Cancer Hospital 2
Bottom Add. 3

*ವಿ ಟಿ ಯು ನಲ್ಲಿ ಎ ಐ ಯು ದಕ್ಷಿಣ ವಲಯ ಕುಲಪತಿಗಳ ಎರಡು ದಿನಗಳ ಸಮ್ಮೇಳನ ಸಂಪನ್ನ*

ಇಂದಿನ ಉನ್ನತ ಶಿಕ್ಷಣ ಸಂಸ್ಥೆಗಳು ಡಿಜಿಟಲ್ ಪರಿವರ್ತನೆಗೆ ಒಳಗಾಗುವುವದು ಅತಿ ಅವಶ್ಯ: ರಾಜ್ಯಪಾಲ ಗೆಹಲೋಟ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ಕೇಂದ್ರ ಕಛೇರಿ ಬೆಳಗಾವಿಯಲ್ಲಿ ದಿನಾಂಕ 26 ಮತ್ತು 27-10-2023 ರಂದು ಎರಡು ದಿನಗಳ ಕಾಲ ದಕ್ಷಿಣ ವಲಯದ ಭಾರತೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನ ಆಯೋಜಿಸಲಾಗಿತ್ತು  ಸದರಿ ಸಮ್ಮೇಳನದ ಸಮಾರೋಪ  ಸಮಾರಂಭವನ್ನು ದಿನಾಂಕ ೨೭ ರಂದು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭಕ್ಕೆ ರಾಜ್ಯದ ರಾಜ್ಯಪಾಲರು ಹಾಗೂ ವಿ ಟಿ ಯು ಕುಲಾಧಿಪಾತಿಗಳಾದ ಶ್ರೀ ಥಾವರ್ ಚಂದ್ ಗೆಹ್ಲೂಟ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮಾತನಾಡುತ್ತಾ AIU ಕಾರ್ಯವನ್ನು ಶ್ಲಾಘಿಸುತ್ತ ಡಿಜಿಟಲ್ ಪರಿವರ್ತನೆ ನಮ್ಮ ಜೀವಿತಾವಧಿಯ ಅತ್ಯಂತ ಮಹತ್ವದ ಬದಲಾವಣೆ ಮತ್ತು ಅಭಿವೃದ್ಧಿಯಾಗಿದೆ ಎಂದು ಹೇಳಿದರು. ರಾಷ್ಟ್ರದಲ್ಲಿ ಆದ ಡಿಜಿಟಲ್ ಬದಲಾವಣೆ ಜಾಗತಿಕವಾಗಿ ಹೆಸರು ಮಾಡಿದ್ದು ರಾಷ್ಟ್ರದ ಅಭಿವೃದ್ಧಿಯಲ್ಲಿ ಹಾಗೂ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದಕ್ಕೆ ಇನ್ನೂ ಬಲಿಷ್ಠವಾಗಿಸಲು ವೋಕಲ್ ಫಾರ್ ಲೋಕಲ್, ಮೆಕ್ ಇನ್ ಇಂಡಿಯಾ ಹಾಗೂ ಇನ್ನಿತರ ಪ್ರಮುಖ ಯೋಜನೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಮಾಡಬೇಕಿದೆ. ಇದಕ್ಕೆ ಅವಶ್ಯ ಇರುವ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಕೆಲಸವನ್ನು ಇಂದಿನ ವಿಶ್ವವಿದ್ಯಾಲಯಗಳು ನೀಡಬೇಕು ಜೊತೆಗೆ ಇಂದಿನ ವಿವಿಗಳು ತಮ್ಮ ಆಡಳಿತ ಮತ್ತು  ಶೈಕ್ಷಣಿಕ ಕ್ಷೇತ್ರದಲ್ಲಿ ಡಿಜಿಟಲ್‌ ಪರಿವರ್ತನೆಗೆ ಅವಶ್ಯಕತೆ ಇರುವ ಸಂಪನ್ಮೂಲಗಳಗಳನ್ನು ಅಳವಡಿಸಿಕೊಂಡು  ಜಾಗತಿಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂದು ಹೇಳಿದರು.

AIU ಅಧ್ಯಕ್ಷ  ಪ್ರೊ ಜಿ ಡಿ ಶರ್ಮಾ ಅವರು ಮಾತನಾಡುತ್ತಾ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಶೇ 50 ಕ್ಕೆ ಹೆಚ್ಚಿಸುವ ಗುರಿಯನ್ನು ಸಾಧಿಸುವತ್ತ ಎಲ್ಲ ವಿ ವಿಗಳು ಗುರಿ ಹೊಂದಬೇಕು ಇದರಲ್ಲಿ ವಿ ವಿ ಗಳು ಹೆಚ್ಚಿನ ಗಮನ ಕೊಡಬೇಕಾಗಿದ್ದು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಸೆಳೆಯಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ ಎಸ್ ಸ್ವಾಗತಿಸಿದರು, AIU ಕಾರ್ಯದರ್ಶಿ ಶ್ರೀ ಪಂಕಜ ಮಿತ್ತಲ್ ಎರಡು ದಿನಗಳ ಈ ಸಮ್ಮೇಳನದ ಬಗ್ಗೆ ಮಾತನಾಡಿದರು. ಎ ಐ ಯು ನ್ಯೂಸ್ ಲೆಟರ್ ಸಂಪಾದಕಿ ಡಾ. ಎಸ ರಾಮ ದೇವಿ ಪಾನಿ ವಂದಿಸಿದರು. ಬೆಳಗಾವಿಯ ಮರಾಠ ಮಂಡಲ್ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಡಿ ಜಿ ಕುಲಕರ್ಣಿ ವರದಿ ವಾಚಿಸಿದರು  

ಈ ಸಂದರ್ಭದಲ್ಲಿ ಭಾರತದ ದಕ್ಷಿಣ ವಲಯದ ವಿವಿಗಳ ೮೦ಕ್ಕು ಹೆಚ್ಚಿನ ಕುಲಪತಿಗಳು, ವಿ ಟಿ ಯು ಸಂಯೋಜಿತ ಕಾಲೇಜುಗಳ ಪ್ರಾಚಾರ್ಯರು,   ವಿ ಟಿ ಯು ಮೌಲ್ಯಮಾಪನ ಕುಲಸಚಿವರಾದ ಪ್ರೊ ಟಿ ಏನ್ ಶ್ರೀನಿವಾಸ್,  ಹಣಕಾಸು ಅಧಿಕಾರಿ ಶ್ರೀಮತಿ ಎಂ. ಎ. ಸಪ್ನಾ  ವಿ ಟಿ ಯು ಸಿಬ್ಬಂದಿ ಹಾಜರಿದ್ದರು.

Bottom Add3
Bottom Ad 2

You cannot copy content of this page