*ಎಸ್ ಪಿ ಫೋನ್ ಇನ್ ನಲ್ಲಿ ಒಟ್ಟು 83 ಕರೆಗಳು; ಫೋನ್ ಮಾಡಿ ಸಮಸ್ಯೆ ಹೇಳಿ ಪರಿಹಾರ ಕಂಡುಕೊಂಡ ಜನರು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯ ಪೊಲೀಸ್ ಇಲಾಖೆ ಸಭಾಂಗಣದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 83 ಕರೆಗಳು ಬಂದಿದ್ದು, ಫೋನ್ ಮಾಡಿ ಸಾರ್ವಜನಿಕರು ತಮ್ಮ ಸಮಸ್ಯೆ ತೋಡಿಕೊಂಡಿದ್ದಾರೆ.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಸರಾಯಿ, ಮಟ್ಕಾ, ಜೂಜಾಟ ತಡೆಗಟ್ಟುವುದು, ಸಂಚಾರ ಸಮಸ್ಯೆ, ಬೈಕ್ ಸವಾರರಿಂದ ಕರ್ಕಶ ಶಬ್ಧ, ಜಮೀನು ವಿವಾದ, ಕೌಟುಂಬಿಕ ಸಮಸ್ಯೆ, ಅಕ್ರಮ ಮರಳು ಸಾಗಾಟ ಪ್ರಕರಣಗಳಿಗೆ ಸಂಬಂದಿಸಿದಂತೆ ಹಲವು ವಿಚರಗಳ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಸಮಸ್ಯೆ ತಿಳಿಸಿದ್ದಾರೆ. ಹೊರ ಜಿಲೆಗಳಿಂದಲೂ ಹಲವು ಕರೆಗಳು ಬಂದಿವೆ.
ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯ ಸಭಾಂಗಣದಲ್ಲಿ 18ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಸಂಜೀವ ಪಾಟೀಲ ನೇತೃತ್ವದ ತಂಡದ ಎದುರು ಕರೆ ಮಾಡಿ ಜನರು ಸಮಸ್ಯೆ ಹೇಳಿ ಪರಿಹಾರ ಕಂಡುಕೊಂಡರು.
ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ 24 ಗಂಟೆಗಳ ಕಾಲ ಸರಾಯಿ ಅಂಗಡಿ ತೆರದಿರುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದೂರಿದರು. ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮ ಜಮೀನು ವ್ಯಾಜ್ಯ, ಬೈಲಹೊಂಗಲ ಪಟ್ಟಣದಲ್ಲಿ ನನ್ನ ತಾಯಿ ಕಡೆಯಿಂದ ಒಂದೂವರೆ ಲಕ್ಷ ರೂ. ಹೆಚ್ಚುವರಿ ಹಣ ಪಡೆದಿದ್ದಾರೆ. ಆ ಹಣ ಮರಳಿ ಕೊಡಿಸುವಂತೆ ಎಸ್ಪಿಗೆ ವ್ಯಕ್ತಿಯೊರ್ವ ಕರೆ ಮಾಡಿ ದೂರಿದರು.
ಯರಗಟ್ಟಿ ತಾಲೂಕಿಮ ಬೂದಿಗೊಪ್ಪ ಗ್ರಾಮದ ವ್ಯಕ್ತಿಯೊರ್ವ ಕರೆ ಮಾಡಿ, ಗ್ರಾಮದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮೆರೆಯುತ್ತಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಬೈಕ್ ಸವಾರರು ಕರ್ಕಶ ಶಬ್ಧ ಮಾಡಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.
ರಾಯಬಾಗ ತಾಲೂಕಿನಲ್ಲಿ ಮಟ್ಕಾ ಹಾಗೂ ಜೂಜಾಟದ ಹಾವಳಿ ಹೆಚ್ಚಾಗಿದೆ. ಬುಕ್ಕಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊರ್ವ ಕರೆ ಮಾಡಿ ದೂರಿದರು.
ಗೋಕಾಕ ಪಟ್ಟಣದಲ್ಲಿ ಸೊಸೈಟಿಯವರು 50 ಸಾವಿರ ರೂ ವಂಚನೆ ಮಾಡಿದ್ದಾರೆ. ಈ ಕುರಿತು ದೂರು ಕೊಡಲು ಹೋದರು ಪೊಲೀಸರು ಪ್ರಕರಣ ದಾಖಲಿಸಲು ಹಿಂದೆಟ್ಟು ಹಾಕುತ್ತಿದ್ದಾರೆ ಎಂದು ದೂರಿದರು.
ಬೈಲಹೊಂಗಲ ತಾಲೂಕಿನ ಗುರಗುಂದ ಗ್ರಾಮ ಮಸೀದಿಯ ಹಿಂಬದಿಯಲ್ಲಿ ಇಸ್ಪೀಟು ಅಡ್ಡಾ ಮಾಡಿಕೊಂಡಿದ್ದಾರೆ. ಅಲ್ಲಿ ದಾಳಿ ಮಾಡುವಂತೆ ಕರೆ ಮಾಡಿ ವ್ಯಕ್ತಿಯೊರ್ವ ದೂರಿದರು.
ನಗರದ ಭಾಗ್ಯ ನಗರದ ಹಿರಿಯ ನಾಗರಿಕರು ಕರೆ ಮಾಡಿ, ಬಿದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಹಾನಗರ ಪಾಲಿಕೆಯವರಿಗೆ ಹಲವಾರು ಬಾರಿ ದೂರು ನೀಡಿದರೂ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಯಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಪಾಲಿಕೆಯ ಅಧಿಕಾರಿಗಳಿಗೆ ಬಿದಿ ನಾಯಿಗಳಿಗೆ ಕಡಿವಾಣ ಹಾಕುವಂತೆ ತಿಳಿಸಿ ಎಂದರು.
ಬೆಳಗಾವಿ ನಗರದ ಶಹಾಪುರ, ಎಪಿಎಂಸಿ, ಮಾರ್ಕೇಟ್, ಬೆಳಗಾವಿ ಗ್ರಾಮೀಣ, ಟಿಳಕವಾಡಿ, ಬಾಗಲಕೋಟ ಹಾಗೂ ಹುಬ್ಬಳ್ಳಿಯಿಂದಲೂ ಜನರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.
ಸಾರ್ವಜನಿಕರ ಎಲ್ಲ ಕರೆಗಳನ್ನು ನಮಸ್ಕಾರ್ರೀ ನಾನ ಎಸ್ಪಿ ಮಾತಾಡೋದು ಏನಿದೆ ನಿಮ್ಮ ಸಮಸ್ಯೆ ಎನ್ನುತ್ತಲೆ ಬಂದ ಕರೆಗಳಿಗೆ ಸ್ಪಂದಿಸಿ ಜನರ ಕಷ್ಟಗಳನ್ನು ಆಲಿಸಿದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ, ಡಿವೈಎಸ್ಪಿ ವೀರೇಶ ದೊಡಮನಿ, ಸಿಪಿಐಗಳಾದ ಬಿ.ಆರ್.ಗಡ್ಡೇಕರ, ಮಹಾದೇವ ಎಸ್.ಎಂ. ಬಾಳಪ್ಪ ತಳವಾರ, ಪೊಲೀಸ್ ಸಿಬ್ಬಂದಿಗಳಾದ ಶ್ರೀಶೈಲ ಬಳಿಗಾರ, ವಿಠ್ಠಲ್ ಮಾದರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ