಳ್ಳಿ ರಾಯಣ್ಣ ವೃತ್ತ, ಚನ್ನಮ್ಮ ಸರ್ಕಲ್, ಕಾಲೇಜ್, ರಸ್ತೆ ಮೂಲಕ ಸಂಚರಿಸುವುದು,
  2. ಕೆಎಲ್‌ಇ ಆಸ್ಪತ್ರೆಗೆ ಬರುವ ತುರ್ತು ಅಂಬ್ಯೂಲನ್ಸ್ ವಾಹನಗಳಗೆ ಕೆಎಲ್ಇ ರಸ್ತೆ ಹಾಗೂ ಕೊಲ್ಲಾಪೂರ ಸರ್ಕಲ್‌ ಮೂಲಕ ಸಂಚರಿಸಲು ಅವಕಾಶ ಕಲ್ಪಸಲಾಗುವುದು ಎಂದು ಬೆಳಗಾವಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button