ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳಗಾವಿ ಜಿಲ್ಲೆವತಿಯಿಂದ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.
ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಪೂಜೆ ನೆರವೇರಿಸುವ ಮೂಲಕ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುಸಿದ್ದ ಮಹಾಸ್ವಾಮೀಜಿ, ಆಂಬುಲೆನ್ಸ್ ಸೇವೆ ಈ ಸಂದರ್ಭದಲ್ಲಿ ಬಹಳ ಅವಶ್ಯವಿದ್ದು ಸಮಾಜ ಸದುಪಯೋಗ ಪಡೆಯಬೇಕು ಮತ್ತು ಮಹಾಮಾರಿಯ ಇಂಥ ಕಷ್ಟದ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ತಮ್ಮ ಜೀವದ ಹಂಗು ತೊರೆದು ಈ ಸೇವೆಯನ್ನು ಮಾಡುತ್ತಿರುವುದು ಆದರ್ಶ ಪ್ರಾಯವಾದದ್ದು ಎಂದರು.
ವಿಶ್ವ ಹಿಂದೂ ಪರಿಷತ್ ಗೆ ಸಂತಮಹಂತರ ಆಶೀರ್ವಾದ ಸದಾ ಇರುತ್ತದೆ. ಎಲ್ಲ ಪದಾಧಿಕಾರಿಗಳು ಈ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡಲು ಭಗವಂತ ಶಕ್ತಿ ನೀಡಲೆಂದು ಆಶೀರ್ವದಿಸಿದರು.
ಇದೇ ವೇಳೆ ಪ್ರಾಂತ ಸಹ ಕೋಶಾಧ್ಯಕ್ಷರಾದ ಕೃಷ್ಣಭಟ್ ಇವರು ಕೂಡ ಅಮೂಲ್ಯ ಸೇವೆಯನ್ನು ಪ್ರಾಮಾಣಿಕವಾಗಿ ಅಂತಃಕರಣ ದಿಂದ ನಮ್ಮ ಕಾರ್ಯಕರ್ತರು ಮಾಡಬೇಕೆಂದು ತಿಳಿಸಿದರು.
ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ವಿಜಯ್ ಜಾಧವ್ ಅವರು ಕೂಡ ಎಲ್ಲರೂ ತನು-ಮನ-ಧನಸಹಾಯದೊಂದಿಗೆ ಸಮಾಜದ ಸೇವೆಯನ್ನು ಪ್ರಾಮಾಣಿಕವಾಗಿ ಮಾಡೋಣ ಎಂದುರು.
ಬೆಳಗಾವಿ ಜಿಲ್ಲೆಯ ಬಜರಂಗದಳ ವಿಶ್ವ ಪರಿಷತ್ ಪದಾಧಿಕಾರಿಗಳಾದ ವಿಭಾಗ ಕಾರ್ಯದರ್ಶಿ ಅಚ್ಚುತ್ ಕುಲಕರ್ಣಿ, ನಗರ ಅಧ್ಯಕ್ಷರಾದ ಬಸವರಾಜ ಬಾಗೋಜಿ, ನಗರ ಕಾರ್ಯದರ್ಶಿ ಹೇಮಂತ, ಜಿಲ್ಲಾ ಸಂಯೋಜಕ ಭಾವಕಣ ಲೋಹಾರ್, ನಗರ ಸಂಯೋಜಕ ಆದಿನಾಥ್ ಗಾವ ಡೇ, ಶ್ರೀಬಸವರಾಜ್ ಹಳಿಂಗಳಿ, ಸತೀಶ್ ಮಾಳವದೆ, ಅರ್ಜುನ್ ರಜಪೂತ್, ಶಾಮ್. ಬ ಟುಲಕರ, ರವಿ ಕಲಘಟಗಿ, ವಿನಾಯಕ ಪರಿಟ್, ನರೇಶ್ ಶಿಂಧೆ, ಸದಾಶಿವು ಹಿರೇಮಠ್ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು
ಕಿತ್ತೂರಿನಲ್ಲಿ ನಕಲಿ ರಸಗೊಬ್ಬರ ಮಾರಾಟದ ಮೇಲೆ ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ