Kannada NewsLatest

ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರಿಂದ ಮಾರುತಿ ಸ್ತೊತ್ರ, ಹನುಮಾನ ಚಾಲೀಸಾ ಪಠಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದು ಧರ್ಮ ಸಂಸ್ಕೃತಿ ಉಳಿಸುವ ಕಾರ್ಯ ನಿರಂತರವಾಗಿ ಮಾಡುತ್ತಿರುವ ವಿಶ್ವ ಹಿಂದು ಪರಿಷತ್ ಬಜರಂಗದಳ ಹಿಂದೂ ಯುವಕರಲ್ಲಿ ಸೇವಾ ಸುರಕ್ಷಾ ಸಂಸ್ಕಾರ ಕೊಡುವ ಚಿಂತನೆಯಿಂದ ಶ್ರಾವಣ ಮಾಸದ ಪವಿತ್ರದಿನದ ಶನಿವಾರ ಹನುಮ ದೇವರ ಸ್ತೋತ್ರ, ಪಠಣಗಳ ಮೂಲಕ ವಿಶೇಷ ಪೂಜೆ ಸಲ್ಲಿಸಿತು.

ಹನುಮಂತನ ಆದರ್ಶ, ಪ್ರಭು ಶ್ರೀ ರಾಮನಲ್ಲಿ ಹನುಮನಿಗೆ ಇರುವ ಭಕ್ತಿ, ಹನುಮನ ಬ್ರಮ್ಹಚರ್ಯ, ಧೈರ್ಯ,ಸಾಹಸ ಮೈಗೂಡಿಸಕೊಳ್ಳುವ ಪ್ರವೃತ್ತಿ ಹೆಚ್ಚಿಸುವ ಚಿಂತನೆಯೊಂದಿಗೆ ಕಾರ್ಯಕರ್ತರು ಮಜಗಾವ ಬ್ರಮ್ಹ ನಗರ ಮಾರುತಿ ಮಂದಿರದಲ್ಲಿ ಮಾರುತಿ ಸ್ತೊತ್ರ, ಹನುಮಾನ ಚಾಲೀಸಾ,ಹದಿಮೂರು ಸಾರಿ ಶ್ರೀ ರಾಮ ಜೈ ರಾಮ ಪಠಣ, ವಿಶ್ವ ಹಿಂದು ಪರಿಷತ್ ಜಯಘೋಷ ,ಆರತಿ ಮಾಡಿದರು.

ಅಲ್ಲಿಂದ ಬೈಕ್ ರ್ಯಾಲಿ ಮುಖಾಂತರ ಹಬ್ಬಾನಟ್ಟಿ ಮಲಪ್ರಭಾ ನದಿಯಲ್ಲಿ ಉಧ್ಬವ ಪ್ರಸಿದ್ಧ ಹನಮನ ಮಂದಿರದಲ್ಲಿ ಭಕ್ತಿಯಿಂದ 95ಕ್ಕೂ ಹೆಚ್ಚು ಬಜರಂಗಿಗಳಿಂದ ಮತ್ತೆ ಮಂತ್ರ ಪಠಣ ಆರತಿ ಬೆಳಗಲಾಯಿತು. ಬಂದ ಎಲ್ಲಾ ಯುವಕರಲ್ಲಿ ಒಂದು ಅವಸ್ಮರೀಣೀಯ ಧನ್ಯತಾಬಾವ ಮತ್ತು ಈ ದೇಶದ ಬಗ್ಗೆ ಏನಾದರೂ ಮಾಡಬೇಕೆಂಬ ತವಕ ಎದ್ದು ಕಾಣುತಿತ್ತು.

ನಂತರ ಹಬ್ಬಾನಟ್ಟಿ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯಿಂದ ಬಂದ ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕದ ವಿಶ್ವ ಹಿಂದು ಪರಿಷತ್ ಸಂಘಟನಾ ಮಂತ್ರಿ ಮಾಬಲೇಶ್ವರಜೀ ಮಾತನಾಡುತ್ತಾ, ಇವತ್ತು ಯುವಕರ ಅವಶ್ಯಕತೆ ದೇಶಕ್ಕೆ ತುಂಬಾ ಇದೆ. ಅವರು ಬಜರಂಗದಳದ ಧ್ಯೇಯದ ಮೂಲಕಲ್ಪನೆ ಸೇವಾ ಸುರಕ್ಷಾ ಮತ್ತು ಸಂಸ್ಕಾರ ಮೈಗೂಡಿಸಿಕೊಂಡು ಹೆಚ್ಚೆಚ್ಚು ಜನರು ಪಾಲ್ಗೊಳ್ಳಬೇಕು. ಯುವತಿಯರಲ್ಲೂ ಜಾಗೃತಿ ಮೂಡಿಸಿ ದುರ್ಗಾವಾಹಿನಿ ಕೂಡ ತಯಾರು ಮಾಡಬೇಕು ಎಂದು ಕರೆ ನೀಡಿದರು.

ಡಾ ತಮ್ಮಣ್ಣ ಸಾಂಬ್ರೆಕರ ಈ  ಪುಣ್ಯ ಕಾರ್ಯಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು. ವಿಜಯ ಕನಸ್ಟ್ರಕ್ಷನ್ ಮಾಲಕರಾದ ವಿಜಯ ಪಾಟೀಲ,ಶ್ರೀ ಶ್ರೀಮಂತ ಧನಘರ ಉದ್ಯೋಗಪತಿ, ಬಸವರಾಜ ಯರಗಣವಿ ವಕೀಲರು ಮುಂತಾದವರು ಆರತಿ ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಯಘೋಷದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

ಟೋಕಿಯೋ ಪ್ಯಾರಾಲಿಂಪಿಕ್ಸ್; ಭಾರತಕ್ಕೆ ಮತ್ತೊಂದು ಚಿನ್ನ; ಬೆಳ್ಳಿ ಪದಕ ಗೆದ್ದ ಕನ್ನಡಿಗ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button