ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಅಕ್ರಮ ಮದ್ಯ ಸಾಗಾಟ ಜೋರಾಗಿದ್ದು, 232 ಲೀಟರ್ ಮದ್ಯವನ್ನು ಪೊಲೀಸರು ಸೀಜ್ ಮಾಡಿರುವ ಘಟನೆ ಟಿಳಕವಾಡಿಯಲ್ಲಿ ನಡೆದಿದೆ.
ಇಲ್ಲಿನ ನೆಹರು ರಸ್ತೆಯ ಸಿಟಿಸಿ ಜಿ-5 ಕ್ಲಾಸಿಕ್ ಶ್ರೀನಿವಾಸ ಮೇಡವ್ಸ್ ಅಪಾರ್ಟ್ ಮೆಂಟ್ ಗ್ರೌಂಡ್ ಫ್ಲೋರ್‌ನಲ್ಲಿ ಡಿಫೆನ್ಸ್ ಮದ್ಯವನ್ನು ಮಾರಾಟಕ್ಕಾಗಿ ಸಂಗ್ರಹಿಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮದ್ಯ ಸಾಗಾಣಿಕೆಗೆ ಬಳಸುತ್ತಿದ್ದ ದ್ವಿಚಕ್ರ ವಾಹನ 232.500 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಓರ್ವನನ್ನು ಬಂಧಿಸಿದ್ದಾರೆ.
ಶಾಮ್ ಗಂದೆ ರಂಗಣ್ಣ ರೆಡ್ಡಿ (52)ಬಂಧಿತ ಆರೋಪಿ. ನ್ಯಾಯಾಲಯಕ್ಕೆ ಹಾಜರಪಡಿಸಲಾಗಿದೆ.
ಡಾ: ವೈ.ಮಂಜುನಾಥ, ಅಬಕಾರಿ ಅಪರ ಆಯುಕ್ತರು, (ಅಪರಾಧ) ಬೆಳಗಾವಿ ಕೇಂದ್ರಸ್ಥಾನ ಬೆಳಗಾವಿ, ಜಯರಾಮೇಗೌಡ ಎಂ.ಡಿ. ಅಬಕಾರಿ ಉಪ ಆಯುಕ್ತರು, ಬೆಳಗಾವಿ ದಕ್ಷಿಣ ಜಿಲ್ಲೆ, ಇವರ ಮಾರ್ಗದರ್ಶನದಲ್ಲಿ ಹಾಗೂ ಸಿ.ಎಸ್.ಪಾಟೀಲ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗ ಇವರ ನೇತೃತ್ವದಲ್ಲಿ ಮಂಜುನಾಥ ಮೆಳ್ಳಿಗೇರಿ, ಅಬಕಾರಿ ನಿರೀಕ್ಷಕರು, ಬೆಳಗಾವಿ ವಲಯ-2 ಹಾಗೂ ಸಿಬ್ಬಂಧಿಗಳಾದ ಅಬಕಾರಿ ಉಪ ನಿರೀಕ್ಷಕರಾದ ಆರ್.ಎಂ.ನಧಾಫ್. ಮತ್ತು ಸಿಬ್ಬಂಧಿಗಳಾದ ಸಂತೋಷ ದೊಡ್ಡಮನಿ,ಆರ್.ತಿಗಡಿ, ಆನಂದಪಾಟೀಲ್, ವಿನಾಯಕ ಬೋರಣ್‌ನವರ್ ಧಾಳಿಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಯಾಗಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ