ಪ್ರಗತಿವಾಹಿನಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಖಾಸಗಿ ಸಂಚಾರ ಸಾರಿಗೆ ವಾಹನಗಳಲ್ಲಿ ಪ್ರಯಾಣಿಕರನ್ನು ಕುರಿ ಮಂದೆಯಂತೆ ತುಂಬುವುದರ ವಿರುದ್ಧ ಪೊಲೀಸರು ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.
ಮಂಗಳವಾರ ಒಂದೇ ದಿನ ಇಂಥಹ 88 ವಾಹನಗಳನ್ನು ಹಿಡಿದು ಒಟ್ಟು 17 ಸಾವಿರಕ್ಕೂ ಹೆಚ್ಚು ದಂಡ ಹಾಕಲಾಗಿದೆ.
ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಬಾರದೆಂದು ಮೋಟಾರು ವಾಹನ ಕಾಯ್ದೆಯಿದ್ದರೂ ಕೆಲ ಖಾಸಗಿ ವಾಹನದವರು ವಾಹನಕ್ಕೆ ನೀಡಿರುವ ಅನುಮತಿಗಿಂತ ದುಪ್ಪಟ್ಟು ಪ್ರಯಾಣಿಕರನ್ನು ತುಂಬುತ್ತಾರೆ. ಇದರಿಂದ ವಾಹನಗಳು ಅಪಘಾತಕ್ಕೀಡಾಗಿ ಜನರ ಜೀವಕ್ಕೆ ಅಪಾಯವುಂಟಾಗುವ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದ ಪೊಲೀಸರು, ಅನುಮತಿಗಿಂತ ಹೆಚ್ಚು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ 45 ವಾಹನಗಳನ್ನು ಹಿಡಿದು 9000 ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಅನುಮತಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ 43 ವಾಹನಗಳನ್ನು ಹಿಡಿದು 8600 ರೂ. ದಂಡ ವಿಧಿಸಿದ್ದಾರೆ.
BJP ಶಾಸಕರ ತಾಯಿಯ ಕಿವಿ ಕತ್ತರಿಸಿ ಓಲೆ ಕಿತ್ತುಕೊಂಡು ಪರಾರಿಯಾದ ಕಳ್ಳರು
https://pragati.taskdun.com/latest/bjp-mla-pradeep-chudarymother-attacktheafts/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ