Kannada NewsLatest
ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ವ್ಯಕ್ತಿ ಆತ್ಮಹತ್ಯೆ; ಗೋಕಾಕದಲ್ಲೊಂದು ಘೋರ ಘಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ತಲೆಯೊಡ್ದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ನಡೆದಿದೆ.
ಪಾಶ್ಚಾಪುರ-ಗೋಕಾಕ್ ರೈಲು ನಿಲ್ದಾಣಗಳ ಮಧ್ಯೆ ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ತಲೆಯೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ವ್ಯಕ್ತಿ 50 ವರ್ಷದ ಆಸುಪಾಸಿನವರು ಎನ್ನಲಾಗಿದೆ.
ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ವ್ಯಕ್ತಿ ಕೆಂಪು ಬಣ್ಣದ ಜಾಕೇಟ್, ಬಿಳಿ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ: ಜೈಲಿನಲ್ಲಿಯೇ ಅನುಮಾನಾಸ್ಪದ ಸಾವನ್ನಪ್ಪಿದ ಕೊಲೆ ಆರೋಪಿ




