Latest

ಬೆಳಗಾವಿಯಲ್ಲಿ 3ದಿನ ಅದ್ಧೂರಿ ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ; 1100 ಕ್ರೀಡಾಪಟುಗಳು ಭಾಗಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ಬೆಳಗಾವಿ ಅರಣ್ಯ ವೃತ್ತದ ಬೆಳಗಾವಿ ವಿಭಾಗದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾನ್, ನವೆಂಬರ್ 23-24- 25ರಂದು ಮೂರು ದಿನ ರಾಜ್ಯದ 13ಅರಣ್ಯ ವೃತ್ತಗಳ ಮತ್ತು 1ಟ್ರೇನಿಂಗ್ ಅಕಾಡೆಮಿಯ ಒಟ್ಟು 14 ಅರಣ್ಯ ಯುನಿಟ್ ಗಳ ಸಿಬ್ಬಂಧಿ ಅಧಿಕಾರಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇಲಾಖೆಯ ಅಧಿಕಾರಿ/ ಸಿಬ್ಬಂದಿ ಒಟ್ಟು 1100 ಕ್ರೀಡಾಪಟುಗಳು ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. 900 ಜನ ಪುರುಷ ಕ್ರೀಡಾಪಟುಗಳು, 200 ಜನ ಮಹಿಳಾ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ( VTU) ಕ್ಯಾಂಪಸ್ ನಲ್ಲಿ ಮತ್ತು ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿ ಮೂರು ದಿನ ಕ್ರೀಡೆಗಳು ನಡೆಯಲಿವೆ.

ಇಲಾಖೆಯ ಸಿಪಾಯಿ/ ಪಾರೆಸ್ಟರ್ ನಿಂದ ಹಿಡಿದು ಇಲಾಖೆಯ ಮುಖ್ಯಸ್ಥರಾದ ಪಿಸಿಸಿಎಫ್ ವರೆಗೂ ಎಲ್ಲ ರ್ಯಾಂಕ್ ಅಧಿಕಾರಿಗಳು ಕ್ರೀಡೆಯಲ್ಲಿ ಭಾಗವಹಿಸುವರು ಎಂದರು.

Home add -Advt

ಇದೇ ಸಂದರ್ಭ ಕ್ರೀಡಾಕೂಟದ ‘ಲೋಗೊ’ವನ್ನು ಸಿಸಿಎಫ್ ಇದೇ ಸಂದರ್ಭ ಬಿಡುಗಡೆಗೊಳಿಸಿದರು.

ರಾಜ್ಯಮಟ್ಟದ ಅರಣ್ಯ ಕ್ರೀಡಾಕೂಟ ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನಲೆಯಲ್ಲಿ ನಗರದಲ್ಲಿ ಸಂಭ್ರಮ ಮೇರೆ ಮೀರಿದೆ. ಬೆಳಗಾವಿ ಅರಣ್ಯ ವೃತ್ತದ ಡಿಸಿಎಫ್ ಗಳಾದ ಹರ್ಷ ಭಾನು, ಪಿಕೆಎಂ ಪ್ರಶಾಂತ, ಸಿ. ಜಿ. ಮಿರ್ಜಿ, ಅಂಥೋನಿ ಮರಿಯಪ್ಪ, ಎಸ್. ಕೆ. ಗೊರವರ, ಎಸಿಎಫ್ ಗಳಾದ ಸುನಿತಾ ನಿಂಬರಗಿ, ಎಂ. ಬಿ.ಕುಸನಾಳ, ಶಿವರುದ್ರಪ್ಪ ಕಬಾಡಗಿ ಇತರರು ಉಪಸ್ಥಿತರಿದ್ದರು.

ಆಟೋ ಸ್ಫೋಟ ಪ್ರಕರಣದಲ್ಲಿ ಉಗ್ರರ ಕರಿ ನೆರಳು; ಶಂಕಿತನ ಗುರುತು ಪತ್ತೆ

https://pragati.taskdun.com/mangaloreauto-blast-casesuspectedfound/

Related Articles

Back to top button