

ಪ್ರಗತಿವಾಹಿನಿ ಸುದ್ದಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಓರ್ವ ಮಹಿಳೆಯನ್ನು ಕೊಲೆ ಮಾಡಿದ ಘಟನೆ ಸುರೇಬಾನ ಪೊಲೀಸ್ ಠಾಣೆ ವ್ಯಾಪ್ತಿಯ ಕಲಹಾಳ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕೊಲೆಗಿಡಾದ ಮಹಿಳೆ ಅದೆ ಕಲಹಾಳ ಗ್ರಾಮದ ಶೇಖವ್ವ ನಾಗಪ್ಪ ಮಾದರ (೪೫) ಎಂದು ಗುರುತಿಸಲಾಗಿದೆ. ಕೊಲೆಮಾಡಿದ ಆರೋಪಿ ಕಲಹಾಳ ಗ್ರಾಮದ ಮಂಜುನಾಥ ಯಲ್ಲಪ್ಪ ಮಾದರ (೨೫) . ಕೊಲೆ ಬಳಿಕ ಸುರೇಬಾನ ಪೊಲೀಸ್ ಠಾಣೆಗೆ ತರಳಿ ಶರಣಾಗಿದ್ದಾನೆ
ಕೊಲೆಮಾಡಿದ ಆರೋಪಿ ಕಲಹಾಳ ಗ್ರಾಮದ ಮಂಜುನಾಥ ಯಲ್ಲಪ್ಪ ಮಾದರ ಕೊಲೆಗಿಡಾದ ಮಹಿಳೆಯ ಸಂಬಂಧಿಕ. ರುದ್ರಪ್ಪ ಎಂಬ ವ್ಯಕ್ತಿ ಎಂಟು ವರ್ಷಗಳ ಹಿಂದೆ ಸಂದೇಶ ಕಳುಹಿಸುತ್ತಿದ್ದನೆಂಬ ಕಾರಣಕ್ಕೆ ಈ ಎರಡು ಕುಟುಂಬಗಳ ಮಧ್ಯೆ ಜಗಳಗಳಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ.
ಮೃತ ಮಹಿಳೆ ತಿಂಗಳಿಗೊಮ್ಮೆ ರೇಷನ್ ತರಲೆಂದು ಬರುತಿದ್ದಳು. ಅದನ್ನೆ ಕಾಯುತ್ತಿದ್ದ ಆರೋಪಿ ಹೊಂಚುಹಾಕಿ ಕೊಲೆ ಮಾಡಿದ್ದಾನೆಂದು ತಿಳಿದು ಬಂದಿದೆ.
ಕೊಲೆಗಿಡಾದ ಮಹಿಳೆಯ ಗಂಡ ನಾಗಪ್ಪ ಮಾದರ ಕೆಲಸಕ್ಕೆಂದು ಹೋದಾಗ ಈ ದುರ್ಘಟನೆ ನಡೆದಿದೆ.
ಸುರೇಬಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ, ಸಿಪಿಐ ಐ.ಆರ್.ಪಟ್ಟಣಶೆಟ್ಟಿ ಪರಿಶೀಲನೆ ನಡೆಸಿದ್ದಾರೆ.