*ಬೆಳಗಾವಿ: ಮನೆಗಳ್ಳನ ಬಂಧನ; 7 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಶಹರ ಹಾಗೂ ಸುತ್ತ ಮುತ್ತ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪರಶುರಾಮ ಈರಪ್ಪಾ ದಂಡಗಲ (32) ಬಂಧಿತ ಆರೋಪಿ. ಬೆಳಗಾವಿ ಶಹಾಪೂರದ ಲಕ್ಷ್ಮೀ ನಗರ ನಿವಾಸಿ. ವಿಚಾರಣೆ ವೇಳೆ ಆರೊಪಿ ಮನೆಗಳ್ಳತನವನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಸುಮಾರು 7,00,000/- ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸ್ನೇಹಾ. ಪಿ. ವಿ. ಮಾರ್ಗದರ್ಶನದಲ್ಲಿ, ಎಸಿಪಿ ಮಾರ್ಕೆಟ ಸದಾಶಿವ ಕಟ್ಟಿಮನಿ ರವರ ಉಸ್ತುವಾರಿಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಪಿಐ ಜೆ. ಎಮ್. ಕಾಲಿಮಿರ್ಚಿ ಇವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಮಾಡಿದೆ.
ಕಾರ್ಯಾಚರಣೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಪಿಎಸ್ ಐ ಶ್ರೀಶೈಲ್ ಹುಳಗೇರಿ, ಸಿಬ್ಬಂದಿಗಳಾದ ಎಮ್.ಜಿ.ಕುರೇರ, ಸಿ.ಜೆ.ಚಿನ್ನಪ್ಪಗೋಳ, ಬಿ.ಎಫ್.ಬಸ್ತವಾಡ, ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ವಿ.ಎಸ್.ಹೊಸಮನಿ, ರವಿ ಬಾರಿಕರ, ಎಮ್.ಆರ್.ಮುಜಾವರ, ತಾಂತ್ರಿಕ ವಿಭಾಗದ ಸಿಬ್ಬಂದಿಯಾದ ರಮೇಶ ಅಕ್ಕಿ, ಮಹಾದೇವ ಕಾಸೀದ ಹಾಗೂ ಬೆರಳು ಮುದ್ರೆ ತಜ್ಞರಾದ ತಬ್ರೇಜ್ ಬಾಗವಾನ ಪಿಎಸ್.ಐ. ಮತ್ತು ಬಾಹುಬಲಿ ಎ ಅನಗಾಲೆ ಪಾಲ್ಗೊಂಡಿದ್ದರು. ಮಾಳಮಾರುತಿ ಠಾಣೆ ಪೊಲೀಸರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ