Kannada NewsLatest

ತಾಯಿ ಮತ್ತು 3 ಮಕ್ಕಳು ನಾಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಿಳೆಯೊಬ್ಬರು ತಮ್ಮ ಮೂವರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ತಳಕಟ್ನಾಳ ಗ್ರಾಮದಲ್ಲಿ ನಡೆದಿದೆ.

32 ವರ್ಷದ ಪ್ರೇಮಾ ಅರ್ಜುನ ನಂದಿ ಎಂಬ ಮಹಿಳೆ ಮೇ 30ರಂದು ಮುಂಜಾನೆ 10 ಗಂಟೆಯ ಸುಮಾರಿಗೆ ಮನೆಯಿಂದ ಮೂವರು ಮಕ್ಕಳ ಜತೆ ಹೋದವರು ಈವರೆಗೆ ವಾಪಸ್ ಆಗಿಲ್ಲ. ಮಕ್ಕಳಾದ ಬಾಲಪ್ಪ(13), ಭೀಮಶಿ(10), ಉದಯ(6) ಎಂಬುವವರೊಂದಿಗೆ ನಾಪತ್ತೆಯಾಗಿದ್ದಾರೆ.

Home add -Advt

ನಾಪತ್ತೆ ಮಹಿಳೆ ಚಹರೆ: ನಾಪತ್ತೆ ಸಂದರ್ಭದಲ್ಲಿ ಹಳದಿ ಸೀರೆ ಕೆಂಪು ಜಂಪರ್ ತೊಟ್ಟಿದ್ದ ಮಹಿಳೆ 4 ಅಡಿ 8 ಇಂಚು ಎತ್ತರ ಸಾದಾಗಪ್ಪು ಮೈ ಬಣ್ಣ ಹಾಗೂ ಸದೃಢ ಮೈಕಟ್ಟು ಹೊಂದಿರುವ ಮಹಿಳೆ ಕನ್ನಡ ಬಲ್ಲವರಾಗಿದ್ದಾರೆ.

ಮಹಿಳೆ ಮತ್ತು ಮಕ್ಕಳ ಸುಳಿವು ಸಿಕ್ಕವರು ತಕ್ಷಣವೇ ಕುಲಗೋಡು ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08334-222233ನ್ನು ಸಂಪರ್ಕಿಸಬಹುದು ಎಂದು ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

ಪರಿಷತ್ ಚುನಾವಣೆ: ಅಂತಿಮ ಮತದಾನದ ಮಾಹಿತಿ ಇಲ್ಲಿದೆ

Related Articles

Back to top button